ಆತ್ರಾಡಿ ಮದಗದಲ್ಲಿ ತಾಯಿ, ಮಗಳ ಮೃತ ದೇಹ ಪತ್ತೆ: ಅಸಹಜ ಸಾವಿನ ಶಂಕೆ

ಉಡುಪಿ:  ಉಡುಪಿ ತಾಲೂಕಿನ ಆತ್ರಾಡಿ ಗ್ರಾ.ಪಂ ವ್ಯಾಪ್ತಿಯ ಮದಗದಲ್ಲಿ ತಾಯಿ ಮತ್ತು 10 ವರ್ಷದ ಮಗುವಿನ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೊಲೆಯಾದವರನ್ನು ಮದಗ ನಿವಾಸಿ 28 ವರ್ಷದ ಚೆಲುವಿ ಹಾಗೂ ಆಕೆಯ ಮಗಳು 10 ವರ್ಷದ ಪ್ರಿಯಾ ಎಂದು ಗುರುತಿಸಲಾಗಿದೆ. ಇವರ ಮೃತದೇಹ ಮನೆಯ ಕೋಣೆಯಲ್ಲಿ ಪತ್ತೆಯಾಗಿದ್ದು, ಬಾಯಿಯಲ್ಲಿ ರಕ್ತದ ಕಲೆಗಳು ಕಂಡು ಬಂದಿದೆ ಎನ್ನಲಾಗಿದೆ. ಮಣಿಪಾಲದ ಖಾಸಗಿ ಸಂಸ್ಥೆಯಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡಿದ್ದ ಚೆಲುವಿ, ಅವರ ಇಬ್ಬರು ಮಕ್ಕಳು ಮತ್ತು ತಾಯಿ ಮನೆಯಲ್ಲಿ […]

ಅಸ್ಥಿಪಂಜರವಾಗಿ ಪತ್ತೆಯಾದ 9 ತಿಂಗಳ ಹಿಂದೆ ನಾಪತ್ತೆಯಾದವ! ಸಾವಿನ ಸುತ್ತ ಸಂಶಯದ ಹುತ್ತ?

ಪೆರ್ಡೂರು: 9 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಪೆರ್ಡೂರು ಗ್ರಾಮದ ಪಕ್ಕಾಲು ಜಯಲಕ್ಷ್ಮೀ ಮನೆ ನಿವಾಸಿ 30 ವರ್ಷದ ನಾಗರಾಜ ಆಚಾರ್ಯ ಎಂಬವರ ಮೃತದೇಹವು ಅಸ್ಥಿಪಂಜರದ ಸ್ಥಿತಿಯಲ್ಲಿ‌ ಮನೆಯ ಸಮೀಪದ ಚೌಂಡಿ ನಗರದ ಕೇಶವ ಹೆಗ್ಡೆ ಅವರ ಹಾಡಿಯಲ್ಲಿ ಮೇ.7ರಂದು ಸಂಜೆ ಪತ್ತೆಯಾಗಿದೆ. ನಾಗರಾಜ ಆಚಾರ್ಯ 2021ರ ಆಗಸ್ಟ್ 11ರ ಬೆಳಿಗ್ಗೆ 8.30ರಿಂದ ಮನೆಯಿಂದ ಕಾಣೆಯಾಗಿದ್ದರು. ಮನೆಯವರು ಸಾಕಷ್ಟು ಹುಡುಕಾಡಿದರೂ ನಾಗರಾಜ ಪತ್ತೆಯಾಗಿರಲಿಲ್ಲ. ಈ ಬಗ್ಗೆ ಹಿರಿಯಡಕ ಠಾಣೆಯಲ್ಲಿ ನಾಪತ್ತೆ ಪ್ರಕರಣ ಕೂಡ ದಾಖಲಾಗಿತ್ತು. ನಿನ್ನೆ ಸಂಜೆ ಮೃತನ ಸಹೋದರ […]

ಪೆರ್ಡೂರು: ಬಸ್ ನಿರ್ವಾಹಕ ಕೊಲೆ ಪ್ರಕರಣ, ಮತ್ತೋರ್ವ ಆರೋಪಿ ಬಂಧನ

ಉಡುಪಿ: ಪೆರ್ಡೂರು ಸಮೀಪದ ಬೈರಂಪಳ್ಳಿ ದೂಪದಕಟ್ಟೆ ಹುಣ್ಸೆ ಬಾಕೇರ್ ನಿವಾಸಿ, ಬಸ್‌ ಕಂಡಕ್ಟರ್ ಪ್ರಶಾಂತ್ ಪೂಜಾರಿ (38) ಹತ್ಯೆ ಪ್ರಕರಣದ ಮತ್ತೋರ್ವ ಆರೋಪಿ ಅಲಂಗಾರು ಗರಡಿ ಸಮೀಪದ ನಿವಾಸಿ ಸಚಿನ್ ನಾಯ್ಕ (24) ಎಂಬಾತನನ್ನು ಹಿರಿಯಡಕ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಮೂರ್ಜೆ ಕ್ರಾಸ್‌ನಲ್ಲಿ ಈತನನ್ನು ವಶಕ್ಕೆ ಪಡೆಯಲಾಗಿದೆ. ಜುಲೈ.11ರಂದು ಮಧ್ಯರಾತ್ರಿ ಮನೆಯ ಆವರಣದಲ್ಲಿ ಕತ್ತಿಯಿಂದ ಕಡಿದು ಪ್ರಶಾಂತ್ ಪೂಜಾರಿ ಅವರನ್ನು ಕೊಲೆ ಮಾಡಲಾಗಿತ್ತು. ಪ್ರಕರಣದ ಬಂಧಿತ ಆರೋಪಿ ಕುಕ್ಕೆಹಳ್ಳಿ ಬುಕ್ಕಿಗುಡ್ಡೆ ನಿವಾಸಿ […]

ವಿನೋದ್ ಶೆಟ್ಟಿಗಾರ್ ಕೊಲೆ ಪ್ರಕರಣ: ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ 

ಉಡುಪಿ: ಕಳೆದ ಎಂಟು ವರ್ಷಗಳ ಹಿಂದೆ ಹಿರಿಯಡಕ ಸಮೀಪದ ಅಂಜಾರು ಜೈಲಿನಲ್ಲಿ ನಡೆದ ರೌಡಿ ಶೀಟರ್ ವಿನೋದ ಶೆಟ್ಟಿಗಾರ್ ಕೊಲೆ ಪ್ರಕರಣದ ನಾಲ್ವರು ಆರೋಪಿಗಳಿಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಇಂದು ಮಹತ್ವದ ತೀರ್ಪು ನೀಡಿದೆ. ಬ್ರಹ್ಮಾವರ ಬೈಕಾಡಿ ನಿವಾಸಿಗಳಾದ ಮುತ್ತಪ್ಪ (36), ನಾಗರಾಜ ಬಳೆಗಾರ (33), ಶೇಖ್ ರಿಯಾಜ್ ಅಹಮ್ಮದ್ (33) ಹಾಗೂ ಗಂಗಾವತಿ ಅಗೋಳಿ ನಿವಾಸಿ ಶರಣಪ್ಪ ಅಮರಾಪುರ(33) ಎಂಬುವವರನ್ನು ಶಿಕ್ಷೆಗೆ ಗುರಿಯಾದ ಆರೋಪಿಗಳೆಂದು ಗುರುತಿಸಲಾಗಿದೆ. ಕೊಲೆ ಪ್ರಕರಣದ […]

ರೌಡಿಶೀಟರ್ ವಿನೋದ್ ಶೆಟ್ಟಿಗಾರ್ ಕೊಲೆ ಪ್ರಕರಣದ ವಿಚಾರಣೆ ಪೂರ್ಣ: ನಾಲ್ಕು ಮಂದಿಯ ಆರೋಪ ಸಾಬೀತು, ನಾಳೆ ಶಿಕ್ಷೆ ಪ್ರಕಟ

ಉಡುಪಿ: ಕಳೆದ ಎಂಟು ವರ್ಷಗಳ ಹಿಂದೆ ಹಿರಿಯಡಕ ಸಮೀಪದ ಅಂಜಾರು ಜೈಲಿನಲ್ಲಿ ನಡೆದ ರೌಡಿ ಶೀಟರ್ ವಿನೋದ ಶೆಟ್ಟಿಗಾರ್ ಕೊಲೆ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ, ಆರು ಆರೋಪಿಗಳ ಪೈಕಿ ನಾಲ್ವರನ್ನು ದೋಷಿಗಳೆಂದು ಬುಧವಾರ ಆದೇಶ ನೀಡಿದೆ. ಬ್ರಹ್ಮಾವರ ಬೈಕಾಡಿ ನಿವಾಸಿಗಳಾದ ಮುತ್ತಪ್ಪ (36), ನಾಗರಾಜ ಬಳೆಗಾರ (33), ಶೇಖ್ ರಿಯಾಜ್ ಅಹಮ್ಮದ್ (33) ಹಾಗೂ ಗಂಗಾವತಿ ಅಗೋಳಿ ನಿವಾಸಿ ಶರಣಪ್ಪ ಅಮರಾಪುರ(33) ಆರೋಪ ಸಾಬೀತಾಗಿದ್ದು, ಕುಕ್ಕಿಕಟ್ಟೆ ಇಂದಿರನಗರ ನಿವಾಸಿ ರಾಘವೇಂದ್ರ (35) ಖುಲಾಸೆಗೊಂಡಿದ್ದಾನೆ. ಕೊಲೆ […]