ಮುನಿಯಾಲು ಗೋಧಾಮಕ್ಕೆ ಅಹಮದಾಬಾದ್‌ ಮಾಜಿ ಮೇಯರ್‌ ಗೌತಮ್‌ ಶಾ ಭೇಟಿ

ಹೆಬ್ರಿ: ಇಲ್ಲಿಗೆ ಸಮೀಪದ ಮುನಿಯಾಲು ಸಂಜೀವಿನಿ ಡೈರಿ ಮತ್ತು ಫಾರ್ಮ್ ಗೋಧಾಮಕ್ಕೆ ಅಹಮದಾ ಬಾದ್‌ ಮಾಜಿ ಮೇಯರ್‌ ಗೌತಮ್‌ ಶಾ ಭೇಟಿ ನೀಡಿ ಗೋಧಾಮವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಗೋಧಾಮವನ್ನು ಪುರಾತನ ಕಲ್ಪನೆಯಲ್ಲಿ ಆಧುನಿಕವಾಗಿ ನಿರ್ಮಿಸಿ ಕೃಷಿ, ಪ್ರವಾಸೋಧ್ಯಮ ತಾಣವಾಗಿ ನಿರ್ಮಿಸಿ ಅಂತರಾಷ್ಟ್ರೀಯ ಖ್ಯಾತಿ ನೀಡಿರುವುದಕ್ಕೆ ಖುಷಿ ಪಟ್ಟರು. ಬಳಿಕ ಗೋಧಾಮದಲ್ಲಿ ವಿಹಾರ ಮಾಡಿ ಗೋಪೂಜೆ ಸಲ್ಲಿಸಿದರು. ಭಾರತೀಯ ಗೋತಳಿಗಳ ಅಭಿವೃದ್ಧಿ ಕೇಂದ್ರ ಸಂಜೀವಿನಿ ಫಾರ್ಮ್ಸ್‌ ಮತ್ತು ಡೈರಿ ಗೋಧಾಮದ ಸಂಸ್ಥಾಪಕ ಡಾ.ಜಿ.ರಾಮಕೃಷ್ಣ ಆಚಾರ್‌ ಮತ್ತು ಸವಿತಾ […]

ಕೃಷಿಗೆ ಸಾಂಸ್ಥಿಕ ಸ್ಪರ್ಶ ನೀಡಿ ಮುನಿಯಾಲಿನ ಮಣ್ಣನ್ನು ಗೋಧಾಮದ ಮೂಲಕ ಪಾವನಗೊಳಿಸಿದ ರೀತಿ ಎಲ್ಲರಿಗೂ ಮಾದರಿ: ರಾಜಶೇಖರಾನಂದ ಸ್ವಾಮೀಜಿ

ಹೆಬ್ರಿ : ಆಧುನಿಕ ಯುಗದಲ್ಲೂ ಕೃಷಿಯ ಮೂಲಕ ಜೀವನವನ್ನು ನಡೆಸಬಹುದು ಎನ್ನುವ ಸಂದೇಶವನ್ನು ಜಗತ್ತಿಗೆ ಸಾರಿ, ಕೃಷಿಗೆ ಸಾಂಸ್ಥಿಕ ಸ್ಪರ್ಶ ನೀಡಿ ಮುನಿಯಾಲಿನ ಮಣ್ಣನ್ನು ಗೋಧಾಮದ ಮೂಲಕ ಪಾವನಗೊಳಿಸುವ ಮಹಾತ್ಕಾರ್ಯವನ್ನು ವಿಭಿನ್ನ ಯೋಚನೆ ಯೋಜನೆಯ ಸಾಧಕ ಗೋಧಾಮದ ಸಂಸ್ಥಾಪಕ ಡಾ.ಜಿ.ರಾಮಕೃಷ್ಣ ಆಚಾರ್‌ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು. ಅವರು ಭಾನುವಾರ ಮುನಿಯಾಲಿನಲ್ಲಿರುವ ಭಾರತೀಯ ಗೋತಳಿಗಳ ಅಭಿವೃದ್ಧಿ ಕೇಂದ್ರ ಸಂಜೀವಿನಿ ಫಾರ್ಮ್‌ ಮತ್ತು ಡೈರಿ ಗೋಧಾಮದಲ್ಲಿ […]

ಮುನಿಯಾಲು ಗೋಧಾಮದಲ್ಲಿ ತೆನೆ ತುಂಬಿ ತುಳುಕಾಡುತ್ತಿದೆ ಮೆಕ್ಕೆ ಜೋಳ: ಸಂಜೀವಿನಿ ಫಾರ್ಮ್ ನ ಅಪೂರ್ವ ಸಾಧನೆ

ಕಾರ್ಕಳ: ಹೆಬ್ರಿ ತಾಲೂಕಿನ ಮುನಿಯಾಲಿನಲ್ಲಿ ದೇಸೀ ತಳಿಗಳ ಅಭಿವೃದ್ದಿ ಕೇಂದ್ರ ಸಂಜೀವಿನಿ ಫಾರ್ಮ್ ಮತ್ತು ಡೈರಿಯ ಗೋಧಾಮದಲ್ಲಿ ತುಂಬಿ ತುಳುಕಿ ಬಳುಕಾಡುತ್ತಿದೆ ಮೆಕ್ಕೆಜೋಳ. ಮೂಲತಃ ಮಲೆನಾಡಿನಲ್ಲಿ ಬೆಳೆಯಲಾಗುವ ಮೆಕ್ಕೆ ಜೋಳವನ್ನು ಪಾರಂಪರಿಕ ಕ್ರಮದಲ್ಲಿ ಇದೇ ಮೊದಲ ಬಾರಿಗೆ ಮುನಿಯಾಲಿನಲ್ಲಿ ಬೆಳೆಯಲಾಗಿದೆ. ಗೋಧಾಮದ 6 ಎಕರೆ ಜಾಗದಲ್ಲಿ ದೇಸೀ ಗೋವುಗಳ ಸೆಗಣಿ ಗೊಬ್ಬರ, ಜೀವಾಮೃತ ಮತ್ತು ವರ್ಮಿ ಕಾಂಪೋಸ್ಟ್ ಬಳಸಿ ರಾಸಾಯನಿಕಗಳಿಲ್ಲದೆ ಸಾವಯವ ಮೆಕ್ಕೆ ಜೋಳವನ್ನು ಬೆಳೆದು ಸಂಜೀವಿನಿ ಫಾರ್ಮ್ಸ್ ಸೈ ಎನಿಸಿಕೊಂಡಿದೆ. ಜಾನುವಾರು ಸಾಕಣೆ ಮತ್ತು ಕೃಷಿಯಲ್ಲಿ […]