ಮರಗಳ್ಳರಿಗೆ, ಕಾಡು ದೋಚುವವರಿಗೆ ಸಿಂಹಸ್ವಪ್ನರಾಗಿರುವ ದಕ್ಷ ಅರಣ್ಯಾಧಿಕಾರಿ ಮುನಿರಾಜ್ ಅವರಿಗೆ ಮುಖ್ಯಮಂತ್ರಿ ಪದಕ

ಬೆಂಗಳೂರು: 2018-19 ಸಾಲಿನ ಅರಣ್ಯ ಸಂರಕ್ಷಣೆ ವಿಭಾಗದಲ್ಲಿ  ಮುಖ್ಯಮಂತ್ರಿ ಪದಕವನ್ನು ದಕ್ಷ ಅರಣ್ಯಾಧಿಕಾರಿ, ಈ ಹಿಂದೆ ಹೆಬ್ರಿ ಅರಣ್ಯಾಧಿಕಾರಿಯಾಗಿ ಮರಗಳ್ಳರಿಗೆ ಸಿಂಹಸ್ವಪ್ನರಾಗಿದ್ದ ಮುನಿರಾಜ್ ಅವರಿಗೆ ನೀಡಲಾಗಿದೆ. ಶಿರಸಿ ಸಮೀಪದ ಅರಣ್ಯ ಇಲಾಖೆಯ ವ್ಯಾಪ್ತಿಯ 500 ಎಕರೆ ಒತ್ತುವರಿ ತೆರವು, ದೊಡ್ಡಬಳ್ಳಾಪುರ 400 ಎಕರೆ ಜಾಗವನ್ನು ಒತ್ತುವರಿ ತೆರವುಗೊಳಿಸಿ ಭ್ರಷ್ಟ ರಾಜಕಾರಣಿಗಳಿಗೆ, ಮರಗಳ್ಳರಿಗೆ  ಸಿಂಹಸ್ವಪ್ನವಾಗಿ ಕಾಡುತ್ತಿದ್ದವರು ಮುನಿರಾಜ್.ಇದೀಗ ಈ ದಕ್ಷ ಅಧಿಕಾರಿಯ ಸಾಧನೆ ಗುರುತಿಸಿ ಮುಖ್ಯಮಂತ್ರಿ ಪದಕವನ್ನು ಅರಣ್ಯ ಅಧಿಕಾರಿಗೆ ಮೊದಲನೆಯ ಬಾರಿ ನೀಡಲಾಗಿದೆ. ವಿಧಾನ ಸೌದದ ಬಾಂಕ್ವೆಟ್ […]