ಸಾಗರವನ್ನು ಸ್ವಚ್ಛವಾಗಿಡುವುದೆಂದರೆ ಸಾಗರ ಜೀವಿಗಳನ್ನು ಸುರಕ್ಷಿತವಾಗಿಡುವುದೆಂದರ್ಥ: ಡಾ. ಉದಯ ಶೆಟ್ಟಿ
ಮಲ್ಪೆ: ಸಾಗರವನ್ನು ಸ್ವಚ್ಛವಾಗಿರಿಸುವ ಮೂಲಕ ಸಮುದ್ರದಲ್ಲಿನ ಜೀವಿಗಳ ಸಂರಕ್ಷಣೆ ಮಾಡುವುದರ ಜೊತೆಗೆ ಜನರ ಆರೋಗ್ಯವನ್ನು ಕಾಪಾಡುವುದು ‘ಸ್ವಚ್ಛ್ ಸಾಗರ್ ಸುರಕ್ಷಿತ್ ಸಾಗರ್’ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ಪೌರಾಯುಕ್ತ ಹಾಗೂ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಡಾ. ಉದಯ ಶೆಟ್ಟಿ ಹೇಳಿದರು. ಅವರು ಗುರುವಾರ ಉಡುಪಿಯ ಮಲ್ಪೆಯಲ್ಲಿ ಕೇಂದ್ರ ಸರ್ಕಾರದ ಭೂವಿಜ್ಞಾನ ಸಚಿವಾಲಯ, ಸಮುದ್ರ ಜೀವ ಸಂಪನ್ಮೂಲ ಮತ್ತು ಪರಿಸರ ವಿಜ್ಞಾನ ಕೇಂದ್ರ ಹಾಗೂ ಎ.ಟಿ.ಎ.ಎಲ್ ಭವನ್ ಕೊಚ್ಚಿ ಇವರ ಸಹಯೋಗದಲ್ಲಿ ಸ್ವಚ್ಛ್ ಸಾಗರ್ ಸುರಕ್ಷಿತ್ […]
ಕಾರ್ಮಿಕ ಇಲಾಖೆ ವತಿಯಿಂದ ಜಿಲ್ಲಾ ಕಾರ್ಮಿಕರ ನೋಂದಣಿ ಕಾರ್ಯಕ್ರಮ
ಉಡುಪಿ: ಕಾರ್ಮಿಕ ಇಲಾಖೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಸಹಯೋಗದೊಂದಿಗೆ ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿ ಕಿರು ಸಾಲ ಸೌಲಭ್ಯ ಯೋಜನೆ, ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆ, ಅಸಂಘಟಿತ ಕಾರ್ಮಿಕರಿಗೆ ಪಿಂಚಣಿ ಯೋಜನೆ ಹಾಗೂ ಇ-ಶ್ರಮ್ ಯೋಜನೆಯ ನೋಂದಣಿಯು ಆ.7 ರಂದು ಬಡಗುಬೆಟ್ಟು, ಚಿಟ್ಪಾಡಿ, ಕಸ್ತೂರ್ಬಾ ನಗರ ಮತ್ತು ಇಂದಿರಾನಗರ ವಾರ್ಡ್ನ ಕಾರ್ಮಿಕರಿಗೆ ಕುಕ್ಕಿಕಟ್ಟೆ ನಾರಾಯಣ ಗುರು ಸಭಾಭವನದಲ್ಲಿ, ಆ. 9 ರಂದು ಪೆರಂಪಳ್ಳಿ, ಗುಂಡಿಬೈಲು, ಕರಂಬಳ್ಳಿ ಹಾಗೂ ಕಡಿಯಾಳಿ ವಾರ್ಡ್ನ ಕಾರ್ಮಿಕರಿಗೆ ದೊಡ್ಡಣಗುಡ್ಡೆ […]
ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು 30 ದಿನಗಳೊಳಗೆ ತೆರವುಗೊಳಿಸಲು ನಗರಸಭೆ ಆದೇಶ
ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ವಾಸಕ್ಕೆ ಯೋಗ್ಯವಲ್ಲದ ಹಾಗೂ ಶಿಥಿಲಗೊಂಡಿರುವ ವಾಸ್ತವ್ಯ ಹಾಗೂ ವಾಣಿಜ್ಯ ಕಟ್ಟಡಗಳನ್ನು ಉಪಯೋಗಿಸುವುದನ್ನು ನಿಷೇಧಿಸಿ ನಗರಸಭೆ ಪೌರಾಯುಕ್ತರು ಆದೇಶ ಹೊರಡಿಸಿದ್ದು, ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ಮಾಲಕರು ತಮ್ಮ ಸ್ವಂತ ವೆಚ್ಚದಲ್ಲಿ 30 ದಿನಗಳ ಒಳಗೆ ತೆರವುಗೊಳಿಸಬೇಕು. ತಪ್ಪಿದ್ದಲ್ಲಿ ಯಾವುದೇ ಅನಾಹುತ ಮತ್ತು ಜೀವಹಾನಿಗಳು ಸಂಭವಿಸಿದ್ದಲ್ಲಿ ಮಾಲಕರೇ ಜವಾಬ್ದಾರರಾಗಿರುತ್ತಾರೆ ಹಾಗೂ ನಗರಸಭೆಯಿಂದ ನೀಡಲಾಗಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಹಿಂಪಡೆಯಲಾಗುವುದು ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.
ಮಳೆಗಾಲ ಆರಂಭವಾದ ಹಿನ್ನೆಲೆ: ನಗರಸಭಾ ವ್ಯಾಪ್ತಿಯಲ್ಲಿ ರಸ್ತೆ ಅಗೆತ ನಿಷೇಧ
ಉಡುಪಿ: ಮಳೆಗಾಲ ಆರಂಭವಾದ ಹಿನ್ನಲೆ, ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಅಕ್ಟೋಬರ್ 15 ರವರೆಗೆ ಟೆಲಿಫೋನ್, ವಿದ್ಯುತ್ ಕೇಬಲ್, ಕುಡಿಯುವ ನೀರು, ಒಳ ಚರಂಡಿ ಕೊಳವೆ ಹಾಗೂ ಮತ್ತಿತರ ಕಾಮಗಾರಿಗಳಿಗೆ ರಸ್ತೆ ಅಗೆಯುವುದನ್ನು ನಿಷೇಧಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.
ತ್ಯಾಜ್ಯದಿಂದ ಐಶ್ವರ್ಯ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸ್ವಚ್ಛತಾ ಜಾಥಾ
ಉಡುಪಿ: ನಗರಸಭೆ ಉಡುಪಿ ಹಾಗೂ ಸರ್ವೋದಯ ಇಂಟಿಗ್ರೇಟೆಡ್ ಟ್ರೈನಿಂಗ್ ಅಂಡ್ ರೂರಲ್ ಅಸೋಸಿಯೇಷನ್ ದಾವಣಗೆರೆ ಇವರ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಜೂನ್ 5 ರಂದು ಬೆಳಗ್ಗೆ 7.30 ಕ್ಕೆ ತ್ಯಾಜ್ಯದಿಂದ ಐಶ್ವರ್ಯ ಎಂಬ ಘೋಷವಾಕ್ಯದೊಂದಿಗೆ ಉಡುಪಿ ನಗರಸಭೆ ಕಾರ್ಯಾಲಯದಿಂದ ಸಿಟಿ ಬಸ್ ನಿಲ್ದಾಣ ಮಾರ್ಗವಾಗಿ ಭುಜಂಗ ಪಾರ್ಕ್ ವರೆಗೆ ಸ್ವಚ್ಛತಾ ಜಾಥಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.