ಶುದ್ಧೀಕರಿಸಿದ ನೀರು ಸರಬರಾಜಿಗೆ ನಗರಸಭೆ ಕ್ರಮ
ಉಡುಪಿ: ಬಜೆ ಡ್ಯಾಂಗೆ ಸ್ವರ್ಣ ನದಿಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ನೀರು ಬಂದಿದ್ದು, ಸದರಿ ನೀರಿನಲ್ಲಿ ಬಂದ ಕಸ, ಕಡ್ಡಿಗಳನ್ನು ಗೇಟ್ ತೆಗೆದು ನದಿಯಿಂದ ಹೊರ ಬಿಡಲಾಗಿದೆ. ಅದೇ ನೀರನ್ನು ತೆಗೆದುಕೊಂಡು ಶುದ್ಧೀಕರಣ ಮಾಡಿ, ಸಾರ್ವಜನಿಕರಿಗೆ ಸರಬರಾಜು ಮಾಡಲಾಗಿರುತ್ತದೆ. ಇದು ಪ್ರಥಮ ಮಳೆಯಾಗಿರುವುದರಿಂದ ಆಲಂ ಪ್ರಮಾಣ ಈ ಹಿಂದೆ ನಿಗದಿಪಡಿಸಿದಂತೆ ಇರುವುದರಿಂದ ಸಾರ್ವಜನಿಕರಿಗೆ ಸ್ವಲ್ಪ ಪ್ರಮಾಣದಲ್ಲಿ ಕೆಂಪು ನೀರು ಸರಬರಾಜು ಆಗಿರುತ್ತದೆ. ಈಗಾಗಲೇ ಆಲಂ ಪ್ರಮಾಣವನ್ನು ಸರಿಪಡಿಸಲಾಗಿದ್ದು, ನಗರಸಭೆ ನೀರು, ಸರಬರಾಜು ಮಾಡುತ್ತಿರುವ ನೀರಿನಲ್ಲಿ ಕಸ-ಕಡ್ಡಿಗಳು ಬಂದಿರುವುದಿಲ್ಲ. […]
ಉಡುಪಿ: ವೃತ್ತಗಳ ಮರು ನಾಮಕರಣ; ರಾಜ್ಯ ಸರ್ಕಾರ ಆದೇಶ
ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಪ್ರಮುಖ ವೃತ್ತಗಳಿಗೆ ನಾಮಕರಣ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕ ಪುರಸಭೆಗಳ ಅಧಿನಿಯಮ 1964-211ರ ಅನ್ವಯ ನಾಮಕರಣ ಮಾಡಲು ಸರ್ಕಾರ ಅನುಮತಿ ನೀಡಿ ಆದೇಶಿಸಿದೆ. ಬನ್ನಂಜೆ ವೃತ್ತವು ನಾರಾಯಣಗುರು ವೃತ್ತ, ಕಲ್ಸಂಕ ವೃತ್ತವು ಮಧ್ವಾಚಾರ್ಯ ವೃತ್ತ, ಡಯಾನಾ ವೃತ್ತವು ವಾದಿರಾಜ ವೃತ್ತ, ಸಂತೆಕಟ್ಟೆ ಕಲ್ಯಾಣಪುರ ರಸ್ತೆ ಜಂಕ್ಷನ್ ಅನ್ನು ಕೋಟಿ ಚೆನ್ನಯ್ಯ ವೃತ ಹಾಗೂ ಬ್ರಹ್ಮಗಿರಿ ದೊಡ್ಡ ವೃತ್ತವು ಆಸ್ಕರ್ ಫೆರ್ನಾಂಡಿಸ್ ವೃತ್ತ ಎಂದು ಮರುನಾಮಕರಣ ಮಾಡಲಾಗಿದೆ. ಪರ್ಕಳದಿಂದ ಕೋಡಂಗೆ ಹಾಗೂ […]
ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆಗಾಗಿ ಸಂಚಾರಿ ಕ್ಲಿನಿಕ್ ಉದ್ಘಾಟನೆ
ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಬೆಂಗಳೂರು ಇವರ ವತಿಯಿಂದ ಜಿಲ್ಲೆಯ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಒದಗಿಸುವ ಸಂಚಾರಿ ಆರೋಗ್ಯ ಕ್ಲಿನಿಕ್ ಯೋಜನೆಗೆ ಶುಕ್ರವಾರ ನಗರಸಭೆಯ ಆವರಣದಲ್ಲಿ ಶಾಸಕ ಕೆ.ರಘುಪತಿ ಭಟ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಲಕ್ಶ್ಮೀ ಮಂಜುನಾಥ್, ಪೌರಾಯುಕ್ತ ಡಾ. ಉದಯ್ ಕುಮಾರ್ […]
ಜಿಲ್ಲಾ ಖಜಾನೆ ಎದುರಿನ ವೃತ್ತಕ್ಕೆ ನಾಮಕರಣ: ಆಕ್ಷೇಪಣೆ ಆಹ್ವಾನ
ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಜಿಲ್ಲಾ ಖಜಾನೆ ಎದುರಿನ ವೃತ್ತಕ್ಕೆ ವಿನಾಯಕ ದಾಮೋದರ್ ಸಾವರ್ಕರ ವೃತ್ತ ಎಂದು ನಾಮಕರಣಗೊಳಿಸುವ ಕುರಿತು ಆಕ್ಷೇಪಣೆ ಹಾಗೂ ಸಲಹೆಗಳಿದ್ದಲ್ಲಿ 30 ದಿನಗಳ ಒಳಗಾಗಿ ನಗರಸಭೆ ಪೌರಾಯುಕ್ತರ ಕಚೇರಿಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.
ಸೆ. 10 ರಂದು ಕಸ ಸಂಗ್ರಹಣೆ ಇಲ್ಲ
ಉಡುಪಿ: ಉಡುಪಿ ನಗರಸಭೆಯ ಎಲ್ಲಾ ಪೌರಕಾರ್ಮಿಕರಿಗೆ ಹಾಗೂ ಸಿಬ್ಬಂದಿಗಳಿಗೆ ಸೆಪ್ಟಂಬರ್ 10 ರಂದು ಕ್ರೀಡಾಕೂಟವನ್ನು ಆಯೋಜಿಸಲಾಗಿರುವುದರಿಂದ ಸದರಿ ದಿನದಂದು ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಮನೆ ಮನೆ ಕಸ ಸಂಗ್ರಹಣೆ ಮಾಡಲಾಗುವುದಿಲ್ಲ ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.