ಮಲ್ಪೆ: ಅಸಾಯಕ ಸ್ಥಿತಿಯಲ್ಲಿದ್ದ ಬಾಲಕನ ರಕ್ಷಣೆ, ಪೋಷಕರಿಗೆ ಹಸ್ತಾಂತರ
ಮಲ್ಪೆ: ಕೊಡವೂರು ಸಮೀಪದ ಜುಮಾದಿನಗರ ಬಸ್ ಸ್ಟಾಂಡ್ ನಲ್ಲಿ ಮನೆ ಬಿಟ್ಟು ಬಂದು ಅಸಾಯಕನಾಗಿ ಕುಳಿತಿದ್ದ ಸುಮಾರು 9 ವರ್ಷದ ಬಾಲಕನನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ರಕ್ಷಣೆ ಮಾಡಿ ಪೋಷಕರಿಗೆ ಹಸ್ತಾಂತರ ಮಾಡಿದೆ. ಬಸ್ ನಿಲ್ದಾಣದಲ್ಲಿ ತುಂಬಾ ಹೊತ್ತಿನಿಂದ ಕುಳಿತಿದ್ದನ್ನು ಬಾಲಕನನ್ನು ಗಮನಿಸಿದ ಮೆಸ್ಕಾಂ ಸಿಬ್ಬಂದಿ ರವಿ ಕೊಡವೂರು ಮಕ್ಕಳ ಸಹಾಯವಾಣಿಗೆ ಕರೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದು ಕೂಡಲೇ ಕಾರ್ಯಪ್ರವೃತ್ತವಾದ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಬಾಲಕ ಇರುವ ಸ್ಥಳಕ್ಕೆ ತೆರಳಿದ್ದಾರೆ. […]