ಮೂಡಬಿದಿರೆ: ಆಳ್ವಾಸ್ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಸಾಧನೆ
ಮೂಡುಬಿದಿರೆ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 8ನೇ ಸೆಮಿಸ್ಟರ್ ಫಲಿತಾಂಶ ಪ್ರಕಟಗೊಂಡಿದ್ದು, ಮೂಡಬಿದಿರೆ ಮಿಜಾರ್‌ನ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಸಿಎಸ್‌ಇ. ವಿಭಾಗದಲ್ಲಿ ಶೇ. 99 ಫಲಿತಾಂಶ ದಾಖಲಾಗಿದ್ದು, 90ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಜಸ್ಮಿನೆ ಪ್ರಿನ್ಸಿಲೋಬೊ ಶೇ.88.71 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಐಎಸ್‌ಸಿ ವಿಭಾಗದಲ್ಲಿ ಶೇ.100 ಫಲಿತಾಂಶ ದಾಖಲಾಗಿದೆ. 29 ಮಂದಿ ವಿಶಿಷ್ಟ ಶ್ರೇಣಿ ಗಳಿಸಿದ್ದು, ಹರ್ಷಿತಾ (ಶೇ.88.57 ಅಂಕ) ತರಗತಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಇ […]
ಮೂಡಬಿದಿರೆ ಸಾವಿರ ಕಂಬದ ಬಸದಿಯಲ್ಲಿ ಕಳ್ಳತನ
ಮಂಗಳೂರು: ಇತಿಹಾಸ ಪ್ರಸಿದ್ಧ ಮೂಡಬಿದಿರೆಯ ಸಾವಿರ ಕಂಬದ ಜೈನಬಸದಿಯಲ್ಲಿ ಕಳ್ಳತನನಡೆದಿದ್ದು, ಬಸದಿಯ ಕಾಣಿಕೆ ಡಬ್ಬಿ ಒಡೆದು ಕಳ್ಳತನ ನಡೆಸಿದ್ದಾರೆ. ಮೂಡಬಿದ್ರೆ ಪೇಟೆಯಲ್ಲಿರುವ ಸಾವಿರ ಕಂಬದ ಜೈನ ಬಸದಿಯ ಮುಂಭಾಗದ ಬಾಗಿಲು ಒಡೆದು ಕಳ್ಳರು ಒಳನುಗ್ಗಿದ್ದಾರೆ. ಈ ಬಗ್ಗೆ ತನಿಖೆಗೆ ಮೂಡಬಿದ್ರೆ ಜೈನ ಸ್ವಾಮೀಜಿ ಭಟ್ಟಾರಕ ಶ್ರೀ ಆಗ್ರಹಿಸಿದ್ದು, ಸ್ಥಳಕ್ಕೆ ಡಿಸಿಪಿ ಲಕ್ಷ್ಮಿಗಣೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆಳ್ವಾಸ್ ಕಾಲೇಜಿಗೆ ನ್ಯಾಕ್ ‘ಎ’ ಗ್ರೇಡ್ ಮಾನ್ಯತೆ; ಸಂಶೋಧನಾ ಕಾರ್ಯಗಳಿಗೆ ಸಹಕಾರಿ: ಮೋಹನ್ ಆಳ್ವ
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಪ್ರವರ್ತಿತ ಆಳ್ವಾಸ್ ಕಾಲೇಜಿಗೆ ಯುಜಿಸಿ ‘ನ್ಯಾಕ್’ ಸಂಸ್ಥೆಯು ‘ಎ’ ಗ್ರೇಡ್ ಮಾನ್ಯತೆ ನೀಡಿದ್ದು, ಹೊಸ ಮಾನ್ಯತಾ ಕ್ರಮ ದಲ್ಲಿ ಸಿಜಿಪಿಎ 3.23 ಪಡೆದಿದೆ. ಈ ಮಾನ್ಯತೆ 5 ವರ್ಷಗಳವರೆಗೆ ಜಾರಿಯಲ್ಲಿರುತ್ತದೆ. ‘ಎ’ ಗ್ರೇಡ್ ಮಾನ್ಯತೆಯಿಂದ ಸಂಶೋಧನಾ ಕಾರ್ಯಗಳಿಗೆ ಸಹಕಾರಿಯಾಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಳೆದ 21 ವರ್ಷಗಳ ಹಿಂದೆ 28 ವಿದ್ಯಾರ್ಥಿ ಗಳು, 2 ಕೋರ್ಸ್ನಿಂದ ಪ್ರಾರಂಭವಾದ ಆಳ್ವಾಸ್ ಸಂಸ್ಥೆ ಈಗ 18 […]