ಕರಾವಳಿಯಲ್ಲಿ ಯಾವುದೇ ಬೆಲೆ ತೆತ್ತಾದರೂ ಕೋಮು ಸೌಹಾರ್ದತೆ ಉಳಿಸಲು ಕ್ರಮ: ಜಿ. ಪರಮೇಶ್ವರ್
ಉಡುಪಿ: ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಮತ್ತು ಕೋಮುವಾದವನ್ನು ಪ್ರಚೋದಿಸುವ ನೈತಿಕ ಪೊಲೀಸ್‌ಗಿರಿಯನ್ನು ಹತ್ತಿಕ್ಕಲು ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ. ನಮ್ಮ ಸರಕಾರ ಸರ್ವಜನಾಂಗದ ಶಾಂತಿಯ ತೋಟದ ಪರಿಕಲ್ಪನೆಯೊಂದಿಗೆ ಆಡಳಿತ ನಡೆಸಲು ತೀರ್ಮಾನ ಮಾಡಿದೆ. ಆ ಹಿನ್ನೆಲೆಯಲ್ಲಿ ಕರಾವಳಿ ಭಾಗದಲ್ಲಿ ಯಾವುದೇ ಬೆಲೆ ತೆತ್ತಾದರು ಕೋಮು ಸೌಹಾರ್ದತೆ ಉಳಿಸಲು ಮುಂದಾಗಿದ್ದೇವೆ ಎಂದು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ಉಡುಪಿ ಎಸ್ಪಿ ಕಚೇರಿಯಲ್ಲಿ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ […]
ಚಿಕ್ಕಬಳ್ಳಾಪುರದಲ್ಲಿ ಅನ್ಯಸಮುದಾಯದವರಿಂದ ನೈತಿಕ ಪೊಲೀಸ್ ಗಿರಿ
ಚಿಕ್ಕಬಳ್ಳಾಪುರ: ನಗರದಲ್ಲಿ ಅನ್ಯಸಮುದಾಯದ ಯುವತಿಯೊಬ್ಬಳು ಹಿಂದೂ ಯುವಕನ ಜೊತೆಗೆ ಹೋಟೆಲ್ ಗೆ ಆಗಮಿಸಿದ ಹಿನ್ನೆಲೆಯಲ್ಲಿ ಆಕೆಯ ಸಮುದಾಯದ ಯುವಕರು ಇಬ್ಬರಿಗೂ ಕಿರುಕುಳ ನೀಡಿದ್ದಾರೆ ಎಂದು ವರದಿಯಾಗಿದೆ. ಈ ಘಟನೆ ಚಿಕ್ಕಬಳ್ಳಾಪುರದ ಗೋಪಿಕಾ ಚಾಟ್ಸ್ ಬಳಿ ನಡೆದಿದೆ ಎನ್ನಲಾಗಿದೆ. ಈಗ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗುರುವಾರ ಸಂಜೆ ಈ ಘಟನೆ ಚಿಕ್ಕಬಳ್ಳಾಪುರ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಹಿಂದೂ ಯುವಕನ ಜೊತೆ ತಮ್ಮ ಸಮುದಾಯದ ಯುವತಿ ಆಗಮಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ […]