ಬೈಂದೂರು: ಕಳಪೆ ರಸ್ತೆಯಿಂದ ಅಪಘಾತ; ಚಿಕಿತ್ಸೆ ವೆಚ್ಚವನ್ನು ಗುತ್ತಿಗೆದಾರರು ಭರಿಸುವಂತೆ ಮೋದಿ ಬ್ರಿಗೇಡ್ ಮನವಿ

ಬೈಂದೂರು: ಕರ್ನಾಟಕ ನೀರಾವರಿ ನಿಗಮದ ವರಾಹಿ ಯೋಜನೆಯಲ್ಲಿ ಅತ್ಯಂತ ಕಳಪೆ ಕಾಮಗಾರಿಯಿಂದ ಹಾಗೂ ಅಗೆದ ರಸ್ತೆಗಳನ್ನು ಮುಚ್ಚದೆ ಇರುವುದರಿಂದ ರಸ್ತೆಯಲ್ಲಿ ನಿರಂತರ ಅಪಘಾತಗಳು ಸಂಭವಿಸುತ್ತಿದೆ. ಈಗಾಗಲೇ ಶಿರೂರು ಮೂರ್ಕೈಯ ಜಿ. ಮಧು ಹಾಗೂ ಗುಲ್ವಾಡಿಯ ಹರೀಶ್ ಪೂಜಾರಿ ಎಂಬ ಇಬ್ಬರು ವ್ಯಕ್ತಿಗಳು ಅಪಘಾತಕ್ಕೊಳಗಾಗಿ ಮಣಿಪಾಲದ ಐಸಿಯುನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದು, ಇವರ ಚಿಕಿತ್ಸೆಯ ವೆಚ್ಚವನ್ನು ಸಂಬಂಧಪಟ್ಟ ಗುತ್ತಿಗೆದಾರರು ಭರಿಸುವಂತೆ ಕೋರಿ ರಾಜ್ಯ ಮೋದಿ ಬ್ರಿಗೇಡ್ ವತಿಯಿಂದ ಬೈಂದೂರು ಕ್ಷೇತ್ರದ ಸಿದ್ದಾಪುರದ ವಾರಾಹಿ ಯೋಜನೆಯ ಕಾರ್ಯಪಾಲಕ ಅಭಿಯಂತರದಾಸೇಗೌಡರವರಿಗೆ ಮನವಿ […]

ಮೋದಿ ಬ್ರಿಗೇಡ್ ವತಿಯಿಂದ ಮನೆ ಮನೆಗೆ ಮೋದಿ ಯೋಜನೆ ಕಾರ್ಯಕ್ರಮಕ್ಕೆ ಚಾಲನೆ

ಉಡುಪಿ ಸೆಪ್ಟೆಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿ ಅವರ 72ನೇ ಹುಟ್ಟುಹಬ್ಬದ ಪ್ರಯುಕ್ತ ಉಡುಪಿ ಜಿಲ್ಲಾ ಮೋದಿ ಬ್ರಿಗೇಡ್ ವತಿಯಿಂದ ಜಿಲ್ಲೆಯ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿ, ‘ಮನೆ ಮನೆಗೆ ಮೋದಿ ಯೋಜನೆ ‘ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮಕ್ಕೆ ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಸುಜಿತ್ ಮತ್ತು ಡಾ. ಸುಭಾಸ್ ಕಿಣಿ ಚಾಲನೆ ನೀಡಿದರು. ಮೋದಿ ಬ್ರಿಗೇಡ್ ಜಿಲ್ಲಾಧ್ಯಕ್ಷ ಸುಭಾಷಿತ್ ಕುಮಾರ್, ಉಪಾಧ್ಯಕ್ಷ ಚಿನ್ಮಯ ಮೂರ್ತಿ ಮತ್ತು ಚಂದ್ರಕಾಂತ್ ದೇವಾಡಿಗ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ […]