ಮೋದಿ ಬ್ರಿಗೇಡ್ ವತಿಯಿಂದ ಮನೆ ಮನೆಗೆ ಮೋದಿ ಯೋಜನೆ ಕಾರ್ಯಕ್ರಮಕ್ಕೆ ಚಾಲನೆ

ಉಡುಪಿ ಸೆಪ್ಟೆಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿ ಅವರ 72ನೇ ಹುಟ್ಟುಹಬ್ಬದ ಪ್ರಯುಕ್ತ ಉಡುಪಿ ಜಿಲ್ಲಾ ಮೋದಿ ಬ್ರಿಗೇಡ್ ವತಿಯಿಂದ ಜಿಲ್ಲೆಯ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿ, ‘ಮನೆ ಮನೆಗೆ ಮೋದಿ ಯೋಜನೆ ‘ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ಕಾರ್ಯಕ್ರಮಕ್ಕೆ ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಸುಜಿತ್ ಮತ್ತು ಡಾ. ಸುಭಾಸ್ ಕಿಣಿ ಚಾಲನೆ ನೀಡಿದರು.

ಮೋದಿ ಬ್ರಿಗೇಡ್ ಜಿಲ್ಲಾಧ್ಯಕ್ಷ ಸುಭಾಷಿತ್ ಕುಮಾರ್, ಉಪಾಧ್ಯಕ್ಷ ಚಿನ್ಮಯ ಮೂರ್ತಿ ಮತ್ತು ಚಂದ್ರಕಾಂತ್ ದೇವಾಡಿಗ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೇದಾವತಿ ಹೆಗ್ಡೆ, ಯುವ ಘಟಕದ ಅಧ್ಯಕ್ಷ ನಾಗರಾಜ್ ಶೇಟ್, ಇತರ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.