ಏ.1ರಿಂದ ತಂಬಾಕು ಉತ್ಪನ್ನ, ಚಿನ್ನ ಬೆಳ್ಳಿ ದುಬಾರಿ; ಟಿವಿ- ಮೊಬೈಲ್ ಅಗ್ಗ
ನವದೆಹಲಿ: ಸಿಗರೇಟ್, ಪಾನ್ ಮಸಾಲಾ ಸೇರಿದಂತೆ ತಂಬಾಕು ಉತ್ಪನ್ನಗಳನ್ನು ಸೇವನೆ ಮಾಡುವವರಿಗೆ ಏಪ್ರಿಲ್ 1ರಿಂದ ಜೇಬಿನ ಮೇಲೆ ಹೆಚ್ಚಿನ ಹೊರೆ ಬೀಳಲಿದೆ. ಸಿಗರೇಟ್ ಹಾಗೂ ಪಾನ್ ಮಸಾಲಾ ಸೇರಿದಂತೆ ತಂಬಾಕು ಉತ್ಪನ್ನಗಳ ಮೇಲಿನ ಜಿ ಎಸ್ ಟಿ ಪರಿಹಾರ ಸೆಸ್ ಮಿತಿ ಅಥವಾ ಗರಿಷ್ಠ ದರವನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದೆ. ಈ ದರವು ಏ.1ರಿಂದ ಜಾರಿಗೆ ಬರಲಿದೆ. 2023ರ ಹಣಕಾಸು ವಿಧೇಯಕದ ತಿದ್ದುಪಡಿಯ ಭಾಗವಾಗಿ ಈ ದರವನ್ನು ನಿಗದಿಪಡಿಸಲಾಗಿದೆ. ಮಾ. 24 ರಂದು ಲೋಕಸಭೆಯಲ್ಲಿ ಹಣಕಾಸು ಮಸೂದೆ […]
ಮಣಿಪಾಲ: ವ್ಯಕ್ತಿಗೆ ಹಲ್ಲೆ ನಡೆಸಿ ಬಂಗಾರದ ಚೈನ್, ಮೊಬೈಲ್, ಸ್ಕೂಟರ್ ನೊಂದಿಗೆ ಎಸ್ಕೇಪ್
ಮಣಿಪಾಲ: ವ್ಯಕ್ತಿಯೊಬ್ಬರಿಗೆ ಪರಿಚಿತನೇ ದೋಖಾ ಮಾಡಿದ ಘಟನೆ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ಉಡುಪಿ ಹೆರ್ಗಾ ನಿವಾಸಿ ರಮೇಶ್ ಆಚಾರ್ಯ ಎಂಬವರಿಗೆ ಪರಿಚಿತನಾದ ಪ್ರಶಾಂತ್ ಎಂಬಾತನಿಂದಲೇ ಸಖತ್ ದೋಖಾ ಆಗಿದೆ. ರಮೇಶ್ ಅವರು ನಿನ್ನೆ ರಾತ್ರಿ 9ಗಂಟೆ ಸುಮಾರಿಗೆ ಆರೋಪಿ ಪ್ರಶಾಂತ್ ನನ್ನು ಭೇಟಿಯಾಗಿದ್ದರು. ಬಳಿಕ ಪ್ರಶಾಂತ್, ಡ್ರಿಂಕ್ಸ್ ಕುಡಿಯುವ ಎಂದು ಹೇಳಿದಂತೆ ಉಡುಪಿಯಲ್ಲಿ ಬಿಯರ್ ಖರೀದಿಸಿ ಇಬ್ಬರೂ ಕರಂಬಳ್ಳಿ ಗುಜರಿ ಅಂಗಡಿಯ ಬಳಿ ಹೋಗಿ ಬಿಯರ್ ಸೇವನೆ ಮಾಡಿದ್ದಾರೆ. ಬಳಿಕ ರಾತ್ರಿ […]