ಎಂ ಎಲ್ ಸಿ ಚುನಾವಣೆ : ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಗೆಲುವು
ಬೆಂಗಳೂರು: ಕರ್ನಾಟಕದ ಪಶ್ಚಿಮ ಶಿಕ್ಷಕರ ಕ್ಷೇತ್ರದ ಎಂಎಲ್‌ಸಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಎಂಎಲ್‌ಸಿ ಚುನಾವಣೆಯಲ್ಲಿ ಸತತ 8 ಬಾರಿ ಗೆದ್ದ ದೇಶದ ಮೊದಲ ಎಂಎಲ್‌ಸಿ ಎನ್ನುವ ಹೆಗ್ಗಳಿಕೆಗೆ ಹೊರಟ್ಟಿ ಪಾತ್ರವಾಗಿದ್ದಾರೆ. ಇನ್ನೂ 3 ಸ್ಥಾನಗಳಿಗೆ ಕೌಟಿಂಗ್ ನಡೆಯುತ್ತಿದ್ದು, ಕರ್ನಾಟಕದ ಮೇಲ್ಮನೆಯಲ್ಲಿ ಬಿಜೆಪಿ ಬಹುಮತದತ್ತ ಸಾಗುತ್ತಿದೆ.
ಬಿಜೆಪಿಯ ‘ಬಿ’ ಟೀಂ ಕಾಂಗ್ರೆಸ್: ಎಚ್.ಡಿ ಕುಮಾರಸ್ವಾಮಿ
ಬೆಂಗಳೂರು: ರಾಜ್ಯಸಭೆ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ಜೆಡಿಎಸ್ ಪಕ್ಷದ ಸದಸ್ಯರು ಕಾಂಗ್ರೆಸ್ ಗೆ ಮತ ಹಾಕಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ” ಶ್ರೀನಿವಾಸಗೌಡ ಕಾಂಗ್ರೆಸ್‌ಗೆ ಮತ ಹಾಕುತ್ತಾರೆ ಎಂದು ಹೇಳಿದ್ದೆ. ಎಸ್‌ಆರ್ ಶ್ರೀನಿವಾಸ್ ಕೂಡ ಜೆಡಿಎಸ್‌ಗೆ ಮತ ಹಾಕಿಲ್ಲ. ಕಾಂಗ್ರೆಸ್ ಇಂದು ತನ್ನ ನಿಜವಾದ ಮುಖವನ್ನು ತೋರಿಸಿದೆ. ಬಿಜೆಪಿಯ ‘ಬಿ’ ಟೀಂ ಕಾಂಗ್ರೆಸ್. ದೇಶದಲ್ಲಿ ಬಿಜೆಪಿ ಬೆಳೆಯಲು ಅವರೇ ಮುಖ್ಯ ಕಾರಣಕರ್ತರು” ಎಂದು ಮಾಧ್ಯಮಗಳೆದುರು ಹೇಳಿಕೊಂಡಿದ್ದಾರೆ. ಮಾಧ್ಯಮ ಪ್ರತಿನಿಧಿಗಳು ಈ ಬಗ್ಗೆ […]