ಬಿಜೆಪಿಯ ‘ಬಿ’ ಟೀಂ ಕಾಂಗ್ರೆಸ್: ಎಚ್.ಡಿ ಕುಮಾರಸ್ವಾಮಿ

ಬೆಂಗಳೂರು: ರಾಜ್ಯಸಭೆ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ಜೆಡಿಎಸ್ ಪಕ್ಷದ ಸದಸ್ಯರು ಕಾಂಗ್ರೆಸ್ ಗೆ ಮತ ಹಾಕಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ” ಶ್ರೀನಿವಾಸಗೌಡ ಕಾಂಗ್ರೆಸ್‌ಗೆ ಮತ ಹಾಕುತ್ತಾರೆ ಎಂದು ಹೇಳಿದ್ದೆ. ಎಸ್‌ಆರ್‌ ಶ್ರೀನಿವಾಸ್‌ ಕೂಡ ಜೆಡಿಎಸ್‌ಗೆ ಮತ ಹಾಕಿಲ್ಲ. ಕಾಂಗ್ರೆಸ್ ಇಂದು ತನ್ನ ನಿಜವಾದ ಮುಖವನ್ನು ತೋರಿಸಿದೆ. ಬಿಜೆಪಿಯ ‘ಬಿ’ ಟೀಂ ಕಾಂಗ್ರೆಸ್. ದೇಶದಲ್ಲಿ ಬಿಜೆಪಿ ಬೆಳೆಯಲು ಅವರೇ ಮುಖ್ಯ ಕಾರಣಕರ್ತರು” ಎಂದು ಮಾಧ್ಯಮಗಳೆದುರು ಹೇಳಿಕೊಂಡಿದ್ದಾರೆ.

ಮಾಧ್ಯಮ ಪ್ರತಿನಿಧಿಗಳು ಈ ಬಗ್ಗೆ ಕೆ.ಶ್ರೀನಿವಾಸ್ ಗೌಡ ಅವರ ಬಳಿ ಕೇಳಿದಾಗ, “ನಾನು ಕಾಂಗ್ರೆಸ್ ಗೆ ಮತ ಹಾಕಿದ್ದೇನೆ, ಏಕೆಂದರೆ ನಾನು ಅದನ್ನು ಪ್ರೀತಿಸುತ್ತೇನೆ( ಬಿಕಾಸ್ ಐ ಲವ್ ಇಟ್)” ಎಂದು ಹೇಳಿದ್ದಾರೆ.

source: ANI/Twitter