ವೃಂದ ಮತ್ತು ನೇಮಕಾತಿ ನಿಯಮ ತುರ್ತು ತಿದ್ದುಪಡಿ: ಪದವೀಧರ ಶಿಕ್ಷಕರಿಗೆ ಹಿಂದಿನಂತೆ ಪಾಠದ ಅವಕಾಶ ಕಲ್ಪಿಸಲು ಸಚಿವರ ಜತೆ ಚರ್ಚೆ
ಉಡುಪಿ: ವೃಂದ ಮತ್ತು ನೇಮಕಾತಿ ನಿಯಮ (ಸಿಆ್ಯಂಡ್‌ಆರ್)ಕ್ಕೆ ತುರ್ತು ತಿದ್ದುಪಡಿ ತಂದು ಪದವೀಧರ ಶಿಕ್ಷಕರಿಗೆ ಹಿಂದಿನಂತೆ 1ರಿಂದ 8ನೇ ತರಗತಿಯವರೆಗೆ ಪಾಠ ಮಾಡಲು ಅವಕಾಶ ಕಲ್ಪಿಸುವ ಬಗ್ಗೆ ಶಿಕ್ಷಣ ಸಚಿವರೊಂದಿಗೆ ಶೀಘ್ರವೇ ಚರ್ಚೆ ನಡೆಸಲಾಗುವುದು ಎಂದು ಮುಜರಾಯಿ ಮತ್ತು ಮೀನುಗಾರಿಕೆ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು. ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ವತಿಯಿಂದ ಉಡುಪಿ ಕೃಷ್ಣಮಠದ ರಾಜಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಮೈಸೂರು ವಿಭಾಗ ಮಟ್ಟದ ಪದವೀಧರ ಶಿಕ್ಷಕರ […]
ಮಂಗನ ಕಾಯಿಲೆ: ರೋಗಿಗಳ ಆರೋಗ್ಯ ವಿಚಾರಿಸಿದ ಶಾಸಕ
ಉಡುಪಿ: ಮಂಗನ ಕಾಯಿಲೆಗೆ ತುತ್ತಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಶಾಸಕ ಕೆ. ರಘುಪತಿ ಭಟ್ ಸೋಮವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ರೋಗಿಗಳ ವಾರ್ಡ್ ಗೆ ಖುದ್ದಾಗಿ ತೆರಳಿದ ಶಾಸಕರು, ರೋಗಿಗಳ ಆರೋಗ್ಯವನ್ನು ವಿಚಾರಿಸಿದರು. ಆ ಬಳಿಕ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಅವಿನಾಶ್ ಶೆಟ್ಟಿ ಹಾಗೂ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡವನ್ನು ಭೇಟಿ ಮಾಡಿ ಚರ್ಚಿಸಿದರು. ರೋಗಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಿ. ಸರ್ಕಾರದಿಂದ ಯಾವುದೇ ಸಹಕಾರ ನೀಡಲು ನಾವು ಸಿದ್ಧರಿದ್ದೇವೆ ಎಂದು […]