ಕುಂದಾಪುರ – ಮಿನಿವಿಧಾನಸೌಧದ ಗುತ್ತಿಗೆದಾರನ ಮೇಲೆ ಕ್ರಿಮಿನಲ್ ಕೇಸು

ಕುಂದಾಪುರ: ಕೇವಲ 4 ವರ್ಷಗಳ ಹಿಂದೆ ಉದ್ಘಾಟನೆಯಾದ ಕುಂದಾಪುರ ಮಿನಿ ವಿಧಾನಸೌಧದ ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರರ ಮೇಲೆ ಕ್ರಿಮಿನಲ್‌ಪ್ರಕರಣ ದಾಖಲಾಗಿದೆ. ಶನಿವಾರ ಈ ಮಿನಿ ವಿಧಾನಸೌಧದ ಉಪವಿಭಾಗಾಧಿಕಾರಿಗಳ ಆಡಳಿತ ಶಾಖೆಯ ಮೇಲ್ಛಾವಣಿಯ ಸಿಮೆಂಟ್‌ ಸ್ಲ್ಯಾಬ್‌ ಏಕಾಏಕಿ ಕುಸಿದುಬಿದ್ದು ನೌಕರರೊಬ್ಬರಿಗೆ ಗಾಯವಾಗಿ, ಕಚೇರಿಯ ಪಿಠೋಪಕರಣ ಹಾಗೂ ವಸ್ತುಗಳಿಗೆ ಹಾನಿಯುಂಟಾಗಿತ್ತು. ಶನಿವಾರ 11 ಗಂಟೆಗೆ ಕಚೇರಿಯಲ್ಲಿ ಗುತ್ತಿಗೆ ನೌಕರ ನಾರಾಯಣ ಬಿಲ್ಲವ ಅವರು ಕರ್ತವ್ಯದಲ್ಲಿದ್ದಾಗ, ಸ್ಲ್ಯಾಬ್ ನ ಸಿಮೆಂಟು ತುಂಡುಗಳಿ ಮೊದಲು ಫ್ಯಾನ್ ಮೇಲೆ ಬಿದ್ದು, ನಂತರ ಅವರ […]