ದೇಶದಲ್ಲೇ ಚೊಚ್ಚಲ ಬಾರಿಗೆ ಮಹಿಳಾ ಸಿಬಂದಿಗಳಿಂದಲೇ ಎಂಜಿ ಹೆಕ್ಟೆರ್ ವಾಹನ ತಯಾರಿಕೆ !
ಬೆಂಗಳೂರು: ಎಂಜಿ ಮೋಟಾರ್ ಇಂಡಿಯಾ ಸಂಸ್ಥೆಯ 50,000 ಎಂಜಿ ಹೆಕ್ಟೇರ್ ವಾಹನಗಳ ಮೈಲಿಗಲ್ಲು ಸಾಧಿಸಿದೆ. ಇದರ ಜೊತೆಗೆ, 50 ಸಾವಿರದ ವಾಹನವನ್ನು ಸಂಪೂರ್ಣ ಮಹಿಳಾ ಸಿಬ್ಬಂದಿಯೇ ತಯಾರಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಇದು ದೇಶದಲ್ಲೇ ಇದೊಂದು ಪ್ರಥಮ ಪ್ರಯೋಗವಾಗಿದೆ. ಈ ವಾಹನದ ಆರಂಭದಿಂದ ಅಂತ್ಯದವರೆಗಿನ ಎಲ್ಲಾ ನಿರ್ಮಾಣ ಕಾರ್ಯಗಳಲ್ಲಿ ಶೀಟ್ ಮೆಟಲ್‌ನ ಪ್ಯಾನಲ್-ಪ್ರೆಸ್ಸಿಂಗ್ ಮತ್ತು ಪೇಂಟಿಂಗ್, ವೆಲ್ಡಿಂಗ್ ಜೊತೆಗೆ ಉತ್ಪಾದನೆಯ ನಂತರದ ಪರೀಕ್ಷಾರ್ಥ ಚಾಲನೆ ನಡೆಸುವವರೆಗೆ ಮಹಿಳೆಯರೇ ಕಾರ್ಯನಿರ್ವಹಿಸಿದ್ದಾರೆ. ಎಂಜಿ ಮೋಟಾರ್ ಇಂಡಿಯಾ ಗುಜರಾತ್‌ನ ಹಲೋಲ್ (ಪಂಚಮಹಲ್ […]