ದ.ಕ–ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌: ನೂತನ ಅಧ್ಯಕ್ಷರಾಗಿ ‘ಯಶ್‌ಪಾಲ್‌ ಸುವರ್ಣ’ ಪುನರಾಯ್ಕೆ

ಉಡುಪಿ: ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ನೂತನ ಅಧ್ಯಕ್ಷರಾಗಿ ಸತತ 4ನೇ ಅವಧಿಗೆ ಯಶ್‌ಪಾಲ್‌ ಎ. ಸುವರ್ಣ ಅವರು ಪುನರಾಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಪುರುಷೋತ್ತಮ್‌ ಅಮೀನ್‌ ಉಳ್ಳಾಲ ಅವರು ಪುನರಾಯ್ಕೆಯಾಗಿದ್ದಾರೆ. ಬುಧವಾರ ನಡೆದ ಫೆಡರೇಶನ್‌ನ ಆಡಳಿತ ಮಂಡಳಿಯ ಸಭೆಯಲ್ಲಿ ಚುನಾವಣಾ ಅಧಿಕಾರಿಯಾಗಿ ಮಂಗಳೂರಿನ ಲೆಕ್ಕಪರಿಶೋಧನಾ ಉಪನಿರ್ದೇಶಕ ಮಹೇಶ್ವರಪ್ಪ ಅವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಯಶ್‌ಪಾಲ್‌ ಸುವರ್ಣ ಅವರು 2009ರಲ್ಲಿ ಫೆಡರೇಶ್‌ನ ಅಧ್ಯಕ್ಷತೆಯನ್ನು ವಹಿಸಿಕೊಂಡ ಬಳಿಕ ಫೆಡರೇಶನಿನ ಪ್ರಮುಖ ವ್ಯವಹಾರಗಳಾದ ಸಿಗಡಿ ಮಾರಾಟ, ಡೀಸಿಲ್‌ […]