ವೈದ್ಯಕೀಯ ಸಾಧನ ಉತ್ಪಾದನಾ ಘಟಕ ಆರಂಭ

ಮಣಿಪಾಲ: ಏಪ್ರಿಲ್ 29 ರಂದು ಮಣಿಪಾಲದಲ್ಲಿ ಬ್ಲ್ಯಾಕ್‌ಫ್ರಾಗ್ ಟೆಕ್ನಾಲಜೀಸ್‌ನ ವೈದ್ಯಕೀಯ ಸಾಧನ ಉತ್ಪಾದನಾ ಘಟಕವನ್ನು ಡಾ. ರಂಜನ್ ಪೈ, ಅಧ್ಯಕ್ಷರು, ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಗುಂಪು ಬೆಂಗಳೂರು, ಇವರು ಉದ್ಘಾಟಿಸಿದರು. ಬ್ಲ್ಯಾಕ್‌ಫ್ರಾಗ್ ಟೆಕ್ನಾಲಜೀಸ್ ಪ್ರೈ. ಲಿಮಿಟೆಡ್ ಮಣಿಪಾಲ ಮೂಲದ ಟೆಕ್ನಾಲಜಿ ಸ್ಟಾರ್ಟಪ್ ಆಗಿದ್ದು, ರೋಗನಿರೋಧಕ ಪೂರೈಕೆ ಸರಪಳಿಗಳನ್ನು ಸುಧಾರಿಸಲು ಪೇಟೆಂಟ್ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು ಇದರ ಉದ್ದೇಶವಾಗಿದೆ. 1500 ಯೂನಿಟ್ ಪ್ರತಿ ತಿಂಗಳ ಸಾಮರ್ಥ್ಯದ ವೈದ್ಯಕೀಯ ಸಾಧನ ಉತ್ಪಾದನಾ ಘಟಕವನ್ನು, ಇಬ್ಬರು ಇಂಜಿನಿಯರ್ ಗಳು ಪದವಿ ಪಡೆದ […]

ಮಾಹೆ: ವೈದ್ಯಕೀಯ ಸಾಧನ ಸ್ಟಾರ್ಟ್ ಅಪ್ ಉತ್ಪಾದನಾ ಸೌಲಭ್ಯದ ಉದ್ಘಾಟನೆ

ಮಣಿಪಾಲ: ಬ್ಲ್ಯಾಕ್‌ಫ್ರಾಗ್ ಟೆಕ್ನಾಲಜೀಸ್ ಪ್ರೈ. ಲಿಮಿಟೆಡ್ ಮಣಿಪಾಲ ಮೂಲದ ರೋಗನಿರೋಧಕ ಪೂರೈಕೆ ಸರಪಳಿಗಳನ್ನು ಸುಧಾರಿಸಲು ಪೇಟೆಂಟ್ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಟೆಕ್ನಾಲಜಿ ಸ್ಟಾರ್ಟಪ್ ಕಂಪನಿಯಾಗಿದೆ. ಬ್ಲ್ಯಾಕ್‌ಫ್ರಾಗ್ ತನ್ನ ಲಸಿಕೆ ಸಾರಿಗೆ ವ್ಯವಸ್ಥೆಯನ್ನು ಭಾರತದ ನಾಲ್ಕೂ ಮೂಲೆಗಳಲ್ಲಿ ನಿಯೋಜಿಸಿದೆ. ಮತ್ತೀಗ ಸಾಗರೋತ್ತರ ಮಾರುಕಟ್ಟೆಗೆ ಲಸಿಕೆ ಸಾರಿಗೆ ವ್ಯವಸ್ಥೆಯನ್ನು ಪೂರೈಸಲು ಉತ್ಪಾದನೆಯನ್ನು ಮೇಲ್ಮಟ್ಟಕ್ಕೇರಿಸಲು ಸನ್ನದ್ಧವಾಗಿದೆ. ವೈದ್ಯಕೀಯ ಸಾಧನಗಳ ಐ.ಎಸ್.ಒ 13485 ಮಾನದಂಡಗಳಿಗೆ ಅನುಗುಣವಾಗಿ ಕಂಪನಿಯು ತನ್ನ ಉತ್ಪಾದನಾ ಘಟಕವನ್ನು ಸ್ಥಾಪಿಸಿದೆ. ತಿಂಗಳಿಗೆ 1500 ಯೂನಿಟ್‌ಗಳವರೆಗೆ ವಿತರಣಾ ಸಾಮರ್ಥ್ಯವನ್ನು ಈ ಘಟಕವು ಹೊಂದಿದೆ. […]