ವೈದ್ಯಕೀಯ ಸಾಧನ ಉತ್ಪಾದನಾ ಘಟಕ ಆರಂಭ

ಮಣಿಪಾಲ: ಏಪ್ರಿಲ್ 29 ರಂದು ಮಣಿಪಾಲದಲ್ಲಿ ಬ್ಲ್ಯಾಕ್‌ಫ್ರಾಗ್ ಟೆಕ್ನಾಲಜೀಸ್‌ನ ವೈದ್ಯಕೀಯ ಸಾಧನ ಉತ್ಪಾದನಾ ಘಟಕವನ್ನು ಡಾ. ರಂಜನ್ ಪೈ, ಅಧ್ಯಕ್ಷರು, ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಗುಂಪು ಬೆಂಗಳೂರು, ಇವರು ಉದ್ಘಾಟಿಸಿದರು.

ಬ್ಲ್ಯಾಕ್‌ಫ್ರಾಗ್ ಟೆಕ್ನಾಲಜೀಸ್ ಪ್ರೈ. ಲಿಮಿಟೆಡ್ ಮಣಿಪಾಲ ಮೂಲದ ಟೆಕ್ನಾಲಜಿ ಸ್ಟಾರ್ಟಪ್ ಆಗಿದ್ದು, ರೋಗನಿರೋಧಕ ಪೂರೈಕೆ ಸರಪಳಿಗಳನ್ನು ಸುಧಾರಿಸಲು ಪೇಟೆಂಟ್ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು ಇದರ ಉದ್ದೇಶವಾಗಿದೆ.

1500 ಯೂನಿಟ್ ಪ್ರತಿ ತಿಂಗಳ ಸಾಮರ್ಥ್ಯದ ವೈದ್ಯಕೀಯ ಸಾಧನ ಉತ್ಪಾದನಾ ಘಟಕವನ್ನು, ಇಬ್ಬರು ಇಂಜಿನಿಯರ್ ಗಳು ಪದವಿ ಪಡೆದ ಆರು ತಿಂಗಳುಗಳಲ್ಲಿ ಪ್ರಾರಂಭಿಸಿರುವುದು ಶ್ಲಾಘನೀಯ ಕಾರ್ಯ ಎಂದು ಡಾ. ರಂಜನ್ ಪೈ ಅಭಿಪ್ರಾಯ ಪಟ್ಟರು.

ಮಾಹೆಯ ವಿವಿಧ ಅಧಿಕಾರಿಗಳು, ಅಧ್ಯಾಪಕರು, ಹೂಡಿಕೆ ಕಂಪನಿಗಳು ಮತ್ತು ವೈದ್ಯಕೀಯ ಸಾಧನ ತಯಾರಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.