ಕೆ.ಎಂ.ಸಿ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರಕ್ಕೆ ಅಂತರರಾಷ್ಟ್ರೀಯ ಕ್ಯಾನ್ಸರ್ ಕಂಟ್ರೋಲ್ ಒಕ್ಕೂಟದ ಮಾನ್ಯತೆ; ಜಾಗತಿಕ ಮಟ್ಟದ ಗುರುತಿಸುವಿಕೆ

ಮಣಿಪಾಲ: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರಕ್ಕೆ (ಎಂ ಸಿ ಸಿ ಸಿ ಸಿ), ಯೂನಿಯನ್ ಫಾರ್ ಇಂಟರ್ನ್ಯಾಷನಲ್ ಕ್ಯಾನ್ಸರ್ ಕಂಟ್ರೋಲ್ (UICC -ಅಂತರರಾಷ್ಟ್ರೀಯ ಕ್ಯಾನ್ಸರ್ ಕಂಟ್ರೋಲ್ ಒಕ್ಕೂಟ ) ನಲ್ಲಿ ಸದಸ್ಯತ್ವ ದೊರೆತಿದೆ ಎಂದು ಘೋಷಿಸಲು ಸಂಸ್ಥೆಯು ಹೆಮ್ಮೆಪಡುತ್ತದೆ. ಈ ಪ್ರತಿಷ್ಠಿತ ಮನ್ನಣೆಯಿಂದ ಕ್ಯಾನ್ಸರ್ ಆರೈಕೆ, ಸಂಶೋಧನೆ ಮತ್ತು ಶಿಕ್ಷಣದ ಕ್ಷೇತ್ರದಲ್ಲಿ ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ ಖ್ಯಾತಿಯು ಜಾಗತಿಕವಾಗಿ ಉನ್ನತ ಮಟ್ಟಕೆ ಏರಿದೆ. ಜಾಗತಿಕವಾಗಿ […]