ಡಿಜಿಟಲ್ ಆರ್ಟ್ ಈ ಯುವಕನ ಹಾರ್ಟ್: ಶೃಂಗೇರಿ ಹುಡುಗ ಮನೋಜ್ ಶರ್ಮರ ಕಲಾಕೃತಿಗಳಿಗೆ ಯೂತ್ ಫುಲ್ ಫಿದಾ !

ಇದು”ಬಣ್ಣದ ಕನಸುಗಾರರು” ಸರಣಿಯ ಮೂರನೆಯ ಕಂತು. ಈ ಸರಣಿಯಲ್ಲಿ  ನಮ್ಮ ನಡುವಿನ ಯುವ ಕಲಾವಿದರ ಬಗ್ಗೆ ಗಣಪತಿ ದಿವಾಣ ಬರೆಯುತ್ತಾರೆ. ಇಲ್ಲಿ ಬರುವ ಕಲಾವಿದರು  ನಿಮ್ಮ ಬದುಕಿಗೂ ಸ್ಪೂರ್ತಿಯಾಗುತ್ತಾರೆ, ಯುವ ಪ್ರತಿಭೆಗಳನ್ನು ಪರಿಚಯಿಸುವ ಈ ಸರಣಿ ನಿಮಗಿಷ್ಟವಾದೀತು ಎನ್ನುವುದು ನಮ್ಮ ನಂಬಿಕೆ. ನಿಮ್ಮ ಸುತ್ತ-ಮುತ್ತ ಇಂತಹ ಯುವಪ್ರತಿಭೆಗಳಿದ್ದರೆ ನಮ್ಮ ಗಮನಕ್ಕೆ ತನ್ನಿ. ತಾಂತ್ರಿಕ ಸಾಧ್ಯತೆಗಳು ಅಗಾಧವಾಗಿ ಬೆಳೆಯುತ್ತಾ ಇರುವಾಗ ಎಲ್ಲವೂ ಡಿಜಿಟಲೈಸ್ಡ್ ಆಗಿದೆ.  ಓದು, ಬರಹ, ಕಲಿಕೆ, ಶಿಕ್ಷಣವೂ ಈಗಿನ ಲಾಕ್ ಡೌನ್ ಹಂತದಲ್ಲಿ ತಂತ್ರಜ್ಞಾನ ಅವಲಂಬಿಸುವಂತಾಗಿದೆ. […]