ಉಡುಪಿ ಡಿಸಿ ಶಾಸಕ ಸುನೀಲ್ ಕುಮಾರ್ ಕೈಗೊಂಬೆ: ಮಂಜುನಾಥ ಪೂಜಾರಿ ಆರೋಪ

ಹೆಬ್ರಿ: ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರ ಕೈಗೊಂಬೆ. ಅವರು ಹಾಕಿದ ತಾಳಕ್ಕೆ ತಕ್ಕಂತೆ ಡಿಸಿ ಕುಣಿಯುತ್ತಾರೆ. ಇದರಿಂದ ಜಿಲ್ಲೆಯ ಜನತೆ ಸಂಕಷ್ಟ ಎದುರಿಸುವಂತಾಗಿದೆ ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ ಮುದ್ರಾಡಿ ಆರೋಪಿಸಿದ್ದಾರೆ. ಹೆಬ್ರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸಿಯವರು ಬಿಜೆಪಿ ಏಜೆಂಟ್ ರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಜನಸಾಮಾನ್ಯರ ಕೆಲಸ ಮಾಡುತ್ತಿಲ್ಲ. ಅವರಿಗೆ ಪಕ್ಷದ ಸೇವೆ ಮಾಡುವ ಮನಸಿದ್ದರೆ, ಅದೇ ಪಕ್ಷಕ್ಕೆ ಸೇರಿಕೊಳ್ಳಲಿ ಎಂದು ಡಿಸಿ ವಿರುದ್ಧ […]