ಕಾರ್ಕಳ: ಸಂಚಾರ ಮಾರ್ಗಗಳನ್ನು ಬೇಕಾಬಿಟ್ಟಿ ಬದಲಿಸುವ ಖಾಸಗಿ ಬಸ್ ಗಳು, ಗೊಂದಲದಲ್ಲೇ ಕಾದು ಹೈರಾಣಾಗುವ ಪ್ರಯಾಣಿಕರು,ನಿದ್ರೆಯಲ್ಲಿದೆ ವ್ಯವಸ್ಥೆ

ಕಾರ್ಕಳ: ಕಾರ್ಕಳದಿಂದ ಉಡುಪಿಗೆ ಮತ್ತು ಹೆಬ್ರಿ ಶಿವಮೊಗ್ಗದತ್ತ ಸಂಚರಿಸುವ ಕೆಲವೊಂದು ಎಕ್ಸ್ ಪ್ರೆಸ್ ಬಸ್ ಗಳು ಬಸ್ಸು ನಿಲ್ದಾಣದಿಂದ ಮಾರ್ಕೆಟು ರಸ್ತೆಯಾಗಿ ಉಡುಪಿಗೆ ಸಂಚರಿಸುವ ಬದಲು ನಗರದ ಮುಖ್ಯ ರಸ್ತೆ ರಥಬೀದಿ ಮೂಲಕ ಸಂಚರಿಸಿ ಪ್ರತೀ ದಿನ ನಿಯಮವನ್ನು ಉಲ್ಲಂಘಿಸುತ್ತಿವೆ. ಉಡುಪಿ, ಹೆಬ್ರಿ ಮಾರ್ಗದಲ್ಲಿ ಸಂಚರಿಸುವ ಬಸ್ ಗಳು ಕಾರ್ಕಳ ಮಾರ್ಕೆಟ್ ರಸ್ತೆಯ ಮೂಲಕ ಸಂಚರಿಸಿ, ಉಡುಪಿ,ಹೆಬ್ರಿಯಿಂದ ಮರಳಿ ಬರುವಾಗ ಮುಖ್ಯ ರಸ್ತೆಯ ಮೂಲಕ ಬಸ್ಸು ನಿಲ್ದಾಣಕ್ಕೆ ಬರಬೇಕು. ಆದರೆ ಹೆಚ್ಚಿನ ಬಸ್ಸುಗಳು ಉಡುಪಿಗೆ ಹೋಗುವಾಗಲೂ, ಬರುವಾಗಲೂ […]

ಕಣ್ಣಿಗೆ ಸುಂದರ, ದೇಹಕ್ಕೆ ವಿಷ: ಬಣ್ಣ ಬಣ್ಣದ ಮಾವಿನ ಹಣ್ಣು ಕೊಳ್ಳುವಾಗ ಹೀಗೆ ಪರೀಕ್ಷಿಸಿ ಕೊಳ್ಳಬಹುದು

ದಟ್ಟ ಹಳದಿ, ಕೇಸರಿ, ಕೆಂಬಣ್ಣದ ಮಾವಿನ ಹಣ್ಣುಗಳನ್ನ ಸಾಲಾಗಿ ಚೆಂದವಾಗಿ ಜೋಡಿಸಿಟ್ಟಿದ್ದನ್ನ ನೋಡ್ತಾ ಇದ್ರೆ ಆಹಾ! ಯಾರ ಬಾಯಲ್ಲಿ ನೀರು ಬರಲ್ಲ ಹೇಳಿ. ಅದೂ ಈ ಬೇಸಿಗೆಯ ಬಿಸಿಲ ಧಗೆಯಲ್ಲಿ ಬೆಂದು ಮನೆಗೆ ಬರುವ ಹೊತ್ತಿಗೆ ಮಾವಿನ ಹಣ್ಣು ಜೊತೆಯಲ್ಲಿದ್ದರೆ ಹೊಟ್ಟೆ ತಂಪಾಗುತ್ತದೆಯೆಂದು ಮಾವಿನ ಹಣ್ಣನ್ನು ಖಂಡಿತಾ ಕೊಳ್ಳುವ ಮನಸ್ಸಾಗುತ್ತದೆ. ಆದರೆ, ಈಗ ಹೀಗೆ ಕಣ್ಣಿಗೆ ಕುಕ್ಕುವ ಮಾವಿನಹಣ್ಣನ್ನು ಕೊಳ್ಳುವಾಗ ಎಚ್ಚರ ವಹಿಸಲೇಬೇಕು. ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತಿವೆ ಮಾವಿನ ಹಣ್ಣುಗಳು  ಕಣ್ಣಿಗೆ ಹೊಳೆಯುವಂತಹಾ ಚೆಂದದ ಬಣ್ಣ ಬಣ್ಣದ […]

ಮಣಿಪಾಲದ MSDC ಯಲ್ಲಿ ಶುರುವಾಗಿದೆ ಹೊಸ ವೃತ್ತಿಪರ ಕೋರ್ಸ್: MASTERS IN COSMETOLOGY: ವೃತ್ತಿಪರ ಜಗತ್ತಿಗೆ ಈ ಕೋರ್ಸ್ ಒಳ್ಳೆಯ ಆಯ್ಕೆ

ಮಣಿಪಾಲ: ವಿವಿಧ ವೃತ್ತಿಪರ ಕೋರ್ಸ್ ಗಳನ್ನು ನೀಡುತ್ತ ಬಂದಿರುವ ಮಣಿಪಾಲದಲ್ಲಿರುವ ಓರೇನ್ ಇಂಟರ್ನ್ಯಾಷನಲ್’ನಲ್ಲಿ ಎರಡು ವರ್ಷದ ಸ್ನಾತಕೋತ್ತರ ಪದವಿ ಆರಂಭಗೊಂಡಿದೆ MASTERS IN COSMETOLOGY ಯಲ್ಲಿ ಪದವಿ ನೀಡಲಾಗುತ್ತದೆ. ಈಗಾಗಲೇ ಬೇಡಿಕೆ ಇರುವ ವೃತ್ತಿಪರ ಕೋರ್ಸ್ ಇದಾಗಿದ್ದು ಕೆಲವೇ ಕೆಲವು ಸೀಟುಗಳು ಲಭ್ಯವಿದೆ. ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬೇಡಿಕೆಯಿರುವ ಕೋರ್ಸ್ಗಳಾದ ಹೇರ್, ಮೇಕಪ್, ನೇಲ್ ಆರ್ಟ್, ಸ್ಕಿನ್, ಕೋಸ್ಮೆಟೊಲೊಜಿ, ಮೊದಲಾದ ವಿಷಯಗಳ ಕೋರ್ಸ್ ಕೂಡ ಇಲ್ಲಿ ಲಭ್ಯವಿದೆ. ವೃತ್ತಿಪರ ಜಗತ್ತಿನಲ್ಲಿ ಮಿಂಚುವ ಆಸೆಯಿದ್ದರೆ ನೀವು ಕೂಡಲೇ ಈ […]

ಮಣಿಪಾಲ: 80 ಬಡಗಬೆಟ್ಟು- ಅಲೆವೂರು ಮುಖ್ಯರಸ್ತೆ ಕಾಮಗಾರಿ ಪರಿಶೀಲಿಸಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ

ಮಣಿಪಾಲ: ಮಣಿಪಾಲ- 80 ಬಡಗಬೆಟ್ಟು- ಅಲೆವೂರು ಮುಖ್ಯರಸ್ತೆಯು ಸುಮಾರು 8 ಕೋಟಿ 16 ಲಕ್ಷ ರೂಪಾಯಿ ಅನುದಾನದಲ್ಲಿ ಅಭಿವೃದ್ಧಿಗೊಳ್ಳುತ್ತಿದ್ದು ಗುರುವಾರ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಇಲಾಖಾಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು. ಗುಣಮಟ್ಟವನ್ನು ಕಾಯ್ದುಕೊಂಡು ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ 80 ಬಡಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಕೋಟ್ಯಾನ್, ಉಪಾಧ್ಯಕ್ಷೆ ರೂಪಾ ನಾಯಕ್, ಕಾಪು ಮಂಡಲ ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್ ಹಾಗೂ ಲೋಕೋಪಯೋಗಿ […]

ಮಣಿಪಾಲ: ಕೆ.ಎಂ.ಸಿ ಆಸ್ಪತ್ರೆಯಲ್ಲಿ ಪೆರೋರಲ್ ಎಂಡೋಸ್ಕೋಪಿಕ್ ಮೈಯೋಟೊಮಿ- ಎಂಡೋಸ್ಕೋಪಿಕ್ ಸರ್ಜರಿ ಕಾರ್ಯಾಗಾರ

ಮಣಿಪಾಲ: ಕೆ.ಎಂ.ಸಿ ಯ ಗ್ಯಾಸ್ಟ್ರೋಎಂಟರಾಲಜಿ ವಿಭಾಗವು ಸೆ. 2 ಮತ್ತು 3 ರಂದು ಎಂಡೋಸ್ಕೋಪಿಕ್ ಸರ್ಜರಿ-ಪೆರೋರಲ್ ಎಂಡೋಸ್ಕೋಪಿಕ್ ಮೈಯೋಟೊಮಿ ಕಾರ್ಯಾಗಾರವನ್ನು ಆಯೋಜಿಸಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಸುಧಾರಿತ ಎಂಡೋಸ್ಕೋಪಿಕ್ ಕಾರ್ಯವಿಧಾನಕ್ಕಾಗಿ ಮೊದಲ ತರಬೇತಿ ಕಾರ್ಯಾಗಾರವಾಗಿತ್ತು. ಅಚಾಲಾಸಿಯಾ ಕಾರ್ಡಿಯಾ, ಆಹಾರ ಸೇವಿಸುವಲ್ಲಿ ತೊಂದರೆ, ಅನ್ನನಾಳದ ಅಸ್ವಸ್ಥತೆಯನ್ನು ಪೆರೋರಲ್ ಎಂಡೋಸ್ಕೋಪಿಕ್ ಮೈಯೋಟೊಮಿ ಎಂಬ ಕಡಿಮೆ ಛೇದನದ, ಗಾಯ ರಹಿತ ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸೆಯಿಂದ ನಿರ್ವಹಿಸಬಹುದು. ಈ ಕಾರ್ಯವಿಧಾನವು ಅಂದುಕೊಂಡಂತೆ ಯಶಸ್ವಿಯಾಗಿ ನಡೆದರೆ ರೋಗಿಯನ್ನು 48 ಗಂಟೆಗಳ ಒಳಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ. ಬೆಂಗಳೂರು, […]