ಕಸ್ತೂರ್ಬಾ ಆಸ್ಪತ್ರೆ ಹೊರರೋಗಿ ಚಿಕಿತ್ಸೆ ವಿಭಾಗಕ್ಕೆ ರಜೆ

ಮಣಿಪಾಲ: ಆಗಸ್ಟ್ 19, 20, 21 ಮತ್ತು 31 ರಂದು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ, ಉಡುಪಿಯ ಡಾ. ಟಿ.ಎಂ.ಎ.ಪೈ ಆಸ್ಪತ್ರೆ, ಮತ್ತು ಕಾರ್ಕಳದ ಡಾ.ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆಗಳ ಹೊರರೋಗಿ ವಿಭಾಗಕ್ಕೆ ರಜೆ ಇರುತ್ತದೆ. ಆದಾಗ್ಯೂ, ಅಪಘಾತ ಮತ್ತು ತುರ್ತುಚಿಕಿತ್ಸಾ ವಿಭಾಗವು ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದು ವೈದ್ಯಕೀಯ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.