ಕೆರೆಯಂತಾದ ರಾಜೀವನಗರ ಜಂಕ್ಷನ್: ಸರ್ಕಸ್ ಮಾಡಿಕೊಂಡು ಸಂಚರಿಸಬೇಕಾದ ಅನಿವಾರ್ಯತೆ

ಉಡುಪಿ: 80 ಬಡಗಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಜೀವನಗರ- ಪ್ರಗತಿನಗರ ಮುಖ್ಯ ರಸ್ತೆಯಲ್ಲಿ ಡಾಂಬರು ಕಿತ್ತುಹೋಗಿ ಬೃಹತಾಕಾರದ ಹೊಂಡಬಿದ್ದಿದ್ದು, ಸಾರ್ವಜನಿಕರು ಆರಾಮಾಗಿ ಸಂಚರಿಸಲು ಸಾಧ್ಯವಾಗದಿರುವಷ್ಟು ದುಸ್ಥಿತಿಗೆ ರಸ್ತೆ ತಲುಪಿದೆ. ರಸ್ತೆಯ ತುಂಬಾ ಕೆಸರು ನೀರು ನಿಂತಿದ್ದು, ವಾಹನ ಸವಾರರು ಸರ್ಕಸ್ ಮಾಡಿಕೊಂಡು ಸಂಚರಿಸುವ ಪರಿಸ್ಥಿತಿ ಎದುರಾಗಿದೆ. ಕೆರೆಯೊಳಗೆ ರಸ್ತೆಯೋ, ರಸ್ತೆಯೊಳಗೆ ಕೆರೆಯೋ ಎನ್ನುವಷ್ಟರ ಮಟ್ಟಿಗೆ ರಸ್ತೆ ಹದಗೆಟ್ಟಿದೆ. ರಾಜೀವನಗರ ಜಂಕ್ಷನ್ ನಲ್ಲಿ ದೊಡ್ಡ ಗುಂಡಿ ನಿರ್ಮಾಣ ಆಗಿದ್ದು, ಮಳೆನೀರು ನಿಂತು ಕೆರೆಯಂತಾಗಿದೆ. ಸಾರ್ವಜನಿಕರು ಓಡಾಡಲು ಪರದಾಡಬೇಕಾದ ಸ್ಥಿತಿ‌ […]

ಮಣಿಪಾಲದಲ್ಲಿ ಗಾಂಜಾ ಸೇವನೆ: ಕುಕ್ಕಿಕಟ್ಟೆಯ ಯುವಕ ಪೊಲೀಸ್ ವಶಕ್ಕೆ

ಮಣಿಪಾಲ: ಗಾಂಜಾ ಸೇವನೆಗೆ ಸಂಬಂಧಿಸಿ ಯುವಕನೋರ್ವನನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಮಣಿಪಾಲ ವಿದ್ಯಾರತ್ನ ನಗರದಲ್ಲಿ ನಡೆದಿದೆ. ಕುಕ್ಕಿಕಟ್ಟೆಯ 24 ವರ್ಷದ ನಿಹಾತ್‌ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತ ಜೂ.11ರಂದು ವಿದ್ಯಾರತ್ನ ನಗರದ ಸಾರ್ವಜನಿಕ‌ ಸ್ಥಳದಲ್ಲಿ ಅಮಲು ಪದಾರ್ಥ ಸೇವಿಸಿದಂತೆ ಕಂಡುಬಂದಿದ್ದು, ಪೊಲೀಸರು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಜೂ.17 ರಂದು ವೈದ್ಯರು  ನೀಡಿರುವ ವರದಿಯಲ್ಲಿ ನಿಹಾತ್ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ಸಂಬಂಧ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಣಿಪಾಲ: ಡಿವೈಡರಿಗೆ ಸ್ಕೂಟರ್ ಡಿಕ್ಕಿ; ಯುವತಿ ಸಾವು

ಮಣಿಪಾಲ: ಸ್ಕೂಟರ್ ಡಿವೈಡರಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರೆ ಮೃತಪಟ್ಟು, ಸಹಸವಾರೆ ಗಾಯಗೊಂಡ ಘಟನೆ ಗುರುವಾರ ಮಣಿಪಾಲ ಟೆಂಪೋ ಸ್ಟ್ಯಾಂಡ್ ಬಳಿ ನಡೆದಿದೆ. ಮೃತಳನ್ನು ಹಿಂದುಜಾ ಎಂದು ಗುರುತಿಸಲಾಗಿದೆ. ವಿದ್ಯಾರತ್ನ ನಗರ ಕೀರ್ತಿ ಸಾಗರ ಅಪಾರ್ಟಮೆಂಟ್ ನ ನಿವಾಸಿ 25 ವರ್ಷದ ಎಂ. ವರ್ಷಿಣಿ ಗಾಯಗೊಂಡಿದ್ದಾರೆ. ವರ್ಷಿಣಿ ಅವರು ಸ್ನೇಹಿತೆ ಹಿಂದುಜಾ ಅವರ ವೆಸ್ಪ ಸ್ಕೂಟರ್ ನಲ್ಲಿ ಹಿಂಬದಿ ಸವಾರೆಯಾಗಿ ಮಣಿಪಾಲ ಟೈಗರ್ ಸರ್ಕಲ್ ನಿಂದ ಸಿಂಡಿಕೇಟ್ ಸರ್ಕಲ್ ಕಡೆಗೆ ಹೋಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. […]

ಮಣಿಪಾಲ: ಕೆ.ಕೆ.ಹೆಬ್ಬಾರರ ಜನ್ಮದಿನದ ಅಂಗವಾಗಿ ಪ್ರಪ್ರಥಮ ಬಾರಿಗೆ ಹಿಂದಿ ಭಾಷೆಯಲ್ಲಿ ಯಕ್ಷಗಾನ ಪ್ರದರ್ಶನ

ಮಣಿಪಾಲ: ಭಾರತದ ಆಧುನಿಕ ಕಲಾವಿದರಲ್ಲಿ ಒಬ್ಬರಾದ ಕೆ.ಕೆ.ಹೆಬ್ಬಾರರ ಜನ್ಮದಿನದ ಅಂಗವಾಗಿ, ಹೆಬ್ಬಾರ್ ಗ್ಯಾಲರಿ ಮತ್ತು ಆರ್ಟ್ ಸೆಂಟರ್ (ಎಚ್‌ಜಿಎಸಿ) ಜೂನ್ 15 ರಂದು ಬುಧವಾರ ಸಂಜೆ 6 ಗಂಟೆಗೆ ಮಣಿಪಾಲ್ ಸೆಂಟರ್ ಫಾರ್ ಹ್ಯುಮಾನಿಟೀಸ್ ನ ಗಂಗೂಬಾಯಿ ಹಾನಗಲ್ ಸಭಾಂಗಣದಲ್ಲಿ ‘ಚಕ್ರವ್ಯೂಹ್’ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಿದೆ. ಉಡುಪಿಯ ಯಕ್ಷಗಾನ ಕೇಂದ್ರದ ಖ್ಯಾತ ಗುರು ಸಂಜೀವ್ ಸುವರ್ಣರವರು ಈ ಯಕ್ಷಗಾನವನ್ನು ನಿರ್ದೇಶಿಸಿದ್ದು, ಮಣಿಪಾಲದಲ್ಲಿ ಪ್ರಪ್ರಥಮ ಬಾರಿಗೆ ಹಿಂದಿ ಭಾಷೆಯಲ್ಲಿ ಬಯಲಾಟ ನಡೆಯಲಿದೆ. ಬಹುತೇಕ ಕನ್ನಡ ಅಥವಾ ತುಳು ಭಾಷೆಯಲ್ಲಿ […]

ಶ್ರೀ ಶಾರದ ಟ್ರೈನಿಂಗ್ ಇನ್ಸ್ಟಿಟ್ಯೂಟ್: ಮಾಂಟೆಸ್ಸರಿ/ ನರ್ಸರಿ ಟೀಚರ್ಸ್ ಟ್ರೈನಿಂಗ್ ಕೋರ್ಸಿಗೆ ಪ್ರವೇಶಾರಂಭ

ಮಣಿಪಾಲ: ಭಾರತ ಸರಕಾರದ ಪ್ರತಿನಿಧಿಯಾದ ಭಾರತ್ ಸೇವಕ್ ಸಮಾಜ್‌ ಇದರ ಆಶ್ರಯದಲ್ಲಿ ನಡೆಸಲ್ಪಡುವ ಮಣಿಪಾಲದ ‘ಶ್ರೀ ಶಾರದ ಟ್ರೈನಿಂಗ್ ಇನ್ಸ್ಟಿಟ್ಯೂಟ್ ನಲ್ಲಿ 1 ವರ್ಷದ ಡಿಪ್ಲೊಮಾ ಇನ್ ಮಾಂಟೆಸ್ಸರಿ/ನರ್ಸರಿ ಟೀಚರ್ಸ್ ಟ್ರೈನಿಂಗ್ ಕೋರ್ಸಿಗೆ ಪಿಯುಸಿ, ಡಿಗ್ರಿ ಮೇಲ್ಪಟ್ಟ ವಿದ್ಯಾಭ್ಯಾಸ ಹೊಂದಿರುವ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಮಹಿಳೆಯರು ಸ್ವಾವಲಂಬಿಗಳಾಗಬೇಕೆಂಬ ಉದ್ದೇಶದಿಂದ ಸ್ಥಾಪಿಸಿರುವ ಈ ತರಬೇತಿ ಸಂಸ್ಥೆಯು ವಿದ್ಯಾರ್ಥಿಗಳಿಗೆ ಸಂಪೂರ್ಣ ಪ್ರಾಯೋಗಿಕ ತರಬೇತಿ ನೀಡಿ, ಉದ್ಯೋಗ ಪಡೆಯುವಲ್ಲಿ ಸಹಕಾರ ನೀಡುತ್ತದೆ. ತರಬೇತಿ ಮುಗಿಸಿದ ಸುಮಾರು 350 ಕ್ಕೂ ಹೆಚ್ಚು […]