ವಿನೋಬಾ ಭಾವೆ ಅವರ ಭೂದಾನ ಚಳುವಳಿ ಗಾಂಧಿತತ್ವದ ಶ್ರೇಷ್ಠ ಉದಾಹರಣೆ: ವಿಶಂಬರನಾಥ್ ಅಗರ್ವಾಲ್

ಮಣಿಪಾಲ: ಭೂದಾನ ಆಂದೋಲನವು ಆಚಾರ್ಯ ವಿನೋಬಾ ಭಾವೆಯವರ ಒಂದು ಅನನ್ಯ ಕೊಡುಗೆಯಾಗಿದೆ ಮತ್ತು ಇದರ ತತ್ವ ಮತ್ತು ಕಾರ್ಯ ನಿಜವಾದ ಅರ್ಥದಲ್ಲಿ ಗಾಂಧಿವಾದದ ಮೇಲೆ ನಿಂತಿದೆ ಎಂದು ವಿದ್ವಾಂಸ ವಿಶಂಬರನಾಥ್ ಅಗರ್ವಾಲ್ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಶ್ರಯದಲ್ಲಿ ನಡೆದ ‘ವಿನೋಬಾ ಭಾವೆ: ಜೀವನ ಮತ್ತು ತತ್ವ’ ಕುರಿತ ಉಪನ್ಯಾಸದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸ್ವಯಂಪ್ರೇರಿತವಾಗಿ ಭೂಮಿ ಅಥವಾ ಹಣವನ್ನು ದಾನ ಮಾಡುವುದು ಹೆಚ್ಚು ಮಾನವೀಯ ಸಮಾಜವನ್ನು ರೂಪಿಸುವತ್ತ ನಿಜವಾದ ಗಾಂಧಿತತ್ವದ […]

ಅಕ್ಟೋಬರ್ 11 ರಂದು ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ಉಡುಪಿ: ಅಕ್ಟೋಬರ್ 11 ರಂದು ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ. 110ಕೆವಿ ಕಾರ್ಕಳ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಮುಂಡ್ಲಿ ಫೀಡರ್‌ನಲ್ಲಿ ಲೈನಿನ ನಿರ್ವಹಣೆ ಕಾರ್ಯ ಹಮ್ಮಿಕೊಂಡಿರುವುದರಿಂದ ಬೆಳಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆಯ ವರೆಗೆ ಮುಂಡ್ಲಿ, ದುರ್ಗ, ತೆಳ್ಳಾರ್, ಪೊಲ್ಲಾರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಉಡುಪಿ ನಿಟ್ಟೂರಿನಲ್ಲಿರುವ 1*10 ಎಂ.ವಿ.ಎ, 110/11ಕೆವಿ ಪರಿವರ್ತಕವನ್ನು 1*20 ಎಂ.ವಿ.ಎ ಗೆ ಉನ್ನತೀಕರಿಸುವ […]

ಕರ್ನಾಟಕದಲ್ಲೇ ಮೊದಲ ಬಾರಿಗೆ ಅನ್ನನಾಳದ ರಂಧ್ರಕ್ಕೆ ಮತ್ತು ಅನಾಸ್ಟೊಮೊಟಿಕ್ ಸೋರಿಕೆ ಪ್ರಕ್ರಿಯೆಗೆ ಅಪರೂಪದ ಎಂಡೋಸ್ಕೋಪಿ ಸ್ಪಾಂಜ್ ಚಿಕಿತ್ಸೆ ನಡೆಸಿದ ಕೆಎಂಸಿ ಆಸ್ಪತ್ರೆ

ಮಣಿಪಾಲ: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗವು ಮೊದಲ ಬಾರಿಗೆ ಅನ್ನನಾಳದ ರಂಧ್ರ ಕ್ಕೆ ಮತ್ತು ಅನಾಸ್ಟೊಮೊಟಿಕ್ ಸೋರಿಕೆ ಪ್ರಕ್ರಿಯೆಗೆ ಅಪರೂಪದ ಹಾಗೂ ಕರ್ನಾಟಕದಲ್ಲಿ ಮೊದಲ ಬಾರಿಗೆ ಎಂಡೋಸ್ಕೋಪಿ ಸ್ಪಾಂಜ್ (ಎಂಡೋವಾಕ್) ಚಿಕಿತ್ಸೆಯನ್ನು ನಡೆಸಿತು. ಶಸ್ತ್ರಚಿಕಿತ್ಸಾ ಅನಾಸ್ಟೊಮೊಸಿಸ್ ವಿಫಲವಾದಾಗ ಮತ್ತು ಶಸ್ತ್ರಚಿಕಿತ್ಸಾ ಸಂಪರ್ಕದಿಂದ ಮರುಸಂಪರ್ಕಿತ ದೇಹದ ಚಾನಲ್‌ನ ವಿಷಯಗಳು ಸೋರಿಕೆಯಾದಾಗ ಅನಾಸ್ಟೊಮೊಟಿಕ್ ಸೋರಿಕೆ ಸಂಭವಿಸುತ್ತದೆ. ಇದು ಕರುಳಿನ ಛೇದನದ ಶಸ್ತ್ರಚಿಕಿತ್ಸೆಯ ಅತ್ಯಂತ ಗಂಭೀರ ತೊಡಕುಗಳಲ್ಲಿ ಒಂದಾಗಿದೆ. 51 ವರ್ಷದ ವ್ಯಕ್ತಿಗೆ ಅನ್ನನಾಳದ […]

ಮಾಹೆ ಗಾಂಧಿಯನ್ ಸೆಂಟರಿನಲ್ಲಿ ಗಾಂಧಿ ಜಯಂತಿ ಆಚರಣೆ

ಮಣಿಪಾಲ: ಜಾತಿ, ಧರ್ಮ, ಬಣ್ಣ, ಜನಾಂಗ ಇತ್ಯಾದಿ ತಾರತಮ್ಯದಿಂದ ಮುಕ್ತವಾದ ಮತ್ತು ಶಾಂತಿ, ಸಮಾನತೆ, ಅಹಿಂಸೆ ಮತ್ತು ಸಹಿಷ್ಣುತೆಯ ಮೇಲೆ ಆಧರಿತವಾದ ‘ಗಾಂಧಿಯ ಪ್ರಾಪಂಚಿಕ ದೃಷ್ಟಿ ಮತ್ತು ಪ್ರಪಂಚ’ ಬೇಕು ಎಂದು ಮಾಹೆಯ ಕುಲಪತಿ ಲೆಫ್ಟಿನೆಂಟ್ ಜನರಲ್ ಡಾ. ಎಂ.ಡಿ. ವೆಂಕಟೇಶ್ ಪ್ರತಿಪಾದಿಸಿದರು. ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಯೋಜಿಸಿದ್ದ ಗಾಂಧಿ ಜಯಂತಿ ಆಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಾತ್ಮಾ ಗಾಂಧೀಜಿಯವರು ಆದರ್ಶಪ್ರಾಯವಾದ ಜೀವನ ನಡೆಸಿದವರು ಮತ್ತು ಅವರ ಆದರ್ಶಗಳ […]

ಮಾಹೆ: ನರ್ಸಿಂಗ್ ವಿದ್ಯಾರ್ಥಿಗಳಿಂದ ರಕ್ತದಾನ ಶಿಬಿರ

ಮಣಿಪಾಲ: ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆ ಅಂಗವಾಗಿ ಮಾಹೆಯ ಕಾಲೇಜ್ ಆಫ್ ನರ್ಸಿಂಗ್ ನ ಆರೋಗ್ಯ ಮತ್ತು ಸಮಾಜ ಕಲ್ಯಾಣ ಸಮಿತಿ ವತಿಯಿಂದ ರಕ್ತದಾನ ಶಿಬಿರವನ್ನು ಅ. 01 ರಂದು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಬ್ಲಡ್ ಬ್ಯಾಂಕ್‌ನಲ್ಲಿ ಆಯೋಜಿಸಲಾಗಿತ್ತು. ನರ್ಸಿಂಗ ವಿಭಾಗದ ಒಟ್ಟು 72 ವಿದ್ಯಾರ್ಥಿಗಳು, 8 ಶಿಕ್ಷಕರು ಮತ್ತು ಮಣಿಪಾಲ ಸಮೂಹ ಸಂಸ್ಥೆಯ ೧೦ ಸಿಬ್ಬಂದಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. ಆರೋಗ್ಯ ಮತ್ತು ಸಮಾಜ ಕಲ್ಯಾಣ ಸಮಿತಿ ವಿಭಾಗದ ಅಧ್ಯಕ್ಷೆ ನರ್ಸಿಂಗ್ ವಿದ್ಯಾರ್ಥಿನಿ ಅನುಷಾ ವರ್ಗೀಸ್ […]