ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ನಲ್ಲಿ ಪ್ರವೇಶಾತಿ ಆರಂಭ

ಮಣಿಪಾಲ: ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ನಲ್ಲಿ ಮೂರು ನೂತನ ಮಾದರಿಯ ಪದವಿ ಮತ್ತು ಸ್ನಾತಕ್ಕೋತ್ತರ ಕಾರ್ಯಕ್ರಮಗಳ ಪ್ರವೇಶಾತಿ ಪ್ರಾರಂಭವಾಗಿದೆ ಮತ್ತು ಈ ತಿಂಗಳ ಅಂತ್ಯದವರೆಗೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಮೂರು ನೂತನ ಕಾರ್ಯಕ್ರಮಗಳಾದ – ಎಂಎ (ಇಕಾಸೊಫಿಕಲ್ ಎಸ್ಥೆಟಿಕ್ಸ್) , ಎಂಎ (ಆರ್ಟ್ ಅಂಡ್ ಪೀಸ್ ಸ್ಟಡೀಸ್), ಬಿಎ (ಎಸ್ಥೆಟಿಕ್ಸ್ ಅಂಡ್ ಪೀಸ್ ಸ್ಟಡೀಸ್) – ಅಪಾರವಾದ ಸಮಕಾಲೀನ ಪ್ರಾಮುಖ್ಯತೆಯೊಂದಿಗೆ, ವಿವಿಧ ಕಲಿಕಾ ವಿಷಯಗಳ ಮೇಲೆ ಕೇಂದ್ರಿತವಾಗಿದೆ. ಎರಡು ಸ್ನಾತಕೋತ್ತರ […]
ಮಣಿಪಾಲಕಸ್ತೂರ್ಬಾ ಆಸ್ಪತ್ರೆ: ಗ್ಯಾಸ್ಟ್ರೋಇಂಟೆಸ್ಟಿನಲ್ ರೇಡಿಯೇಷನ್ ಆಂಕೊಲಾಜಿ ಸ್ಪೆಷಾಲಿಟಿ ಕ್ಲಿನಿಕ್ ಆರಂಭ

ಮಣಿಪಾಲ: ರೇಡಿಯೊಥೆರಪಿ ಮತ್ತು ಆಂಕೊಲಾಜಿ ವಿಭಾಗದ ಸಹಯೋಗದೊಂದಿಗೆ, ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಗ್ಯಾಸ್ಟ್ರೊಇಂಟೆಸ್ಟಿನಲ್ ರೇಡಿಯೇಶನ್ ಆಂಕೊಲಾಜಿ ಸ್ಪೆಷಾಲಿಟಿ ಕ್ಲಿನಿಕ್ ಗೆ ಜುಲೈ 8 ರಂದು ಚಾಲನೆ ನೀಡಲಾಯಿತು. ಇಂದು ನಡೆದ ಸರಳ ಕಾರ್ಯಕ್ರಮದಲ್ಲಿ ಕೆಎಂಸಿ, ಮಣಿಪಾಲದ ಡೀನ್ ಡಾ ಶರತ್ ಕೆ ರಾವ್ ಮತ್ತು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮುಖ್ಯ ನಿರ್ವಹಣಾಧಿಕಾರಿ ಡಾ ಆನಂದ್ ವೇಣುಗೋಪಾಲ್ ಅವರು ಜಂಟಿಯಾಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಡಾ ಶರತ್ ಕೆ ರಾವ್ ಹೊಸ ಸ್ಪೆಷಾಲಿಟಿ ಮತ್ತು […]
ಆರ್.ಎಸ್.ಬಿ ಸಭಾಭವನದ ಮುಂಭಾಗದಲ್ಲಿ ಆರ್.ಎಸ್.ಬಿ ವೃತ್ತ ನಾಮಕರಣ: ಆಕ್ಷೇಪಣೆ ಆಹ್ವಾನ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಮಣಿಪಾಲ ಆರ್.ಎಸ್.ಬಿ ಸಭಾಭವನದ ಮುಂಭಾಗದಲ್ಲಿ ವೃತ್ತ ನಿರ್ಮಿಸಿ, ಆರ್.ಎಸ್.ಬಿ ವೃತ್ತ ಎಂದು ನಾಮಕರಣ ಮಾಡಲು ಮಣಿಪಾಲದ ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘದ ಅಧ್ಯಕ್ಷರು ಮನವಿ ಸಲ್ಲಿಸಿದ್ದು, ಈ ಕುರಿತು ಆಕ್ಷೇಪಣೆಗಳಿದ್ದಲ್ಲಿ ಸಾರ್ವಜನಿಕರು 30 ದಿನಗಳ ಒಳಗೆ ನಗರಸಭಾ ಕಚೇರಿಗೆ ಸಲ್ಲಿಸಬಹುದಾಗಿದೆ ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.
ಮಣಿಪಾಲ ಟೌನ್ ರೋಟರಿ ಕ್ಲಬ್ ನ ಪದಗ್ರಹಣ ಕಾರ್ಯಕ್ರಮ: ರೋಟರಿ ಕ್ಲಬ್ ನ ಸಮಾಜ ಸೇವೆ ಅಪೂರ್ವವಾದದ್ದು: ರೋ.ದೇವಾನಂದ್

ಉಡುಪಿ: ಪರರಿಗೆ ಒಳಿತನ್ನು ಬಯಸುವುದೇ ಧರ್ಮ. ರೋಟರಿಯ ಮೂಲ ಧ್ಯೇಯವೇ ಇದಾಗಿದ್ದು, ಮಣಿಪಾಲ ಟೌನ್ ರೋಟರಿ ಕ್ಲಬ್, ಸ್ಕಿನ್ ಬ್ಯಾಂಕ್, ಮಕ್ಕಳ ಕ್ಯಾನ್ಸರ್ ನಿಧಿ ಇತ್ಯಾದಿ ಹಲವಾರು ಯೋಜನೆಗಳಿಂದ ಗುರುತಿಸಲ್ಪಡುತ್ತಿದೆ ಎಂದು ನಿಯೋಜಿತ ಜಿಲ್ಲಾ ಗವರ್ನರ್ ದೇವ್ ಆನಂದ್ ಹೇಳಿದರು. ಮಣಿಪಾಲ ಟೌನ್ ರೋಟರಿ ಕ್ಲಬ್ ನ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಸೇವೆ ಮತ್ತು ವ್ಯಕ್ತಿತ್ವ ವಿಕಸನವನ್ನು ಕೊಡುವ ರೋಟರಿ ಸಂಸ್ಥೆ ಅಂತಾರಾಷ್ಟ್ರೀಯವಾಗಿ ಮನುಕುಲದ ಸಹಬಾಳ್ವೆ, ಪರಿಸರ ರಕ್ಷಣೆ, ಶಾಂತಿ ಮತ್ತು ಅಭಿವೃದ್ಧಿಯನ್ನು ನಡೆಸುತ್ತಿರುವ […]
ಮಾಹೆಯ ಸಂಶೋಧಕರಿಂದ ಮೈಕ್ರೋಫ್ಲೂಯಿಡಿಕ್ ಕ್ಯಾನ್ಸರ್-ಆನ್-ಚಿಪ್ ತಂತ್ರಜ್ಞಾನ ಅಭಿವೃದ್ಧಿ

ಮಣಿಪಾಲ: ಮಾಹೆಯ ಮಣಿಪಾಲ ಸ್ಕೂಲ್ ಆಫ್ ಲೈಫ್ ಸೈನ್ಸಸ್ ನ ಸಹಾಯಕ ಪ್ರಾಧ್ಯಾಪಕ ಮತ್ತು ಯುವ ಸಂಶೋಧಕ ಡಾ. ಸಂಜಿಬನ್ ಚಕ್ರಬರ್ತಿ, ಮೈಕ್ರೋಫ್ಲೂಯಿಡಿಕ್ ಕ್ಯಾನ್ಸರ್-ಆನ್- ಚಿಪ್ ಎನ್ನುವ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಕ್ಯಾನ್ಸರ್ ರೋಗಿಯಿಂದ ಬಯಾಪ್ಸಿ ಮೂಲಕ ಪಡೆದ ಗೆಡ್ಡೆಯಲ್ಲಿ ಔಷಧ ಪ್ರತಿಕ್ರಿಯೆಯ ನೇರ ಮೌಲ್ಯಮಾಪನವನ್ನು ಮಾಡಲು ಸಹಾಯ ಮಾಡುತ್ತದೆ. ಇದು ಔಷಧ-ಸೂಕ್ಷ್ಮ ಮತ್ತು ಔಷಧ-ನಿರೋಧಕ ಗೆಡ್ಡೆಗಳನ್ನು ಗುರುತಿಸಲು ಕ್ರಿಯಾತ್ಮಕ ಓದುವಿಕೆಗಳನ್ನು ಒದಗಿಸುತ್ತದೆ. ವೈಯಕ್ತಿಕ ಕ್ಯಾನ್ಸರ್ ಚಿಕಿತ್ಸೆಯಲ್ಲಿ ವಿವಿಧ ರೀತಿಯ ಕ್ಯಾನ್ಸರ್‌ಗಳನ್ನು ನಿರ್ವಹಿಸುವಾಗ ಈ ಸಂಶೋಧನೆಗಳು […]