ಮಣಿಪಾಲ ಟೌನ್‌ ರೋಟರಿ ಕ್ಲಬ್ ನ ಪದಗ್ರಹಣ ಕಾರ್ಯಕ್ರಮ: ರೋಟರಿ ಕ್ಲಬ್ ನ ಸಮಾಜ ಸೇವೆ ಅಪೂರ್ವವಾದದ್ದು: ರೋ.ದೇವಾನಂದ್

ಉಡುಪಿ: ಪರರಿಗೆ ಒಳಿತನ್ನು ಬಯಸುವುದೇ ಧರ್ಮ. ರೋಟರಿಯ ಮೂಲ ಧ್ಯೇಯವೇ ಇದಾಗಿದ್ದು, ಮಣಿಪಾಲ ಟೌನ್ ರೋಟರಿ ಕ್ಲಬ್, ಸ್ಕಿನ್ ಬ್ಯಾಂಕ್, ಮಕ್ಕಳ ಕ್ಯಾನ್ಸರ್ ನಿಧಿ ಇತ್ಯಾದಿ ಹಲವಾರು ಯೋಜನೆಗಳಿಂದ ಗುರುತಿಸಲ್ಪಡುತ್ತಿದೆ ಎಂದು ನಿಯೋಜಿತ ಜಿಲ್ಲಾ ಗವರ್ನರ್ ದೇವ್ ಆನಂದ್ ಹೇಳಿದರು.

ಮಣಿಪಾಲ ಟೌನ್‌ ರೋಟರಿ ಕ್ಲಬ್ ನ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,
“ಸೇವೆ ಮತ್ತು ವ್ಯಕ್ತಿತ್ವ ವಿಕಸನವನ್ನು ಕೊಡುವ ರೋಟರಿ ಸಂಸ್ಥೆ ಅಂತಾರಾಷ್ಟ್ರೀಯವಾಗಿ ಮನುಕುಲದ ಸಹಬಾಳ್ವೆ, ಪರಿಸರ ರಕ್ಷಣೆ, ಶಾಂತಿ ಮತ್ತು ಅಭಿವೃದ್ಧಿಯನ್ನು ನಡೆಸುತ್ತಿರುವ ಸುವ್ಯವಸ್ಥಿತವಾದ ಸಂಸ್ಥೆ ಎಂದರು.

ನೂತನ ಅಧ್ಯಕ್ಷರಾಗಿ ನಿತ್ಯಾನಂದ ನಾಯಕ್, ಕಾರ್ಯದರ್ಶಿಯಾಗಿ ಡಾ. ಗುರುಮೂರ್ತಿ ಸಂಗಮ್ ಮತ್ತು ಪಧಾದಿಕಾರಿಗಳ ಪದಗ್ರಣ ಕಾರ್ಯಕ್ರಮ ಎಂಜಿಎಂ ರವೀಂದ್ರ ಮಂಟಪದಲ್ಲಿ ನಡೆಯಿತು.

ಮಾಹೆಯ ಮಕ್ಕಳ ಕ್ಯಾನ್ಸರ್ ನಿಧಿಗೆ ₹25.00 ಲಕ್ಷವನ್ನು ದೇಣಿಗೆಯಾಗಿ ಹಸ್ತಾಂತರಿಸಲಾಯಿತು.

ಶುಭ ಸಮಾರಂಭಗಳಲ್ಲಿ ಆಹಾರ ಪೋಲಾಗುವುದನ್ನು ನಿಲ್ಲಿಸಿ ಅನಾಥಾಶ್ರಮಗಳಿಗೆ ನೀಡುವಂತೆ, ಅಂಗಾಂಗ ದಾನ ಮತ್ತು ಚರ್ಮದಾನ ಮಾಡುವ ಮನೋಭಾವ ಬೆಳೆಯಲು ಸಹಾಯ ಮಾಡುವ ಫಲಕಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಇರಿಸುವ ರೋಟರಿ ಯೋಜನೆಗಳನ್ನು ಸಾಂಕೇತಿಕವಾಗಿ ಪ್ರಾರಂಭಿಸಲಾಯಿತು.

ಎಜಿಗಳಾದ ರಾಮಚಂದ್ರ ಉಪಾಧ್ಯಾಯ, ಸುರೇಶ್ ಶೆಣೈ, ಅಧ್ಯಕ್ಷ ಗಣೇಶ್ ನಾಯಕ್, ಸಚ್ಚಿದಾನಂದ ವಿ ನಾಯಕ್, ಬಾಲಕೃಷ್ಣ ಕುಮಾರ್ ಉಪಸ್ಥಿತರಿದ್ದರು.

ಭಾರತೀ ನಾಯಕ್ ಮತ್ತು ರತ್ನದೀಪ ಭಟ್ಟಾಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಗುರುಮೂರ್ತಿ ವಂದಿಸಿದರು.