ಶಿವಪಾಡಿ: ಫೆ.25 ರಿಂದ ಮಾ. 5 ರವರೆಗೆ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಐತಿಹಾಸಿಕ ಅತಿರುದ್ರಯಾಗ

ಮಣಿಪಾಲ: ಇಲ್ಲಿನ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಲೋಕ ಕಲ್ಯಾಣ ಮತ್ತು ವಿಶ್ವಶಾಂತಿಗಾಗಿ ಐತಿಹಾಸಿಕ ಅತಿರುದ್ರಯಾಗವನ್ನು ಫೆ.25 ರಿಂದ ಮಾ. 4 ರವರೆಗೆ ಆಯೋಜಿಸಲಾಗುವುದು. ಯಾಗದ ಕುರಿತು ನಡೆದ ಸಭೆಯ ಉದ್ಘಾಟನೆಯಲ್ಲಿ ಮಾತನಾಡಿದ ಮಣಿಪಾಲ ವಿಶ್ವ ವಿದ್ಯಾಲಯದ ಸಹಕುಲಪತಿ ಹಾಗೂ ಯಾಗ ಸಮಿತಿಯ ಗೌರವಾಧ್ಯಕ್ಷ ಡಾ. ಎಚ್.ಎಸ್. ಬಲ್ಲಾಳ್, ಕಾರ್ಯಕ್ರಮಕ್ಕೆ ಬೇಕಾಗುವ ಎಲ್ಲ ರೀತಿಯ ಸಹಕಾರವನ್ನು ಸಂಸ್ಥೆಯ ಪರವಾಗಿ ನೀಡಲಾಗುವುದು ಎಂದರು. ಶೃಂಗೇರಿ ಶ್ರೀ ಜಗದ್ಗುರು ಶಂಕರಾಚಾರ್ಯ ಮಠದ ಉಡುಪಿ ಶಾಖೆಯ ಧರ್ಮಾಧಿಕಾರಿ ನಾಗೇಶ್ ಶಾಸ್ತ್ರಿ ಇವರು […]
ಕೆ.ಎಂ.ಸಿ: ಎರಡನೇ ಅಂತರರಾಷ್ಟ್ರೀಯ ಗ್ಲೋಬಲ್ ಕ್ಯಾನ್ಸರ್ ಕನ್ಸೋರ್ಟಿಯಂ ಸಮ್ಮೇಳನ ಉದ್ಘಾಟನೆ

ಮಣಿಪಾಲ: ಮಣಿಪಾಲದ ಫಾರ್ಚೂನ್ ಇನ್ ವ್ಯಾಲಿ ವ್ಯೂನಲ್ಲಿ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ ಮಣಿಪಾಲ, ಜಾಗತಿಕ ಕ್ಯಾನ್ಸರ್ ಒಕ್ಕೂಟ ಮತ್ತು ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರಗಳು ಜಂಟಿಯಾಗಿ ಎರಡನೇ ಅಂತರರಾಷ್ಟ್ರೀಯ ಗ್ಲೋಬಲ್ ಕ್ಯಾನ್ಸರ್ ಕನ್ಸೋರ್ಟಿಯಂ ಸಮ್ಮೇಳನವನ್ನು ಜನವರಿ 7 ಮತ್ತು 8 ರಂದು ಆಯೋಜಿಸಿದ್ದು, ಸಮ್ಮೇಳನದಲ್ಲಿ 200 ಕ್ಕೂ ಹೆಚ್ಚು ದೇಶ ವಿದೇಶಗಳ ಪ್ರತಿನಿಧಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದಾರೆ. ಅಂತರರಾಷ್ಟ್ರೀಯ ಸಂಸ್ಥೆಗಳಾದ ಮಾರ್ಕಿ ಕ್ಯಾನ್ಸರ್ ಸೆಂಟರ್, ಮೇಯೊ ಕ್ಲಿನಿಕ್, ಲಾಹೆ ಹಾಸ್ಪಿಟಲ್ ಹಾಗೂ ಮೆಡಿಕಲ್ ಸೆಂಟರ್ […]
ಕಸ್ತೂರ್ಬಾ ಆಸ್ಪತ್ರೆಯ ಡೀನ್ ಆಗಿ ಡಾ. ಪದ್ಮರಾಜ್ ಹೆಗ್ಡೆ ನೇಮಕ

ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಮೂತ್ರಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹಾಗೂ ಕೆ.ಎಂ.ಸಿ ಆಸ್ಪತ್ರೆಯ ಉಪ ವೈದ್ಯಕೀಯ ಅಧೀಕ್ಷಕ ಡಾ. ಪದ್ಮರಾಜ್ ಹೆಗ್ಡೆ ಅವರನ್ನು ಕಸ್ತೂರ್ಬಾ ಆಸ್ಪತ್ರೆಯ ಡೀನ್ ಆಗಿ ಜ.1ರಂದು ನೇಮಕ ಮಾಡಲಾಗಿದೆ. ಡಾ.ಪದ್ಮರಾಜ್ ಹೆಗ್ಡೆ ಉಡುಪಿ ಜಿಲ್ಲೆಯ ಆತ್ರಾಡಿಯವರು. ಇವರು ಎಂಬಿಬಿಎಸ್ ಮತ್ತು ಎಂಎಸ್ ಜನರಲ್ ಸರ್ಜರಿ ಮತ್ತು ಎಂ.ಸಿಎಚ್ ಅನ್ನು (ಜೆನಿಟೋ ಯುರಿನರಿ ಸರ್ಜರಿ) ಮಣಿಪಾಲದ ಕೆಎಂಸಿಯಲ್ಲಿ ಪೂರ್ಣಗೊಳಿಸಿದ್ದಾರೆ. ಸ್ಕಾಟ್ಲೆಂಡ್ ನ ಗ್ಲಾಸ್ಗೋ ವಿಶ್ವವಿದ್ಯಾಲಯವು ಇವರಿಗೆ ಎಫ್‌ಆರ್‌ಸಿಎಸ್ ನೀಡಿದೆ ಮತ್ತು ಇವರು ಆಸ್ಪತ್ರೆ ಆಡಳಿತ ಮತ್ತು […]
ಕೆಳಪರ್ಕಳ ರಸ್ತೆ ಕಾಮಗಾರಿ ಪೂರ್ಣ: ಕೆ.ರಘುಪತಿ ಭಟ್

ಕಾರ್ಕಳ: ಇಲ್ಲಿನ ಪರ್ಕಳ-ಮಣಿಪಾಲ ರಾ.ಹೆ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು, ಮಣಿಪಾಲದಿಂದ ಉಡುಪಿ ಸಂಪರ್ಕಿಸುವ ವಾಹನಗಳ ಸಂಚಾರಕ್ಕೆ ಅಡ್ಡಿಯಾಗದಂತೆ ಕೆಳಪರ್ಕಳ ರಸ್ತೆಯನ್ನು ಸರಿಪಡಿಸಲು ಶಾಸಕ ರಘುಪತಿ ಭಟ್ ಸಭೆ ನಡೆಸಿದ್ದು ಅದರಂತೆ ಈಗ ಕೆಳಪರ್ಕಳ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು ವಾಹನ ಸಂಚಾರಿಗಳು ನಿಟ್ಟುಸಿರು ಬಿಡುವಂತಾಗಿದೆ. ಪರ್ಕಳ – ಮಣಿಪಾಲ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುತ್ತಿರುವುದರಿಂದ ಮಣಿಪಾಲ – ಉಡುಪಿ ಸಂಪರ್ಕಿಸುವ ವಾಹನಗಳ ಸುಗಮ ಸಂಚಾರಕ್ಕೆ ಪ್ರಸ್ತುತ ಇರುವ ಕೆಳಪರ್ಕಳದ ರಸ್ತೆಯನ್ನು ಸರಿಪಡಿಸಲು ಇಲಾಖಾಧಿಕಾರಿಗಳೊಂದಿಗೆ ಸಭೆ ನಡೆಸಿ ರಸ್ತೆ […]
ಡಿ.23 ರಂದು ಮುಕ್ತಾಂಜಲಿ ನಾಟ್ಯ ಸಂಸ್ಥೆ ವತಿಯಿಂದ ಕ್ರಿಸ್ ಮಸ್ ಸಂಭ್ರಮಾಚಣೆ

ಮಣಿಪಾಲ: ಮುಕ್ತಾಂಜಲಿ ನಾಟ್ಯ ಸಂಸ್ಥೆ, ಮದರ್ ಎಂಡ್ ಚೈಲ್ಡ್ ಟ್ಯಾಲೆಂಟ್ ಶೋ ಹಾಗೂ ರೋಟರಿ ಕ್ಲಬ್ ಮಣಿಪಾಲ್ ಹಿಲ್ಸ್ ವತಿಯಿಂದ ಕ್ರಿಸ್ ಮಸ್ ಹಬ್ಬದ ಆಚರಣೆಯ ಪ್ರಯುಕ್ತ ಕಿಡ್ಜೀ ಮಕ್ಕಳಿಂದ ನೃತ್ಯ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಡಿ.23 ರಂದು ಸಂಜೆ 5 ಗಂಟೆಗೆ ಮಣಿಪಾಲದ ಹೋಟೇಲ್ ಆಶ್ಲೇಶ್ ಇದರ ವಜ್ರ ಹಾಲಿನಲ್ಲಿ ನಡೆಯುವ ಸಮಾರಂಭವನ್ನು ಬೆಲ್ ಒ ಸೀಲ್ ನ ನಿರ್ದೇಶಕಿ ಶ್ರೀಮತಿ ಸಪ್ನಾ ಜೆನಿಫರ್ ಸಾಲಿನ್ಸ್ ಉದ್ಘಾಟಿಸಲಿದ್ದಾರೆ. ಹಾಡು ನೀ ಹಾಡು ರಿಯಾಲಿಟಿ ಶೋನ ಮಾರ್ಗದರ್ಶಕ […]