ಉರ್ವಶೆ 2023- ಕೆಎಂಸಿ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಸ್ತ್ರೀ ಮೂತ್ರರೋಗ ಶಾಸ್ತ್ರ ವಿಚಾರ ಸಂಕಿರಣ

ಮಣಿಪಾಲ: ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದ ಉಪವಿಭಾಗವಾಗಿರುವ ಸ್ತ್ರೀ ಮೂತ್ರರೋಗ ಶಾಸ್ತ್ರ ವಿಭಾಗವು ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಜನವರಿ 21- 22 ರಂದು ಮೊದಲ ರಾಷ್ಟ್ರೀಯ ಸ್ತ್ರೀ ಮೂತ್ರರೋಗ ಶಾಸ್ತ್ರ ವಿಚಾರ ಸಂಕಿರಣ (ಉರ್ವಶೆ 2023 )ವನ್ನು ಆಯೋಜಿಸಿತ್ತು. ದೇಶದ ವಿವಿಧ ಭಾಗಗಳಿಂದ ಸ್ತ್ರೀ ಶ್ರೋಣಿಯ (ಸ್ತ್ರೀ ಪೆಲ್ವಿಕ್) ಮೆಡಿಸಿನ್ ಮತ್ತು ಪುನರ್ನಿರ್ಮಾಣ ಶಸ್ತ್ರಚಿಕಿತ್ಸೆಯ ಭರವಸೆಯ ಕುರಿತು ರಾಷ್ಟ್ರೀಯ ದಿಗ್ಗಜರ ಸಮ್ಮೇಳನ ಇದಾಗಿತ್ತು. ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೆಎಂಸಿ ಮಣಿಪಾಲದ ಸಹ ಡೀನ್ […]

ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ಮಂದಿ ಶ್ರೇಷ್ಠ ಸಾಧಕರಿಗೆ ಹೊಸವರ್ಷ ಪ್ರಶಸ್ತಿ-2023 ಪ್ರದಾನ

ಮಣಿಪಾಲ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಆರೋಗ್ಯ ವಿಜ್ಞಾನ, ಬ್ಯಾಂಕಿಂಗ್‌ ಮತ್ತು ಕೃಷಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಾಲ್ಕು ಮಂದಿ ಸಾಧಕರಿಗೆ ಅಕಾಡೆಮಿ ಆಫ್‌ ಜನರಲ್‌ ಎಜುಕೇಶನ್‌, ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌, ಮಣಿಪಾಲ್‌ ಎಜುಕೇಶನ್‌ ಆ್ಯಂಡ್‌ ಮಣಿಪಾಲ್‌ ಗ್ರೂಪ್‌ ಇಂಡಿಯ, ಪ್ರೈ. ಲಿ., ಮಣಿಪಾಲ್‌ ಮೀಡಿಯಾ ನೆಟ್‌ವರ್ಕ್‌ ಲಿ. ಮತ್ತು ಡಾ. ಟಿಎಂಎ ಪೈ ಫೌಂಡೇಶನ್‌ ಸಂಸ್ಥೆಗಳ ವತಿಯಿಂದ ಮಣಿಪಾಲದ ಫಾರ್ಚೂನ್‌ ಇನ್‌ ವ್ಯಾಲಿವ್ಯೂನಲ್ಲಿ ಜ. 14 ರಂದು ‘ಹೊಸವರ್ಷದ ಪ್ರಶಸ್ತಿ-2023’ ಪ್ರದಾನ ಮಾಡಿ […]

ನಾಳೆ ಮಣಿಪಾಲ ಎಂಡ್ ಪಾಯಿಂಟ್ ನಲ್ಲಿ ಯೋಗಥಾನ್ ಕಾರ್ಯಕ್ರಮ

ಮಣಿಪಾಲ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಮತ್ತು ಡಾ. ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಯೋಗಥಾನ್ ಕಾರ್ಯಕ್ರಮವು ಜನವರಿ 15 ರಂದು ಬೆಳಗ್ಗೆ 7 ಗಂಟೆಗೆ ಮಣಿಪಾಲದ ಎಂಡ್ ಪಾಯಿಂಟ್‌ನಲ್ಲಿ ನಡೆಯಲಿದೆ. ರಾಜ್ಯದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಕೆ.ರಘುಪತಿ ಭಟ್ […]

ಹೆಬ್ರಿ: ಅಡ್ಡ ಬಂದ ಹಸುವನ್ನು ತಪ್ಪಿಸಲು ಹೋಗಿ ಹೊಂಡಕ್ಕೆ ಬಿದ್ದ ಓಮ್ನಿ

ಹೆಬ್ರಿ: ವಾಹನಚಲಾಯಿಸುತ್ತಿದ್ದಾಗ ಹಸುವೊಂದು ಅಡ್ಡಬಂತೆಂದು ಅದನ್ನು ತಪ್ಪಿಸಲು ಹೋಗಿ ಒಮ್ನಿಯೊಂದು ಹೊಂಡಕ್ಕೆ ಬಿದ್ದ ಘಟನೆ ಹೆಬ್ರಿಯ ಎಸ್‌ಆರ್ ಶಾಲೆಯ ಬಳಿ ನಡೆದಿದೆ. ಮಣಿಪಾಲದಿಂದ ಹರಿಹರ ಕಡೆಗೆ ಹೋಗುತ್ತಿದ್ದ ಓಮ್ನಿಯು ಹಸುವನ್ನು ತಪ್ಪಿಸಲು ಹೋದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿದ್ದ ಹೊಂಡಕ್ಕೆ ಬಿದ್ದಿದೆ. ಘಟನೆಯಲ್ಲಿ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.  

ಜ. 12 ರಂದು ರಜತಾದ್ರಿಯಲ್ಲಿ ಮಿನಿ ಉದ್ಯೋಗ ಮೇಳ

ಉಡುಪಿ: ಜಿಲ್ಲಾ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವತಿಯಿಂದ ಜನವರಿ 12 ರಂದು ಬೆಳಗ್ಗೆ 10.30 ಕ್ಕೆ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಿನಿ ಉದ್ಯೋಗ ಮೇಳ ನಡೆಯಲಿದೆ. ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ, ಬಿ.ಕಾಂ, ಬಿ.ಇ ಇಂಜಿನಿಯರಿಂಗ್, ಡಿಪ್ಲೋಮಾ ಹಾಗೂ ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳು ಅಂಕಪಟ್ಟಿ, ಸ್ವ-ವಿವರವುಳ್ಳ ರೆಸ್ಯೂಮ್/ಸಿವಿ ಹಾಗೂ ಆಧಾರ್ ಕಾರ್ಡ್ ಪ್ರತಿಯೊಂದಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ […]