ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಅತ್ಯಾಧುನಿಕ ವರ್ಚುವಲ್ ಡಿಸೆಕ್ಷನ್ ಲ್ಯಾಬ್ ಉದ್ಘಾಟನೆ
ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ಅಡಿಯಲ್ಲಿಪ್ರತಿಷ್ಠಿತ ಸಂಸ್ಥೆಯಾದ ಕಸ್ತೂರ್ಬಾ ವೈದ್ಯಕೀಯ ಕಾಲೇಜು (KMC) ತನ್ನ ಅತ್ಯಾಧುನಿಕ ವರ್ಚುವಲ್ ಡಿಸೆಕ್ಷನ್ ಲ್ಯಾಬ್ ಅನ್ನು ಉದ್ಘಾಟಿಸಿ ವೈದ್ಯಕೀಯ ಶಿಕ್ಷಣದ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದೆ. MEMG ಅಧ್ಯಕ್ಷ ಮತ್ತು MAHE ಟ್ರಸ್ಟ್‌ನ ಅಧ್ಯಕ್ಷ ಡಾ. ರಂಜನ್ ಆರ್ ಪೈ ಅವರು ಶುಕ್ರವಾರದಂದು ಲ್ಯಾಬ್ ಅನ್ನು ಉದ್ಘಾಟಿಸಿದರು. ಸಮಾರಂಭದಲ್ಲಿ ಮಾಹೆಯ ಪ್ರೊ ಚಾನ್ಸೆಲರ್ ಡಾ. ಎಚ್.ಎಸ್. ಬಲ್ಲಾಳ್; ಮಾಹೆಯ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ.ವೆಂಕಟೇಶ್; ಮಾಹೆಯ […]
ಮಣಿಪಾಲ: ‘ನಮ್ಮ ಸಂತೆ’ಯಲ್ಲಿ ಮಲ್ಪೆ ಮೀನುಗಾರರ ಉತ್ಪಾದಕರ ಕಂಪನಿಯ ಉತ್ಪನ್ನಗಳ ಮಾರಾಟ
ಮಣಿಪಾಲ: ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ ಮತ್ತು ಉದಯವಾಣಿ ಇದರ ಜಂಟಿ ಆಶ್ರಯದಲ್ಲಿ ಎಂ.ಐ.ಸಿ. ಕಾಲೇಜಿನ ವಿದ್ಯಾರ್ಥಿಗಳು ಆಯೋಜಿಸಿರುವ “ನಮ್ಮ ಸಂತೆ -2024” ಕಾರ್ಯಕ್ರಮದಲ್ಲಿ ಜಲಾನಯನ ಇಲಾಖೆ, ಮೀನುಗಾರಿಕಾ ಇಲಾಖೆ ಹಾಗೂ ಸ್ಕೊಡವೆಸ್ ಸಂಸ್ಥೆಯ ಸಹಯೋಗದಲ್ಲಿ ರಚಿತವಾದ ಮಲ್ಪೆ ಮೀನುಗಾರರ ಉತ್ಪಾದಕರ ಕಂಪನಿಯು ತನ್ನ ಮಳಿಗೆಯನ್ನು ತೆರೆದು ವಿವಿಧ ಮೀನಿನ ಉತ್ಪನ್ನಗಳಾದ ಮೀನಿನ ಉಪ್ಪಿನಕಾಯಿ, ಒಣಮೀನು, ಒಣಮೀನಿನ ಚಟ್ನಿ ಮುಂತಾದವುಗಳನ್ನು ಪ್ರದರ್ಶನಕ್ಕಿಟ್ಟು ಮಾರಾಟ ನಡೆಸಿತು. ಸಾಗರೋತ್ಪನ್ನ ಆಹಾರ ಪ್ರಿಯರು ಮೀನಿನ ಮೌಲ್ಯವರ್ಧನೆಯ ಉತ್ಪನ್ನಗಳನ್ನು ಖರಿದಿಸಿದರಲ್ಲದೆ, ಮೀನಿನ ಮೌಲ್ಯವರ್ಧಿತ […]
ಸ್ಟೀಲ್ ಬ್ರಿಡ್ಜ್ ಗರ್ಡರ್ ಗೆ ಡಿ.ಆರ್.ಡಿ.ಓ ಅಂಗೀಕಾರ: ಇಂದ್ರಾಳಿ ರೈಲ್ವೆ ಮೇಲ್ಸೆತುವ ಕಾಮಗಾರಿಗೆ ವೇಗ
ಉಡುಪಿ: ಇಂದ್ರಾಳಿ ರೈಲ್ವೆ ಸೇತುವೆ ಕಾಮಗಾರಿಗಾಗಿ ಹುಬ್ಬಳ್ಳಿಯಲ್ಲಿ ನಿರ್ಮಾಣಗೊಂಡಿರುವ ಸ್ಟೀಲ್ ಬ್ರಿಡ್ಜ್ ಗರ್ಡರ್ ರೈಲ್ವೇ ಇಲಾಖೆಯ ಡಿಆರ್ ಡಿಒ ಪರಿಶೀಲನೆಯಿಂದ ಅಂಗೀಕೃತವಾಗಿ ಉಡುಪಿಗೆ ಆಗಮಿಸಲಿದೆ. ಉಡುಪಿ ಜನತೆಯ ಬಹು ದಿನದ ಬೇಡಿಕೆಯಾಗಿರುವ ಇಂದ್ರಾಳಿ ರೈಲ್ವೇ ಮೇಲ್ಸೇತುವೆ ನಿರ್ಮಾಣ ಶೀಘ್ರದಲ್ಲೇ ಪೂರ್ಣಗೊಳ್ಳಲಿದ್ದು, ಸಹಕರಿಸಿದ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಸ್ಥಳೀಯ ಸಂಸದೆ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರಿಗೆ ಉಡುಪಿ ಜನತೆಯ ಪರವಾಗಿ ಶಾಸಕ ಯಶ್ ಪಾಲ್ ಸುವರ್ಣ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಫೆ.14 ‘ದ ತವಾ ಪಂಜಾಬ್’ ರೆಸ್ಟೋರೆಂಟ್ ಶುಭಾರಂಭ
ಮಣಿಪಾಲ: ಇಲ್ಲಿನ ವಿದ್ಯಾರತ್ನ ನಗರದಲ್ಲಿರುವ ಶಾಂಭವಿ ಸೋವರಿನ್ ಕಟ್ಟಡದಲ್ಲಿ ನಾಳೆ ಸಂಜೆ 6.30 ಕ್ಕೆ ‘ದ ತವಾ ಪಂಜಾಬ್’ ರೆಸ್ಟೋರೆಂಟ್ ಶುಭಾರಂಭಗೊಳ್ಳುತ್ತಿದ್ದು, ತುಳು ಚಿತ್ರನಟ-ನಿರ್ದೇಶಕ ಅರ್ಜುನ್ ಕಾಪಿಕಾಡ್, ಹಾಗೂ ನಟ ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಶ್ರೀ ಶಾರದಾಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ “ನಾರಿಶೃಂಗ”: ಪೂರ್ವ ಪ್ರಾಥಮಿಕ ಶಿಕ್ಷಕರ ಕಾರ್ಯಾಗಾರ ಸಂಪನ್ನ
ಮಣಿಪಾಲ: ಶ್ರೀ ಶಾರದಾಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ಪೂರ್ವ ಪ್ರಾಥಮಿಕ/ಮಾಂಟೆಸ್ಸೆರಿ ಶಿಕ್ಷಕಿಯರಿಗೆ “ನಾರಿ ಶೃಂಗ” ಎಂಬ ಶೀರ್ಷಿಕೆಯ ಆಡಿಯಲ್ಲಿ ಮೂರು ದಿವಸಗಳ ಕಾರ್ಯಾಗಾರವನ್ನು ಆಸರೆ ಟ್ರಸ್ಟನ ಅಧ್ಯಕ್ಷ ಜೈವಿಠಲ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಮಕ್ಕಳ ಪ್ರತಿಭೆಯನ್ನು ಗುರುತಿಸುವಲ್ಲಿ ಹಾಗೂ ವಿಶೇಷ ಚೇತನ ಮಕ್ಕಳ ಹೆತ್ತವರಿಗೆ ಉತ್ತಮ ಮಾರ್ಗದರ್ಶನ ನೀಡುವಲ್ಲಿ ಶಿಕ್ಷಕಿಯರ ಪಾತ್ರವನ್ನು ತಿಳಿಸಿದರು. ಮಣಿಪಾಲ ಠಾಣೆಯ ಪೊಲೀಸ್ ನಿರೀಕ್ಷಕ ದೇವರಾಜ್ ಟಿ.ವಿ. ಮಾತನಾಡಿ, ಇತ್ತೀಚೀನ ದಿನಗಳಲ್ಲಿ ಸೈಬರ್ ಕ್ರೈಂ ಹೆಚ್ಚುತ್ತಿದ್ದು, ಜನರು ಹೇಗೆ […]