ಆ.5 ರೊಳಗೆ ನೈಜ ಆರೋಪಿಗಳನ್ನು ಪತ್ತೆ ಹಚ್ಚದಿದ್ದಲ್ಲಿ ಮಂಗಳೂರಿನಲ್ಲಿ ಧರಣಿ ಕೂರುವ ಎಚ್ಚರಿಕೆ ನೀಡಿದ ಕುಮಾರಸ್ವಾಮಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಮೂರು ಹತ್ಯೆ ಪ್ರಕರಣಗಳ ನೈಜ ಆರೋಪಿಗಳನ್ನು ಆ.5 ರೊಳಗೆ ಪತ್ತೆಹಚ್ಚಿ ಬಂಧಿಸಬೇಕು. ಆರೋಪಿಗಳ ಪತ್ತೆಯಲ್ಲಿ ಸರಕಾರ ಯಶಸ್ವಿಯಾಗದಿದ್ದಲ್ಲಿ ಆ.6 ರಿಂದ ಮಂಗಳೂರಿನಲ್ಲಿ ಧರಣಿ ನಡೆಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ಹತ್ಯೆಯಾದ ಮಸೂದ್, ಪ್ರವೀಣ್ ನೆಟ್ಟಾರು, ಸುರತ್ಕಲ್‌ನ ಫಾಝಿಲ್ ಮನೆಗೆ ಸೋಮವಾರ ಭೇಟಿ ನೀಡಿದ ಬಳಿಕ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆ ಸಹಿತ ನಮ್ಮ ರಾಜ್ಯ ಸರ್ವ ಜನಾಂಗದ ಶಾಂತಿಯ […]

ಉದ್ಯೋಗಾವಕಾಶ: ಏ 26 ರಂದು ಖಾಸಗಿ ಕಂಪನಿಗಳ ನೇರ ಸಂದರ್ಶನ

  ಮಂಗಳೂರು: ಏಪ್ರಿಲ್ 26 ರ ಬೆಳಗ್ಗೆ 10 ಘಂಟೆಗೆ ನಗರದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಖಾಸಗಿ ಕಂಪನಿಗಳ ನೇರ ಸಂದರ್ಶನವು ನಡೆಯಲಿದೆ. ಪಿಯುಸಿ, ಡಿಪ್ಲೋಮಾ ಹಾಗೂ ಯಾವುದೇ ಪದವಿಯಲ್ಲಿ (ಬಿಇ ಮತ್ತು ಬಿಸಿಎ ಹೊರತುಪಡಿಸಿ) ತೇರ್ಗಡೆ ಹೊಂದಿದ ಆಸಕ್ತ ಅಭ್ಯರ್ಥಿಗಳು ಸ್ವವಿವರವುಳ್ಳ ಮಾಹಿತಿಯೊಂದಿಗೆ ನಗರದ ಉದ್ಯೋಗ ವಿನಿಮಯ ಕಚೇರಿಯಲ್ಲಿ ಹಾಜರಾಗಬಹುದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಮಂಗಳಮುಖಿಯರಿಂದ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಸೇವೆ: ದೇವರ ಭಕ್ತಿಗೆ ಲಿಂಗದ ಭೇದವಿಲ್ಲ, ಇದು ಇತಿಹಾಸದಲ್ಲೆ ಮೊದಲು

ಮಂಗಳೂರು: ನಾವೆಲ್ಲರೂ ದೇವರ ಸೃಷ್ಟಿ. ಮನುಷ್ಯ ತನ್ನ ಜೊತೆಗಾರ ಮನುಷ್ಯರಲ್ಲಿ ಭೇದವೆಣಿಸಬಹುದು ಆದರೆ ದೇವರ ಸಮ್ಮುಖದಲ್ಲಿ ಬಡವ-ಬಲ್ಲಿದ, ಹೆಣ್ಣು-ಗಂಡು, ಅಷ್ಟೇ ಏಕೆ ತೃತೀಯ ಲಿಂಗಿಗಳೂ ಸಮಾನರು. ದೇವರ ಭಕ್ತಿಗೆ ಲಿಂಗದ ಭೇದವುಂಟೆ? ಇಲ್ಲ ಎಂದು ತೋರಿಸಿಕೊಡುತ್ತಿದ್ದಾರೆ ಮಂಗಳೂರಿನ ಐವರು ತೃತೀಯ ಲಿಂಗಿಗಳು. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಐವರು ತೃತೀಯ ಲಿಂಗಿಗಳು ಸೇರಿ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಸೇವೆಯನ್ನು ನೀಡಲು ನಿರ್ಧರಿಸಿದ್ದಾರೆ. ಮಂಗಳೂರಿನ ಕೋಡಿಕಲ್ ಕಟ್ಟೆ ಮೈದಾನದಲ್ಲಿ ಫೆ.25 ರಂದು ಸಾಂಜೆ ಪಾವಂಜೆ ಶ್ರೀ ಜ್ಞಾನಶಕ್ತಿ […]

ಕೋಸ್ಟಲ್ ವುಡ್ ಪ್ರಿಮಿಯರ್ ಲೀಗ್-2019

C.A.T.C.A ಕೋಸ್ಟಲ್ ವುಡ್ ಕಲಾವಿದರ ಹಾಗೂ ತಂತ್ರಜ್ಞರ ಒಕ್ಕೂಟ ಏರ್ಪಡಿಸಿರುವ ಮೂರು ದಿನಗಳ ಕಾಲ 10,11ಹಾಗೂ 12 ರಂದು ಹಗಲಿನ ಕ್ರಿಕೆಟ್ ಪಂದ್ಯಾಕೂಟ C.P.L -2019 ಕ್ಕೆ ಮಂಗಳೂರಿನ ಹುಲ್ಲುಹಾಸಿನ ಸಹ್ಯಾದ್ರಿ ಕ್ರೀಡಾಂಗಣ ಸಜ್ಜಾಗಿ ನಿಂತಿದೆ‌. ಇಂದಿನಿಂದ ಪಂದ್ಯಾಕೂಟಗಳಿಗೆ ತುಳು ಚಿತ್ರ ತಾರೆಯರ ಸಮ್ಮುಖದಲ್ಲಿ ಅದ್ಧೂರಿಯ ಚಾಲನೆ ದೊರಕಲಿದೆ. ಇಂದಿನಿಂದ ಪಂದ್ಯಾಕೂಟಗಳಿಗೆ ತುಳು ಚಿತ್ರ ತಾರೆಯರ ಸಮ್ಮುಖದಲ್ಲಿ ಅದ್ಧೂರಿಯ ಚಾಲನೆ ದೊರಕಲಿದೆ. ಈ ಪಂದ್ಯಾಕೂಟದಲ್ಲಿ 8 ಫ್ರಾಂಚೈಸಿಗಳು ಕೌತುಕದ ಕದನಕ್ಕಿಳಿಯಲಿದ್ದು ಭಾಗವಹಿಸುವ ಫ್ರಾಂಚೈಸಿಗಳ ವಿವರ ಈ ಕೆಳಗಿನಂತಿದೆ. ಬಿರುವೆರ್ […]