ಮೇ-3 ಮಂಗಳೂರಿಗೆ ಪ್ರಧಾನಿ ಮೋದಿ: ವಾಹನ ಸಂಚಾರದಲ್ಲಿ ಬದಲಾವಣೆ

ಮಂಗಳೂರು: ಮೇ 3ರಂದು ಮುಲ್ಕಿಯ ಕೊಲ್ನಾಡು ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನವ ಕರ್ನಾಟಕ ಸಂಕಲ್ಪ ಸಮಾವೇಶ ಹಿನ್ನೆಲೆಯಲ್ಲಿ ಸಮಾವೇಶ ನಡೆಯುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಚಾರ ಬದಲಾವಣೆ ಮಾಡಿ ಮಂಗಳೂರು ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಭದ್ರತೆಯ ಹಿತದೃಷ್ಟಿಯಿಂದ ಮೇ 3 ರ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಸಂಚಾರದಲ್ಲಿ ಮಾರ್ಪಾಡು ಮಾಡಲಾಗಿದೆ.   ಬೆಳಗ್ಗೆ ಸುಮಾರು 10.30ರ ಬಳಿಕ ಪ್ರಧಾನಿ ಮೋದಿ ಕೊಲ್ನಾಡು ಹೆಲಿಪ್ಯಾಡ್‌ನಿಂದ ಕಾರ್ಯಕ್ರದ ಸ್ಥಳಕ್ಕೆ […]

ಮಂಗಳೂರು: ಭೀಮಾ ಜ್ಯುವೆಲ್ಲರ್ಸ್ ನಲ್ಲಿ ನೇರ ಸಂದರ್ಶನ

ಮಂಗಳೂರು: ಭೀಮಾ ಜ್ಯುವೆಲ್ಲರ್ಸ್ ಬೆಂಗಳೂರು ಮಳಿಗೆಗೆ ಕ್ಯಾಷಿಯರ್, ಫೀಲ್ಡ್ ಮತ್ತು ಮಾರ್ಕೆಂಟಿಗ್ ಸ್ಟಾಫ್, ಸೇಲ್ಸ್ ಸ್ಟಾಫ್ ಹಾಗೂ ಆಫೀಸ್ ಅಸಿಸ್ಸ್ಟೆಂಟ್ ಹುದ್ದೆಗಳಿಗಾಗಿ ಅಭ್ಯರ್ಥಿಗಳ ಅವಶ್ಯಕತೆ ಇದ್ದು, ಚಿನ್ನಾಭರಣ ಕ್ಷೇತ್ರದಲ್ಲಿ ಕೆಲಸ ಮಾಡಿ ಅನುಭವವಿರುವವರು ಮೇ 2 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ನಗರದ ಬೆಂದೂರಿನಲ್ಲಿರುವ ಎಸ್.ಸಿಎಸ್ ಹಾಸ್ಪಿಟಲ್ ಬಳಿ ಇರುವ ಭೀಮಾ ಸಂಸ್ಥೆಯ ಮಳಿಗೆಯಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಬಹುದು. ಅಭ್ಯರ್ಥಿಗಳು ಕನ್ನಡ ಬಲ್ಲವರಾಗಿರಬೇಕು. ಜೊತೆಗೆ ಮಲೆಯಾಳಿ, ತಮಿಳು, ತೆಲುಗು, ಹಿಂದಿ ಹಾಗೂ ಇಂಗ್ಲೀಷ್ […]

ಮಂಗಳೂರು ಸ್ಪೋಟ ಪ್ರಕರಣ: ದೇಶದ್ರೋಹ ಕಾಯ್ದೆಯಡಿ ತಲೆಮರೆಸಿಕೊಂಡಿದ್ದ ಮೊಹಮ್ಮದ್ ಶಾರೀಫ್ ಮನೆ ಮೇಲೆ ತನಿಖಾ ತಂಡ ದಾಳಿ

ಮಂಗಳೂರು: ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಶನಿವಾರದಂದು ನಿಗೂಢ ಸ್ಫೋಟ ಸಂಭವಿಸಿದ್ದು, ಸ್ಫೋಟದ ಬಳಿಕ ನಡೆದ ತನಿಖೆಯಲ್ಲಿ ಇದು ಉದ್ದೇಶಪೂರ್ವಕವಾಗಿ ಮಾಡಲಾದ ಭಯೋತ್ಪಾದಕ ಕೃತ್ಯ ಎಂದು ಪೋಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿಕೆ ನೀಡಿದ್ದರು. ಇದೀಗ ಮಂಗಳೂರು ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಆಟೋರಿಕ್ಷಾ ಪ್ರಯಾಣಿಕ ಮೊಹಮ್ಮದ್ ಶಾರಿಕ್ ಎಂದು ಬಹಿರಂಗವಾಗಿದೆ. ಆರೋಪಿಯ ವಿರುದ್ಧ ಈ ಹಿಂದೆ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಭಯೋತ್ಪಾದನೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ. ಈತ ಗೋಡೆ ಮೇಲೆ ಬೆದರಿಕೆ ಹಾಕುವ ಬರಗಳನ್ನು ಬರೆದಿದ್ದ. ಈತನ […]

ಭ್ರಷ್ಟಾಚಾರ ಮುಕ್ತ ಭಾರತಕ್ಕಾಗಿ ಬ್ಯಾಂಕ್ ಅಫ್ ಬರೋಡಾದಿಂದ ಜಾಗರೂಕತಾ ಸಪ್ತಾಹ

ಮಂಗಳೂರು: ಸೆಂಟ್ರಲ್ ವಿಜಿಲೆನ್ಸ್ ಆಯೋಗದ ನಿರ್ದೇಶನದಂತೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಸ್ಮರಣಾರ್ಥ ಬ್ಯಾಂಕ್ ಆಫ್ ಬರೋಡಾ ಮಂಗಳೂರು ವಲಯವು ಅಕ್ಟೋಬರ್ 31 ರಿಂದ ನವೆಂಬರ್ 06 ರವರೆಗೆ ವಿಜಿಲೆನ್ಸ್ ಜಾಗೃತಿ ಸಪ್ತಾಹವನ್ನು ಆಚರಿಸುತ್ತಿದೆ. ಈ ಸಂಬಂಧವಾಗಿ ನ.06 ರವರೆಗೆ ಬ್ಯಾಂಕ್‌ ನ ಎಲ್ಲಾ ಪಾಲುದಾರರೊಡಗೂಡಿ ಭ್ರಷ್ಟಾಚಾರವನ್ನು ತಡೆಗಟ್ಟಲು ಮತ್ತು ಅದರ ವಿರುದ್ಧ ಹೋರಾಡಲು ವಿವಿಧ ಚಟುವಟಿಕೆಗಳನ್ನು ನಡೆಸಬೇಕಾಗಿದ್ದು, ಕಾರ್ಯಕ್ರಮದ ಅಂಗವಾಗಿ ಆದಿತ್ಯವಾರ ಮಂಗಳೂರಿನ ಪೊಲೀಸ್ ಉಪ ಆಯುಕ್ತ ಅಂಶು ಕುಮಾರ್ ರವರು ವಿಜಯ ಟವರ್ಸ್ […]

ಬೆಂಗಳೂರಿನ ಬಾಲಕಿ ಮಂಗಳೂರಿನಲ್ಲಿ ನಾಪತ್ತೆ

ಮಂಗಳೂರು: ಸೋಮವಾರ ಮಂಗಳೂರಿಗೆ ಬಂದಿಳಿದಿದ್ದ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನ ಭಾರ್ಗವಿ (14) ಎಂಬ ಬಾಲಕಿ ನಾಪತ್ತೆಯಾಗಿದ್ದಾಳೆ. ಭಾರ್ಗವಿ ಸೋಮವಾರ ಮುಂಜಾನೆ 3 ಗಂಟೆಗೆ ಮಂಗಳೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದ ನಂತರದಿಂದ ನಾಪತ್ತೆಯಾಗಿದ್ದಾಳೆ. ಬಾಲಕಿಯ ಪತ್ತೆಗಾಗಿ ಪೋಷಕರು ಮನವಿ ಮಾಡಿದ್ದಾರೆ. ಬಾಲಕಿಯ ಬಗ್ಗೆ ಮಾಹಿತಿ ದೊರೆತಲ್ಲಿ ಶಶಿ: 9972031021 ಅಥವಾ ಮಹದಿ: 9916595109 ಈ ಸಂಖ್ಯೆಗೆ ಕರೆಮಾಡುವಂತೆ ಮನವಿ ಮಾಡಿದ್ದಾರೆ.