ಕೋಸ್ಟಲ್ ವುಡ್ ಪ್ರಿಮಿಯರ್ ಲೀಗ್-2019

C.A.T.C.A ಕೋಸ್ಟಲ್ ವುಡ್ ಕಲಾವಿದರ ಹಾಗೂ ತಂತ್ರಜ್ಞರ ಒಕ್ಕೂಟ ಏರ್ಪಡಿಸಿರುವ ಮೂರು ದಿನಗಳ ಕಾಲ 10,11ಹಾಗೂ 12 ರಂದು ಹಗಲಿನ ಕ್ರಿಕೆಟ್ ಪಂದ್ಯಾಕೂಟ C.P.L -2019 ಕ್ಕೆ ಮಂಗಳೂರಿನ ಹುಲ್ಲುಹಾಸಿನ ಸಹ್ಯಾದ್ರಿ ಕ್ರೀಡಾಂಗಣ ಸಜ್ಜಾಗಿ ನಿಂತಿದೆ‌. ಇಂದಿನಿಂದ ಪಂದ್ಯಾಕೂಟಗಳಿಗೆ ತುಳು ಚಿತ್ರ ತಾರೆಯರ ಸಮ್ಮುಖದಲ್ಲಿ ಅದ್ಧೂರಿಯ ಚಾಲನೆ ದೊರಕಲಿದೆ.

ಇಂದಿನಿಂದ ಪಂದ್ಯಾಕೂಟಗಳಿಗೆ ತುಳು ಚಿತ್ರ ತಾರೆಯರ ಸಮ್ಮುಖದಲ್ಲಿ ಅದ್ಧೂರಿಯ ಚಾಲನೆ ದೊರಕಲಿದೆ. ಈ ಪಂದ್ಯಾಕೂಟದಲ್ಲಿ 8 ಫ್ರಾಂಚೈಸಿಗಳು ಕೌತುಕದ ಕದನಕ್ಕಿಳಿಯಲಿದ್ದು ಭಾಗವಹಿಸುವ ಫ್ರಾಂಚೈಸಿಗಳ ವಿವರ ಈ ಕೆಳಗಿನಂತಿದೆ.

ಬಿರುವೆರ್ ಕುಡ್ಲ ರಾಕರ್ಸ್
ತುಳುನಾಡು ಸ್ಪಾರ್ಟನ್ಸ್
ಕುಡ್ಲ ನೈಟ್ ರೈಡರ್ಸ್
ರೇಂಜರ್ಸ್ ರಾಯಲ್
ಕೋಸ್ಟಲ್ ಕಮಾಂಡರ್ಸ್
K3 ಲೀಡ್ಸ್ ವಾರಿಯರ್ಸ್
ಚಾಲೆಂಜಿಂಗ್ ಸ್ಟಾರ್ಸ್ ಹಾಗೂ
ಅಬ್ಬಕ್ಕ ವಾರಿಯರ್ಸ್
ಒಂದೊಂದು ತಂಡದಲ್ಲಿ 2 ಸ್ಟಾರ್ ಪ್ಲೇಯರ್ಸ್ ಹಾಗೂ 1 ಐಕಾನ್ ಪ್ಲೇಯರ್ ಗಳು ಪ್ರತಿನಿಧಿಸುತ್ತಿದ್ದು ಜಿದ್ದಾ ಜಿದ್ದಿನ ಹೋರಾಟ ಪ್ರೇಕ್ಷಕರನ್ನು ರಂಜಿಸಲಿದೆ. ರವಿವಾರ ತುಳು ನಟಿಯರಿಗಾಗಿ ಪಂದ್ಯಾಕೂಟವನ್ನು ಏರ್ಪಡಿಸಲಾಗಿದೆ.
ಕಳೆದ ಮೂರು ವರ್ಷಗಳ ಹಿಂದೆ ಶ್ರೀಯುತ ಪ್ರಕಾಶ್ ಶೆಟ್ಟಿ, ಹರೀಶ್ ಕೊಡಪ್ಪಾಡಿ ಹಾಗೂ ಅಶ್ವಿನಿ ಕೋಟ್ಯಾನ್ ರವರು ಈ ಪಂದ್ಯಾಕೂಟಗಳನ್ನು ಪ್ರಪ್ರಥಮ ಬಾರಿಗೆ ಪರಿಚಯಿಸಿದ್ದರು. 2016 ರಲ್ಲಿ ಪ್ರಾಯೋಗಿಕವಾಗಿ  ಎಕ್ಕೂರು ಮೈದಾನದಲ್ಲಿ ನಡೆಸಲ್ಪಟ್ಟ C.P.L -2017 ಹಾಗೂ 2018 ರ ಪಂದ್ಯಾಕೂಟ ಮಂಗಳೂರಿನ‌ ನೆಹರೂ ಮೈದಾನದಲ್ಲಿ ಅತ್ಯಂತ ಅದ್ಧೂರಿಯಾಗಿ ಸಂಘಟಿಸಲಾಗಿತ್ತು.
ಪಂದ್ಯಾಕೂಟದ ಪ್ರಮುಖ ಆಕರ್ಷಣೆ ಅರ್ಜುನ್ ಕಾಪಿಕಾಡ್, ರೂಪೇಶ್ ಶೆಟ್ಟಿ, ಪ್ರಥ್ವಿ‌ ಅಂಬರ್ ಹಾಗೂ ಆಸ್ತಿಕ್ ಶೆಟ್ಟಿ ಇನ್ನಿತರ ನಟರು ತಾಂತ್ರಿಕ ವರ್ಗದವರೊಂದಿಗೆ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.
ಈ ಬಾರಿಯ ಬಹು ನಿರೀಕ್ಷೆಯ CPL-2019 ಶ್ರೀಯುತ ಪಮ್ಮಿ ಕೊಡಿಯಾಲ್ ಬೈಲ್ ರವರ ದಕ್ಷ ಅಧ್ಯಕ್ಷತೆಯಲ್ಲಿ ಹಾಗೂ ಕ್ರೀಡಾ ಕಾರ್ಯದರ್ಶಿಗಳಾದ ರಾಜ್ಯ ಟೆನ್ನಿಸ್ ಕ್ರಿಕೆಟ್ ನ ದ್ರಾವಿಡ್ ಖ್ಯಾತಿಯ ಸಚ್ಚೀಂದ್ರ ಶೆಟ್ಟಿ ಹಾಗೂ ಪ್ರಶಾಂತ್ ಶೆಟ್ಟಿಯವರ  ಸಾರಥ್ಯದಲ್ಲಿ ಜರುಗಲಿದೆ.
ಈ ಪಂದ್ಯಾಕೂಟದ ವೀಕ್ಷಕ ವಿವರಣೆಕಾರರಾಗಿ ರಾಜ್ಯದ ಶ್ರೇಷ್ಠ ವೀಕ್ಷಕ ವಿವರಣೆಕಾರರಾದ ಶಿವನಾರಾಯಣ್ ಐತಾಳ್ ಕೋಟ ಹಾಗೂ ಜ್ಯೂನಿಯರ್ ಟೋನಿ ಗ್ರೆಗ್ ಖ್ಯಾತಿಯ  ಅರವಿಂದ್ ಮಣಿಪಾಲ್ ನಿರ್ವಹಿಸಿದರೆ, ನಿರ್ಣಾಯಕರಾಗಿ ಕರ್ನಾಟಕದ ಬಿಲ್ಲಿ ಬೌಡನ್ ಖ್ಯಾತಿಯ ಡ್ಯಾನ್ಸಿಂಗ್ ಅಂಪಾಯರ್ ಮದನ್ ಮಡಿಕೇರಿ ನೇತೃತ್ವ ವಹಿಸಲಿದ್ದಾರೆ ಹಾಗೂ V4U ಚಾನೆಲ್ ನ ಮುಖಾಂತರ ದೇಶ ವಿದೇಶದೆಲ್ಲೆಡೆ ಪಂದ್ಯಾಕೂಟದ ನೇರ ಪ್ರಸಾರ ಬಿತ್ತರಿಸಲಾಗುವುದೆಂದು CACTA ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-ಆರ್.ಕೆ.ಆಚಾರ್ಯ ಕೋಟ