ಕಾರ್ಮಿಕರಿಗೆ ಊರಿಗೆ ತೆರಳಲು ರೈಲು ವ್ಯವಸ್ಥೆಯ ವದಂತಿ: ಕಾರ್ಮಿಕರಿಂದ ಪ್ರತಿಭಟನೆ
ಮಂಗಳೂರು: ಮಂಗಳೂರಿನಿಂದ ಉತ್ತರ ಭಾರತ ರಾಜ್ಯಗಳಿಗೆ ರೈಲಿನ ವ್ಯವಸ್ಥೆ ಮಾಡಲಾಗಿದೆ ಅಂತ ವದಂತಿ ಹಬ್ಬಿ ಸಾವಿರಾರು ವಲಸೆ ಕಾರ್ಮಿಕರು ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣ ಬಳಿ ಗುಂಪು ಸೇರಿ, ಪ್ರತಿಭಟನೆ ನಡೆಸಿ ಆತಂಕ ಸೃಷ್ಟಿಸಿದ ಘಟನೆ ಶುಕ್ರವಾರ ನಡೆಯಿತು. ಉತ್ತರ ಭಾರತದ ವಲಸೆ ಕಾರ್ಮಿಕರು ರೈಲು ಮೂಲಕ ತಮ್ಮನ್ನು ಊರಿಗೆ ಕಳುಹಿಸುತ್ತಾರೆ ಎನ್ನುವ ವದಂತಿ ನಂಬಿ ಬೆಳಗ್ಗೆನಿಂದಲೇ ರೈಲು ನಿಲ್ದಾಣದಲ್ಲಿ ಸೇರಿದ್ದರು. ಆದ್ರೆ ರೈಲೇ ಸಿಬ್ಬಂದಿ ಯಾವುದೇ ರೈಲ್ವೆ ವ್ಯವಸ್ಥೆ ಮಾಡಿಲ್ಲ ಎಂದು ಹೇಳಿ ಸೇರಿದ ವಲಸೆ […]
ಮಂಗಳೂರು: ತರಕಾರಿ-ದಿನಸಿ ಖರೀದಿಗೆ ಮುಗಿಬಿದ್ದ ಜನತೆ
ಮಂಗಳೂರು: ಕಳೆದ ಮೂರು ದಿನಗಳಿಂದ ಸಂಪೂರ್ಣ ಬಂದ್ ಆಗಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ದಿನಸಿ ಸಾಮಾಗ್ರಿಗಳ ಖರೀದಿಗೆ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 3ಗಂಟೆಯ ವರೆಗೆ ಅವಕಾಶ ನೀಡಲಾಗಿದ್ದು, ಈ ಹಿನ್ನಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಸಾಕಷ್ಟು ಸಂಖ್ಯೆಯಲ್ಲಿ ಜನತೆ ಹೊರ ಬಂದು ದಿನಸಿ, ತರಕಾರಿ ಖರೀದಿಸಿದ್ದಾರೆ. ವಿವಿಧ ಭಾಗಗಳ ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಂಡು ಕ್ಯೂ ನಿಂತು ಖರೀದಿ ಮಾಡುತ್ತಿದ್ದರು. ಮಾರುಕಟ್ಟೆ ಬಳಿ ಕ್ಯೂ ಗಾಗಿ ಚೇರ್ ವ್ಯವಸ್ಥೆಯನ್ನು ಮಂಗಳೂರು ಮಹಾನಗರ ಪಾಲಿಕೆ ಮಾಡಿಕೊಟ್ಟಿತ್ತು. […]
ದಿವ್ಯಾಂಗಚೇತನರ ಬೆಳವಣಿಗೆಗೆ ಇನ್ನಷ್ಟು ಕಾರ್ಯ ನಡೆಯಬೇಕು: ಸಿಂಧು ಬಿ. ರೂಪೇಶ್
ಮಂಗಳೂರು: ವಿಶ್ವ ವಿಕಲಚೇತನರ ದಿನಾಚರಣೆಯನ್ನು ಮಂಗಳೂರಿನ ಪುರಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಆಶ್ರಯದದಲ್ಲಿ ವಿಶೇಷವಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಸಿಂಧು ಬಿ.ರೂಪೇಶ್ ಉದ್ಘಾಟಿಸಿದರು. ಅನಂತರ ಮಾತನಾಡಿದ ಅವರು, ದಿವ್ಯಾಂಗ ಚೇತನರ ಬೆಳವಣಿಗೆಗಾಗಿ ಇನ್ನಷ್ಟೂ ಕಾರ್ಯಗಳು ನಡೆಯಬೇಕಿದೆ. ಅವರನ್ನು ಅರ್ಥ ಮಾಡಿಕೊಳ್ಳುವುದು, ಬೆಳವಣಿಗೆಗೆ ಪ್ರೋತ್ಸಾಹ ನೀಡುವುದು, ಹಾಗೂ ಜಾಗೃತಿ ಕಾರ್ಯದ ಮೂಲಕ ಹೆಚ್ಚಿನ ಅರಿವು ಹಾಗೂ ಅವಕಾಶವನ್ನು ನೀಡಬೇಕಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ದಿವ್ಯಾಂಗರನ್ನು ಹಾಗೂ ವಿಕಲಚೇತನರ ಅಭಿವೃದ್ಧಿಗೆ […]