ಸಂದೇಶಖಾಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಟಿಎಂಸಿ ನಾಯಕ ಶೇಖ್ ಷಹಜಹಾನ್ ಬಂಧನ
ಕೋಲ್ಕತ್ತಾ: ಸಂದೇಶಖಾಲಿ ಪ್ರಕರಣದ ಪ್ರಮುಖ ಆರೋಪಿ ತೃಣಮೂಲ ಕಾಂಗ್ರೆಸ್ ನಾಯಕ ಶೇಖ್ ಷಹಜಹಾನ್ ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶೇಖ್ ಷಹಜಹಾನ್ ಮತ್ತು ಆತನ ಸಹಚರರು ಸಂದೇಶಖಾಲಿಯಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಭೂಕಬಳಿಕೆಯ ಆರೋಪ ಹೊಂದಿದ್ದಾರೆ. ಉತ್ತರ 24 ಪರಗಣ ಜಿಲ್ಲೆಯಲ್ಲಿ ಶೇಖ್ ಷಹಜಹಾನ್ ನನ್ನು ಬಂಗಾಳದ ವಿಶೇಷ ಪೊಲೀಸ್ ತಂಡವು ಮಧ್ಯರಾತ್ರಿ ಬಂಧಿಸಿದೆ ಎಂದು ಮಾಧ್ಯಮ ವರದಿ ಹೇಳಿದೆ. ಈತ ಕಳೆದ 55 ದಿನಗಳಿಂದ ಪರಾರಿಯಾಗಿದ್ದ. ಬಂಧನದ ನಂತರ, ಈತನನ್ನು ಬಸಿರ್ಹತ್ […]
ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ: ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ ಕಲ್ಕತ್ತಾ ಹೈಕೋರ್ಟ್
ಕೋಲ್ಕತ್ತಾ: ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯ ಸಂದೇಶ್‌ಖಾಲಿ ಗ್ರಾಮದಲ್ಲಿ ಬಂದೂಕು ತೋರಿಸಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿರುವ ಮತ್ತು ಬುಡಕಟ್ಟು ಜನಾಂಗದವರ ಭೂಮಿಯನ್ನು ಗ್ರಾಮಸ್ಥರಿಂದ ಬಲವಂತವಾಗಿ ಕಸಿದುಕೊಳ್ಳಲಾಗುತ್ತಿರುವ್ ಆರೋಪದ ವರದಿಗಳನ್ನು ಗಂಭೀರವಾಗಿ ಪರಿಗಣಿಸಿರುವ ಕಲ್ಕತ್ತಾ ಹೈಕೋರ್ಟ್ ಮಂಗಳವಾರ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದೆ. ಪ.ಬಂಗಾಳದ ಸಂದೇಶಖಾಲಿಯಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರ ಮೇಲೆ ಬಂದೂಕು ತೋರಿಸಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಸುದ್ದಿ ವರದಿಗಳನ್ನು ಪರಿಶೀಲಿಸಿದ ನಂತರ “ತೀವ್ರವಾಗಿ ನಿರಾಶೆಗೊಂಡಿರುವುದಾಗಿ” ನ್ಯಾಯಮೂರ್ತಿ ಅಪೂರ್ವ ಸಿನ್ಹಾ ರೇ ಹೇಳಿದ್ದಾರೆ. […]
ಪ.ಬಂಗಾಳ, ಪಂಜಾಬ್ ನಲ್ಲಿ “ಕೈ” ಕಿರಿಕಿರಿ: ಏಕಾಂಗಿ ಸ್ಪರ್ಧೆಗೆ ಮಮತಾ ಬ್ಯಾನರ್ಜಿ, ಭಗವಂತ್ ಮಾನ್ ಒಲವು
ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಪ. ಬಂಗಾಳದ 42 ಲೋಕಸಭಾ ಸ್ಥಾನಗಳಿಗೆ ತನ್ನ ಸ್ವಂತ ಬಲದ ಮೇಲೆ ಚುನಾವಣೆಯನ್ನು ಎದುರಿಸಲಿದೆ ಮತ್ತು ಫಲಿತಾಂಶ ಪ್ರಕಟವಾದ ನಂತರವೇ ಕಾಂಗ್ರೆಸ್ ಜೊತೆ ಮೈತ್ರಿಯನ್ನು ಪರಿಗಣಿಸಲಿದೆ ಎಂದು ಉಗ್ರ ಮಮತಾ ಬ್ಯಾನರ್ಜಿ ಬುಧವಾರ ಘೋಷಿಸಿದ್ದಾರೆ. “ನಾನು ಕಾಂಗ್ರೆಸ್ ಜೊತೆ ಯಾವುದೇ ಚರ್ಚೆ ನಡೆಸಿಲ್ಲ. ಬಂಗಾಳದಲ್ಲಿ ನಾವು ಏಕಾಂಗಿಯಾಗಿ ಹೋರಾಡುತ್ತೇವೆ ಎಂದು ನಾನು ಯಾವಾಗಲೂ ಹೇಳುತ್ತೇನೆ. ನಾನು ಅವರಿಗೆ (ಕಾಂಗ್ರೆಸ್‌ಗೆ) ಹಲವು ಪ್ರಸ್ತಾವನೆಗಳನ್ನು ನೀಡಿದ್ದೆ. ಆದರೆ ಅವರು ತಿರಸ್ಕರಿಸಿದರು. (ಉಳಿದ) ದೇಶದಲ್ಲಿ ಏನು ಮಾಡಲಾಗುವುದು […]
ಮಮತಾ ಬ್ಯಾನರ್ಜಿಗೆ ಸಂಕಷ್ಟ: ಪಶ್ಚಿಮ ಬಂಗಾಳದ ಮೊಮಿನ್‌ಪುರ ಹಿಂಸಾಚಾರದ ತನಿಖೆ ಎನ್‌ಐಎ ತೆಕ್ಕೆಗೆ
ಕೋಲ್ಕತ್ತಾ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಸಂಕಷ್ಟ ಎದುರಾಗಿದ್ದು, ಕೇಂದ್ರ ಗೃಹ ಸಚಿವಾಲಯವು ಪಶ್ಚಿಮ ಬಂಗಾಳದ ಮೊಮಿನ್‌ಪುರ ಮತ್ತು ಅಕ್ಕ ಪಕ್ಕದಲ್ಲಿ ಅಕ್ಟೋಬರ್ 9 ರಂದು ನಡೆದ ಹಿಂಸಾಚಾರದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಿ ಆದೇಶಿಸಿದೆ. ರಾಜ್ಯ ಸರ್ಕಾರದಿಂದ ವರದಿ ಪಡೆದ ನಂತರ ಗೃಹ ಸಚಿವಾಲಯವು ಎನ್‌ಐಎ ತನಿಖೆಗೆ ಅನುಮೋದನೆ ನೀಡಿದೆ. ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಈ ಹಿಂದೆ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದು ರಾಜ್ಯದ ಹಿಂಸಾಚಾರ ಪೀಡಿತ […]
ಭಾರತದ ರಾಷ್ಟ್ರಪತಿ ಚುನಾವಣೆ: ಗೋಪಾಲಕೃಷ್ಣ ಗಾಂಧಿ, ಫಾರೂಕ್ ಅಬ್ದುಲ್ಲಾ ಹೆಸರು ಪ್ರಸ್ತಾಪಿಸಿದ ಮಮತಾ ಬ್ಯಾನರ್ಜಿ
ನವದೆಹಲಿ: ಜುಲೈ 18 ರಂದು ನಡೆಯುವ ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯನ್ನು ಚರ್ಚಿಸಲು 17 ಪಕ್ಷಗಳ ಜಂಟಿ ಪ್ರತಿಪಕ್ಷದ ಮೊದಲ ಸಭೆ ಬುಧವಾರ ಸಂಜೆ ಕೊನೆಗೊಂಡಿದ್ದು, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವಂತೆ ವಿನಂತಿಸಿದ್ದರೂ ಶರದ್ ಪವಾರ್ ಈ ಸ್ಪರ್ಧೆಯಿಂದ ಹಿಂದೆ ಸರಿದದ್ದರಿಂದ ಪ್ರತಿಪಕ್ಷ ನಾಯಕಿ ಮಮತಾ ಬ್ಯಾನರ್ಜಿ ಗೋಪಾಲ ಕೃಷ್ಣ ಗಾಂಧಿ ಮತ್ತು ಫಾರೂಕ್ ಅಬ್ದುಲ್ಲಾ ಹೆಸರನ್ನು ರಾಷ್ಟ್ರಪತಿ ಸ್ಥಾನಕ್ಕೆ ಅಭ್ಯರ್ಥಿಯಾಗಿ ಪ್ರಸ್ತಾಪಿಸಿದ್ದಾರೆ. ಅದಾಗ್ಯೂ, ಈ ಎರಡು ಹೆಸರುಗಳಲ್ಲಿ ಒಮ್ಮತದ […]