ಪ್ರತ್ಯೇಕ ಮೀನುಗಾರಿಕಾ ಸಚಿವಾಲಯ; ಅಮಿತ್ ಶಾಗೆ ಬೆಂಗಳೂರಿನಲ್ಲಿ ಸನ್ಮಾನ
ಉಡುಪಿ: ಮೀನುಗಾರರ ಬಹುದಶಕಗಳ ಬೇಡಿಕೆಯಾಗಿದ್ದ ಪತ್ಯೇಕ ಮೀನುಗಾರಿಕಾ ಸಚಿವಾಲಯದ ಮನವಿಗೆ ಸ್ಪಂದಿಸಿ ಈ ಬಾರಿ ಬಜೆಟ್ನಲ್ಲಿ ಘೋಷಿಸಿದ ಕೇಂದ್ರ ಸರಕಾರದ ಪರವಾಗಿ ಭಾರತೀಯಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ರವರನ್ನು ಅಖಿಲ ಭಾರತೀಯ ಮೀನುಗಾರರ ವೇದಿಕೆಯ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಅಖಿಲ ಭಾರತ ಮೀನುಗಾರರ ವೇದಿಕೆಯ ನೇತೃತ್ವದಲ್ಲಿಕೇಂದ್ರ ಸರಕಾರಕ್ಕೆ ಮೀನುಗಾರರ ವಿವಿಧ ಬೇಡಿಕೆಗಳ ಬಗ್ಗೆ ಸಲ್ಲಿಸಿದ್ದ ಮನವಿಗೆ ಸ್ಪಂದಿಸಿದ ಪ್ರಧಾನಿ ನರೇಂದ್ರ ಮೋದಿ ಈ ಬಾರಿಯ ಬಜೆಟ್ನಲ್ಲಿ ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯವನ್ನು ಘೋಷಿಸಿ 750 ಕೋಟಿಅನುದಾನವನ್ನು […]
ಏಳು ಮಂದಿ ಮೀನುಗಾರರ ನಾಪತ್ತೆ ಪ್ರಕರಣ: ಐಎನ್ ಎಸ್ ಕೊಚ್ಚಿ ಯುದ್ಧ ನೌಕೆಯಿಂದ ಸಮುದ್ರದ ತಳದಲ್ಲಿ ಶೋಧ
ಉಡುಪಿ: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ ಸುವರ್ಣ ತ್ರಿಭುಜ ಬೋಟ್ ಹಾಗೂ ಏಳು ಮಂದಿ ಮೀನುಗಾರರು ಕಣ್ಮರೆಯಾಗಿ 34 ದಿನಗಳು ಕಳೆದಿವೆ. ಈ ಹಿನ್ನೆಲೆಯಲ್ಲಿ ಮೀನುಗಾರರು ಯಾವುದೇ ಅವಘಡಕ್ಕೆ ತುತ್ತಾಗಿ ಸಮುದ್ರದೊಳಗೆ ಮುಳುಗಿರಬಹುದೆಂಬ ಸಂಶಯದ ಮೇರೆಗೆ ಭಾರತೀಯ ನೌಕಾ ಪಡೆ ತನ್ನ ಐಎನ್ಎಸ್ ಕೊಚ್ಚಿ ಎಂಬ ಯುದ್ಧ ನೌಕೆಯ ಮೂಲಕ ಸಮುದ್ರ ತಳಭಾಗದಲ್ಲಿ ಶೋಧಕಾರ್ಯ ಆರಂಭಿಸಿದೆ. ಮೀನುಗಾರಿಕೆಗೆ ತೆರಳಿದ ಸುವರ್ಣ ತ್ರಿಭುಜ ಬೋಟು ಮತ್ತು ಅದರಲ್ಲಿದ್ದ ಮಾಲೀಕ ಚಂದ್ರಶೇಖರ ಕೋಟ್ಯಾನ್ ಸೇರಿ 7 ಮಂದಿ ಮೀನುಗಾರರು ಡಿ.15ರಂದು ಮಧ್ಯರಾತ್ರಿ […]
ಒಂದು ತಿಂಗಳಾದರೂ ಮೀನುಗಾರರ ಯಾವುದೇ ಸುಳಿವು ಪತ್ತೆಯಾಗಿಲ್ಲ.
ಉಡುಪಿ: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ ಸುವರ್ಣ ತ್ರಿಭುಜ ಬೋಟ್ ಸಹಿತ ಏಳು ಮಂದಿ ಮೀನುಗಾರರ ಕಣ್ಮರೆಯಾಗಿರುವ ಸಂಬಂಧಿಸಿದಂತೆ ಕೇರಳಕ್ಕೆ ತೆರಳಿದ್ದ ಪೊಲೀಸ್ ಹಾಗೂ ಮೀನುಗಾರರ ತಂಡ ಯಾವುದೇ ಸುಳಿವು ಲಭ್ಯವಾಗದ ಹಿನ್ನೆಲೆಯಲ್ಲಿ ವಾಪಸ್ಸು ಬಂದಿದೆ. ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಲ್ಲಿ ಸಮುದ್ರಕ್ಕೆ ಹೊಂದಿಕೊಂಡಿರುವ ನದಿಗಳಲ್ಲಿ ನಡೆಸಲಾಗುತ್ತಿದ್ದ ಶೋಧಕಾರ್ಯವನ್ನೂ ಯಾವುದೇ ಮಾಹಿತಿ ಸಿಗದಿರುವ ಕಾರಣಕ್ಕಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಒಂದು ತಿಂಗಳಾದರೂ ಮೀನುಗಾರರ ಪತ್ತೆ ಇಲ್ಲ: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ […]
‘ಸುವರ್ಣ ತ್ರಿಭುಜ’ ಮೀನುಗಾರಿಕೆ ಬೋಟ್ ನಾಪತ್ತೆ ಪ್ರಕರಣ: 11 ದಿನ ಕಳೆದರೂ ಯಾವುದೇ ಸುಳಿವು ಸಿಕ್ಕಿಲ್ಲ
ಉಡುಪಿ: ಮಲ್ಪೆ ಬಂದರಿನಿಂದ ಬೋಟಿನ ಮಾಲೀಕರು ಸೇರಿದಂತೆ ಒಟ್ಟು ಏಳು ಮಂದಿ ಮೀನುಗಾರರೊಂದಿಗೆ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ‘ಸುವರ್ಣ ತ್ರಿಭುಜ’ ಮೀನುಗಾರಿಕಾ ಬೋಟ್ ನಾಪತ್ತೆಯಾಗಿ 11 ದಿನಗಳು ಕಳೆದರೂ ಯಾವುದೇ ಸುಳಿವು ದೊರೆತ್ತಿಲ್ಲ ಎಂದು ವಿವಿಧ ಮೂಲಗಳಿಂದ ತಿಳಿದುಬಂದಿದೆ. ಇದೀಗ ಬೋಟ್ ಪತ್ತೆಗಾಗಿ ಮಂಗಳೂರು, ಗೋವಾ ಹಾಗೂ ಮಹಾರಾಷ್ಟ್ರದ ಕೋಸ್ಟ್ ಗಾರ್ಡ್ ತನ್ನೆರಡು ಹೆಲಿಕಾಫ್ಟರ್ ಗಳೊಂದಿಗೆ ಗೋವಾ, ಮಹಾರಾಷ್ಟ್ರ ಹಾಗೂ ರತ್ನಗಿರಿಯ ಸಮುದ್ರದುದ್ದಕ್ಕೂ ಹುಡುಕಾಟ ನಡೆಸಿದೆ. ಇಂದು ನೌಕಾ ಪಡೆಯ ಹಡಗು ಹಾಗೂ ಸಿಬ್ಬಂದಿಗಳು […]