ಮಲ್ಪೆ : ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆ; 7 ಮಂದಿ ಮೀನುಗಾರರ ರಕ್ಷಣೆ
![](https://udupixpress.com/wp-content/uploads/2022/10/drowning.png)
ಮಲ್ಪೆ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಆಳಸಮುದ್ರ ದೋಣಿಯೊಂದು ಭಟ್ಕಳದ ನೇತ್ರಾಣಿ ಸಮೀಪದಲ್ಲಿ ಬಂಡೆಗೆ ಬಡಿದು ಮುಳುಗಡೆಗೊಂಡಿದೆ. ಅದರಲ್ಲಿದ್ದ 7 ಮಂದಿ ಮೀನುಗಾರರನ್ನು ಸಮೀಪದಲ್ಲಿದ್ದ ಬೋಟಿನವರು ರಕ್ಷಿಸಿದ್ದಾರೆ. ಉದ್ಯಾವರ ಸಂಪಿಗೆ ನಗರದ ರಾಹಿಲ್ ಅವರಿಗೆ ಸೇರಿದ ಸೀ ಬರ್ಡ್ ಬೋಟ್ ಮೇ 21ರಂದು ರಾತ್ರಿ ಮಲ್ಪೆ ಬಂದರಿನಿಂದ ತೆರಳಿತ್ತು. ಮೇ 22ರಂದು ಬೆಳಗ್ಗೆ ಭಟ್ಕಳ ನೇತ್ರಾಣಿ ಸಮೀಪ ಮೀನುಗಾರಿಕೆ ನಡೆಸುತ್ತಿರುವಾಗ ಗಾಳಿ-ಮಳೆ ಆರಂಭವಾಗಿದ್ದು, ಪರಿಣಾಮ ನಾವಿಕನ ನಿಯಂತ್ರಣ ತಪ್ಪಿ ಕಲ್ಲು ಬಂಡೆಗೆ ಬಡಿದಿದೆ. ಈ ವೇಳೆ ನೀರು ಒಳಗೆ […]
ಪೊಲೀಸ್ ಇಲಾಖೆ ನೇಮಕಾತಿ- ಮಾಹಿತಿ ಕಾರ್ಯಾಗಾರ
ಉಡುಪಿ, ಜೂನ್ 26: ಪೊಲೀಸ್ ಇಲಾಖೆಯ ವತಿಯಿಂದ ಜೂನ್ 27 ರಂದು ಬೆಳಗ್ಗೆ 9.30ಕ್ಕೆ ಮಲ್ಪೆ ಏಳೂರು ಮೊಗವೀರ ಸಭಾಭವನದ ಮತ್ಸ್ಯನಿಧಿ ಸಭಾಂಗಣದಲ್ಲಿ ಎಸ್.ಎಸ್.ಎಲ್.ಸಿ ಪಾಸಾಗಿರುವ ಕರಾವಳಿ ತೀರದ ಮೀನುಗಾರ ಯುವಕ ಹಾಗೂ ಯುವತಿಯರಿಗೆ ಪೊಲೀಸ್ ಇಲಾಖೆಗೆ ನೇಮಕಾತಿ ಕುರಿತು, ಕರ್ನಾಟಕ ಕೆ.ಎಸ್.ಆರ್.ಪಿ. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಭಾಸ್ಕರ ರಾವ್ ಮಾಹಿತಿ ಕಾರ್ಯಾಗಾರ ನಡೆಸಲಿದ್ದಾರೆ ಎಂದು ಮಲ್ಪೆ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ನೊಂದು ವಿಷ ಸೇವಿಸಿದ್ದ ಮೀನುಗಾರನ ಸಹೋದರ ಮೃತ್ಯು
![](https://udupixpress.com/wp-content/uploads/2019/05/download.jpg)
ಉಡುಪಿ: ಸುವರ್ಣ ತ್ರಿಭುಜ ಬೋಟ್ ಅವಘಡದಲ್ಲಿ ನಾಪತ್ತೆಯಾಗಿರುವ ಭಟ್ಕಳ ಬಂದರ್ ರೋಡ್ನ ಶನಿಯಾರ ತಿಮ್ಮಪ್ಪ ಮೊಗೇರ ಎಂಬವರ ಪುತ್ರ ರಮೇಶ್ ಮೊಗೇರರ ಚಿಂತೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿರುವ ಸಹೋದರ ಚಂದ್ರಶೇಖರ್ ಮೊಗೇರ (30) ಚಿಕಿತ್ಸೆ ಫಲಕಾರಿಯಾಗದೆ ಇದೀಗ ಮೃತಪಟ್ಟಿದ್ದಾರೆ. ಮಾರಕವಾದ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಚಂದ್ರಶೇಖರ್ 3 ದಿನಗಳ ಬಳಿಕ ವಿಷ ಸೇವನೆ ಬಗ್ಗೆ ನೆರೆಮನೆಯವರಲ್ಲಿ ಬಾಯಿಬಿಟ್ಟಿದ್ದರು. ವಿಷ ರಕ್ತದಲ್ಲಿ ಸೇರಿ ಲಿವರ್ಗೆ ಹಾನಿಯಾಗಿದೆ. ದೇಹದೊಳಗೆ ಅತಿಯಾದ […]
ಸುವರ್ಣ ತ್ರಿಭುಜ ಬೋಟ್ನಲ್ಲಿ ನಾಪತ್ತೆಯಾದ ರಮೇಶ್ ಸಹೋದರ ಆತ್ಮಹತ್ಯೆ ಗೆ ಯತ್ನ
![](https://udupixpress.com/wp-content/uploads/2019/05/download.jpg)
ಉಡುಪಿ: ಉಡುಪಿಯ ಸುವರ್ಣ ತ್ರಿಭುಜ ಬೋಟು ಅವಘಡದಲ್ಲಿ ನಾಪತ್ತೆಯಾಗಿದ್ದ ಭಟ್ಕಳದ ರಮೇಶ್ ಅವರ ಸಹೋದರ ಚಂದ್ರಶೇಖರ್ (30) ಅವರು ಅಣ್ಣನ ಚಿಂತೆಯಿಂದ ನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಚಂದ್ರಶೇಖರ್ ಚಿಂತಾಜನಕ ಸ್ಥಿತಿಯಲ್ಲಿದ್ದು, ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದು ಮಗನನ್ನು ಕಳೆದುಕೊಂಡು ದುಃಖದಲ್ಲಿರುವ ಕುಟುಂಬಕ್ಕೆ ಈ ಘಟನೆ ಆಘಾತ ಉಂಟು ಮಾಡಿದೆ. ಡಿ.13ರಂದು ಸುವರ್ಣ ತ್ರಿಭುಜ ಬೋಟಿನಲ್ಲಿ ಇತರರೊಂದಿಗೆ ಮೀನು ಗಾರಿಕೆಗೆ ತೆರಳಿದ್ದ ರಮೇಶ್ ನಾಪತ್ತೆಯಾಗಿದ್ದರು. ಈ […]
ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸಿ ಟೂರಿಸ್ಟ್ ಬೋಟ್ ಸ್ಥಗಿತ
![](https://udupixpress.com/wp-content/uploads/2019/05/st-mary-s-island.jpg)
ಉಡುಪಿ, ಮೇ 14: ಮಲ್ಪೆ ಬೀಚ್ನಿಂದ ಹಾಗೂ ಮಲ್ಪೆ ಬಂದರಿನಿಂದ ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರಯಾಣಿಸುವ ಬೋಟ್ಗಳಿಗೆ ಮತ್ತು ಮಲ್ಪೆ ಬೀಚ್ನಲ್ಲಿ ಜಲಕ್ರೀಡಾ ಚಟುವಟಿಕೆ ನಡೆಸುವ ಎಲ್ಲಾ ಪ್ರವಾಸಿ ಬೋಟ್ಗಳಿಗೆ ಪ್ರತಿ ವರ್ಷದಂತೆ ಮೇ 16 ರಿಂದ ಸೆಪ್ಟೆಂಬರ್ 15 ರ ವರೆಗೆ ಬೋಟ್ ಚಲಾಯಿಸಲು ಅನುಮತಿ ಇರುವುದಿಲ್ಲ ಎಂದು ಮಲ್ಪೆ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಹಾಗೂ ಉಡುಪಿ ನಗರಸಭೆ ಪೌರಾಯುಕ್ತ ಆನಂದ ಚಿ. ಕಲ್ಲೋಳಿಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.