ಮಾಲ್ಡೀವ್ಸ್‌ಗೆ ನೀಡುವ ಆರ್ಥಿಕ ಸಹಾಯ ಶೇಕಡಾ 22 ರಷ್ಟು ಕಡಿತ; ಲಕ್ಷದ್ವೀಪ ಅಭಿವೃದ್ದಿಯತ್ತ ಭಾರತ ಚಿತ್ತ
ನವದೆಹಲಿ: ಗುರುವಾರ ಸರ್ಕಾರ ಬಿಡುಗಡೆ ಮಾಡಿದ ಮಧ್ಯಂತರ ಬಜೆಟ್ ದಾಖಲೆಯ ಪ್ರಕಾರ, 2024-25 ರ ಆರ್ಥಿಕ ವರ್ಷಕ್ಕೆ ಮಾಲ್ಡೀವ್ಸ್‌ಗೆ ನೀಡುವ ಆರ್ಥಿಕ ಸಹಾಯವನ್ನು ಶೇಕಡಾ 22 ರಷ್ಟು ಕಡಿತಗೊಳಿಸಲು ಭಾರತ ಪ್ರಸ್ತಾಪಿಸಿದೆ. ಕಳೆದ ಕೆಲವು ವರ್ಷಗಳಿಂದ, ಭಾರತವು ಮಾಲ್ಡೀವ್ಸ್‌ಗೆ ಪ್ರಮುಖ ನೆರವು ಮತ್ತು ಸಹಾಯ ಪಾಲುದಾರನಾಗಿದೆ. ದ್ವೀಪ ರಾಷ್ಟ್ರಕ್ಕೆ ಭಾರತದ ನೆರವು ರಕ್ಷಣೆ, ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯದಂತಹ ಕ್ಷೇತ್ರಗಳನ್ನು ಒಳಗೊಂಡಿರುತ್ತದೆ. ಮಾಲ್ಡೀವ್ಸ್‌ಗೆ ಅಭಿವೃದ್ಧಿ ಸಹಾಯಕ್ಕಾಗಿ 600 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. 2023-24ರಲ್ಲಿ ಮಾಲ್ಡೀವ್ಸ್‌ಗೆ 770.90 ಕೋಟಿ […]