ಮಲ್ಲಪುರಂನಲ್ಲಿ ಬೋಟ್ ದುರಂತ: ಮಕ್ಕಳು ಸೇರಿದಂತೆ 22 ಜನ ಜಲಸಮಾಧಿ

ತಿರುವನಂತಪುರಂ: ಕೇರಳದ ಮಲಪ್ಪುರಂನ ತಾನೂರ್ ಪ್ರದೇಶದಲ್ಲಿ ಭಾನುವಾರ ಸಂಜೆ ಸುಮಾರು 40 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಹೌಸ್‌ಬೋಟ್ ನೀರಿನಲ್ಲಿ ಮುಳುಗಿದ್ದು ಕನಿಷ್ಠ 22 ಜನರು ಸಾವನ್ನಪ್ಪಿದ್ದು ಇದರಲ್ಲಿ ಹೆಚ್ಚಿನವರು ಮಕ್ಕಳು ಎಂದು ವರದಿಯಾಗಿದೆ. ಜಿಲ್ಲಾಡಳಿತದ ವರದಿಗಳ ಪ್ರಕಾರ, ಕನಿಷ್ಠ 22 ಜನರು ಸಾವನ್ನಪ್ಪಿದ್ದಾರೆ. ಸಚಿವ ವಿ ಅಬ್ದುರಹಿಮಾನ್ ಪ್ರಕಾರ, 7 ಜನರ ಸ್ಥಿತಿ ಗಂಭೀರವಾಗಿದೆ. ದೋಣಿಯಡಿ ಇನ್ನಷ್ಟು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಮಗುಚಿ ಬಿದ್ದ ದೋಣಿಯನ್ನು ದಡಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. Kerala: Rescue operation underway […]

42ರ ತಾಯಿ 24ರ ಮಗ; ಕೇರಳದ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಯಲ್ಲಿ ಪಾಸಾದ ಅಮ್ಮ-ಮಗ ಜೋಡಿಗೆ ಸೈ ಎಂದ ಜನ!!

ಮಲಪ್ಪುರಂ: ಪ್ರತಿ ವರ್ಷ ಪಬ್ಲಿಕ್ ಸರ್ವಿಸ್ ಕಮಿಷನ್ ನಲ್ಲಿ ತರಹೇವಾರಿ ಅರ್ಜಿದಾರರು ಪರೀಕ್ಷೆ ನೀಡಲು ಬರುತ್ತಿರುತ್ತಾರೆ. ಈ ಬಾರಿ ಅಮ್ಮ ಮಗನ ಅನನ್ಯ ಜೋಡಿಯೊಂದು ಪರೀಕ್ಷೆ ಬರೆದು ಪಾಸಾಗಿ ಸೈ ಎನಿಸಿಕೊಂಡಿದೆ. 42 ವರ್ಷದ ಬಿಂದು ಮತ್ತು 24 ವರ್ಷದ ವಿವೇಕ್ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಯನ್ನು ಒಟ್ಟಿಗೆ ಬರೆದು ಜತೆಯಾಗಿಯೆ ಪಾಸಾಗಿದ್ದಾರೆ. ಸಾಧನೆಯ ಬಗ್ಗೆ ಮಾತನಾಡಿದ ವಿವೇಕ್, ತಂದೆಯು ಎಲ್ಲಾ ಸೌಕರ್ಯಗಳನ್ನು ಕಲ್ಪಿಸಿದ್ದು, ತಾಯಿಯ ಸಹಾಯದಿಂದ ತಾನು ಇಲ್ಲಿಯವರೆಗೆ ಬರಲು ಸಾಧ್ಯವಾಯಿತು ಎಂದಿದ್ದಾರೆ. “ನಾವು ಕೋಚಿಂಗ್ […]