ಮೇಕ್ ಇನ್ ಇಂಡಿಯಾ ಯೋಜನೆಗೆ ರಷ್ಯಾ ಅಧ್ಯಕ್ಷರ ಶ್ಲಾಘನೆ: ಮೋದಿ ಸರಿಯಾದ ಕೆಲಸ ಮಾಡುತ್ತಿದ್ದಾರೆ ಎಂದ ಪುತಿನ್
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ವ್ಲಾಡಿವೋಸ್ಟಾಕ್‌ನಲ್ಲಿ ನಡೆದ 8ನೇ ಈಸ್ಟರ್ನ್ ಎಕನಾಮಿಕ್ ಫೋರಮ್ (EEF) ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೀತಿಗಳನ್ನು ಶ್ಲಾಘಿಸಿದರು. ಮೇಕ್ ಇನ್ ಇಂಡಿಯಾ ಕಾರ್ಯಕ್ರಮವನ್ನು ಉತ್ತೇಜಿಸುವಲ್ಲಿ ಪ್ರಧಾನಿ ಮೋದಿ “ಸರಿಯಾದ ಕೆಲಸ” ಮಾಡುತ್ತಿದ್ದಾರೆ ಎಂದು ಪುಟಿನ್ ಹೇಳಿದರು. 8 ನೇ ಇಇಎಫ್‌ನಲ್ಲಿ ಅವರ ಭಾಷಣದ ಸಮಯದಲ್ಲಿ, ಅವರು ದೇಶೀಯವಾಗಿ ಉತ್ಪಾದಿಸುವ ಆಟೋಮೊಬೈಲ್‌ಗಳನ್ನು ಬಳಸಿಕೊಳ್ಳುವ ಪ್ರಾಮುಖ್ಯತೆಯನ್ನು ಒತ್ತಿಹೇಳುವ ಮೂಲಕ ರಷ್ಯಾದ ನಿರ್ಮಿತ ಕಾರುಗಳ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ […]
ಭಾರತದ ಸರಕು ಮತ್ತು ಸೇವಾ ರಫ್ತು ಬೆಳವಣಿಗೆ ಶೇ.11.51ರಷ್ಟು ಏರಿಕೆ: ಅಂದಾಜು 61.18 ಬಿಲಿಯನ್ ಯುಎಸ್ ಡಾಲರ್ ವ್ಯಾಪಾರ
ನವದೆಹಲಿ: ಸರಕು ಮತ್ತು ಸೇವೆಗಳು ಸೇರಿದಂತೆ ದೇಶದ ಒಟ್ಟಾರೆ ರಫ್ತುಗಳು ಕಳೆದ ತಿಂಗಳು ಬೆಳವಣಿಗೆಯನ್ನು ದಾಖಲಿಸಿವೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ರಫ್ತುಗಳು ಶೇಕಡಾ 11.51 ರಷ್ಟು ಬೆಳವಣಿಗೆಯನ್ನು ಪದರ್ಶಿಸಿವೆ ಮತ್ತು 61.18 ಬಿಲಿಯನ್ ಯುಎಸ್ ಡಾಲರ್ ಇರಲಿದೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಒಟ್ಟಾರೆ ಆಮದುಗಳು ಶೇ 42.90 ರಷ್ಟು ಬೆಳವಣಿಗೆಯನ್ನು ಪ್ರದರ್ಶಿಸಿವೆ. ಕಳೆದ ತಿಂಗಳಲ್ಲಿ ದೇಶದ ಆಮದು 82.22 ಬಿಲಿಯನ್ ಯುಎಸ್ ಡಾಲರ್ ಎಂದು ಅಂದಾಜಿಸಲಾಗಿದೆ. ಕಳೆದ ಏಪ್ರಿಲ್-ಜುಲೈ […]