ಮುನಿಯಾಲು ಗೋಧಾಮದಲ್ಲಿ ತೆನೆ ತುಂಬಿ ತುಳುಕಾಡುತ್ತಿದೆ ಮೆಕ್ಕೆ ಜೋಳ: ಸಂಜೀವಿನಿ ಫಾರ್ಮ್ ನ ಅಪೂರ್ವ ಸಾಧನೆ
ಕಾರ್ಕಳ: ಹೆಬ್ರಿ ತಾಲೂಕಿನ ಮುನಿಯಾಲಿನಲ್ಲಿ ದೇಸೀ ತಳಿಗಳ ಅಭಿವೃದ್ದಿ ಕೇಂದ್ರ ಸಂಜೀವಿನಿ ಫಾರ್ಮ್ ಮತ್ತು ಡೈರಿಯ ಗೋಧಾಮದಲ್ಲಿ ತುಂಬಿ ತುಳುಕಿ ಬಳುಕಾಡುತ್ತಿದೆ ಮೆಕ್ಕೆಜೋಳ. ಮೂಲತಃ ಮಲೆನಾಡಿನಲ್ಲಿ ಬೆಳೆಯಲಾಗುವ ಮೆಕ್ಕೆ ಜೋಳವನ್ನು ಪಾರಂಪರಿಕ ಕ್ರಮದಲ್ಲಿ ಇದೇ ಮೊದಲ ಬಾರಿಗೆ ಮುನಿಯಾಲಿನಲ್ಲಿ ಬೆಳೆಯಲಾಗಿದೆ. ಗೋಧಾಮದ 6 ಎಕರೆ ಜಾಗದಲ್ಲಿ ದೇಸೀ ಗೋವುಗಳ ಸೆಗಣಿ ಗೊಬ್ಬರ, ಜೀವಾಮೃತ ಮತ್ತು ವರ್ಮಿ ಕಾಂಪೋಸ್ಟ್ ಬಳಸಿ ರಾಸಾಯನಿಕಗಳಿಲ್ಲದೆ ಸಾವಯವ ಮೆಕ್ಕೆ ಜೋಳವನ್ನು ಬೆಳೆದು ಸಂಜೀವಿನಿ ಫಾರ್ಮ್ಸ್ ಸೈ ಎನಿಸಿಕೊಂಡಿದೆ. ಜಾನುವಾರು ಸಾಕಣೆ ಮತ್ತು ಕೃಷಿಯಲ್ಲಿ […]