ಮಾಹೆ: ವೈದ್ಯಕೀಯ ಸಾಧನ ಸ್ಟಾರ್ಟ್ ಅಪ್ ಉತ್ಪಾದನಾ ಸೌಲಭ್ಯದ ಉದ್ಘಾಟನೆ

ಮಣಿಪಾಲ: ಬ್ಲ್ಯಾಕ್‌ಫ್ರಾಗ್ ಟೆಕ್ನಾಲಜೀಸ್ ಪ್ರೈ. ಲಿಮಿಟೆಡ್ ಮಣಿಪಾಲ ಮೂಲದ ರೋಗನಿರೋಧಕ ಪೂರೈಕೆ ಸರಪಳಿಗಳನ್ನು ಸುಧಾರಿಸಲು ಪೇಟೆಂಟ್ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಟೆಕ್ನಾಲಜಿ ಸ್ಟಾರ್ಟಪ್ ಕಂಪನಿಯಾಗಿದೆ. ಬ್ಲ್ಯಾಕ್‌ಫ್ರಾಗ್ ತನ್ನ ಲಸಿಕೆ ಸಾರಿಗೆ ವ್ಯವಸ್ಥೆಯನ್ನು ಭಾರತದ ನಾಲ್ಕೂ ಮೂಲೆಗಳಲ್ಲಿ ನಿಯೋಜಿಸಿದೆ. ಮತ್ತೀಗ ಸಾಗರೋತ್ತರ ಮಾರುಕಟ್ಟೆಗೆ ಲಸಿಕೆ ಸಾರಿಗೆ ವ್ಯವಸ್ಥೆಯನ್ನು ಪೂರೈಸಲು ಉತ್ಪಾದನೆಯನ್ನು ಮೇಲ್ಮಟ್ಟಕ್ಕೇರಿಸಲು ಸನ್ನದ್ಧವಾಗಿದೆ. ವೈದ್ಯಕೀಯ ಸಾಧನಗಳ ಐ.ಎಸ್.ಒ 13485 ಮಾನದಂಡಗಳಿಗೆ ಅನುಗುಣವಾಗಿ ಕಂಪನಿಯು ತನ್ನ ಉತ್ಪಾದನಾ ಘಟಕವನ್ನು ಸ್ಥಾಪಿಸಿದೆ. ತಿಂಗಳಿಗೆ 1500 ಯೂನಿಟ್‌ಗಳವರೆಗೆ ವಿತರಣಾ ಸಾಮರ್ಥ್ಯವನ್ನು ಈ ಘಟಕವು ಹೊಂದಿದೆ. […]

ಆರ್.ಸಿ.ಎಮ್.ಟಿ: ಮಕ್ಕಳ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲು ಹಣ ಸಂಗ್ರಹ

ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ (ಮಾಹೆ), ಮಣಿಪಾಲ ಸಹಯೋಗದೊಂದಿಗೆ ರೋಟರಿ ಕ್ಲಬ್ ಮಣಿಪಾಲ್ ಟೌನ್ (ಆರ್.ಸಿ.ಎಮ್.ಟಿ) ವತಿಯಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಬಡ ಮಕ್ಕಳಿಗೆ ಚಿಕಿತ್ಸೆ ನೀಡಲು ಹಣವನ್ನು ಸಂಗ್ರಹಿಸಲಾಗುತ್ತಿದೆ. ಆರ್.ಸಿ.ಎಮ್.ಟಿಯು ಮೇ 2022 ರಂದು ‘ಗೋಲ್ಡನ್ ಜುಬಿಲಿ’ ಸಭಾಂಗಣ, ಕೆನರಾ ಬ್ಯಾಂಕ್, ಮಣಿಪಾಲದಲ್ಲಿ “ಸಾಂಸ್ಕೃತಿಕ ಸವಾಲು- 2022” ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಸಾಂಪ್ರದಾಯಿಕ ಮತ್ತು ಜಾನಪದ-ನೃತ್ಯ ಶೀರ್ಷಿಕೆಗಾಗಿ ಹಲವಾರು ತಂಡಗಳು ಸ್ಪರ್ಧಿಸಲಿವೆ. ವಿಜೇತರಿಗೆ ಪ್ರಥಮ ಬಹುಮಾನ ರೂ. 1 ಲಕ್ಷ, 2ನೇ ಬಹುಮಾನ ರೂ. 60,000 […]

ಮಾಹೆ ವಿದ್ಯಾರ್ಥಿಗಳೊಂದಿಗೆ ಸಾಗರಿಕಾ ಘೋಷ್ ಸಂವಾದ

ಮಣಿಪಾಲ: “ನಮ್ಮ ಖಾಸಗಿ ಆಯ್ಕೆಯ ವಿಷಯಗಳಲ್ಲಿ ಯಾವುದೇ ಸರ್ಕಾರದ ಹಸ್ತಕ್ಷೇಪವನ್ನು ಪರಿಗಣಿಸದೆ ದೃಢವಾಗಿರುವ ಮೂಲಕ;ಸ್ವತಂತ್ರವಾಗಿ ಯೋಚಿಸಿ ಮತ್ತು ಕಾರ್ಯನಿರ್ವಹಿಸಿ” ಎಂದು ಖ್ಯಾತ ಲೇಖಕಿ-ಪತ್ರಕರ್ತೆ ಸಾಗರಿಕಾ ಘೋಷ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ವಿದ್ಯಾರ್ಥಿಗಳು ಏನನ್ನು ಧರಿಸಬೇಕು, ತಿನ್ನಬೇಕು, ಯೋಚಿಸಬೇಕು ಮತ್ತು ಹೇಗೆ ವರ್ತಿಸಬೇಕು ಹೀಗೆ ಅವರ ಅಗತ್ಯವನ್ನು ಸರ್ಕಾರ ನಿರ್ಧರಿಸಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದರು. ಶನಿವಾರ ಮಾಹೆಯ ಗಾಂಧೀಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್) ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ‘ವೈ ಐ ಆಮ್ […]

ಸೈಬರ್ ರೇಂಜ್ ಫಿಜಿಟಲ್ ಮತ್ತು ವರ್ಚುವಲ್ ಲ್ಯಾಬ್‌ ಗಾಗಿ ಐಸಾಕ್ ಜೊತೆ ಮಾಹೆ ಒಡಂಬಡಿಕೆ

ಉಡುಪಿ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ಮುಂದಿನ ಪೀಳಿಗೆಯ ಫಿಜಿಟಲ್ ಅನ್ನು ಸ್ಥಾಪಿಸಲು ಐ.ಎಸ್.ಎ.ಸಿ (ಐಸಾಕ್) ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ. ಕೌಶಲ್ಯ-ನಿರ್ಮಾಣ ಮತ್ತು ಭವಿಷ್ಯದ ಡಿಜಿಟಲ್ ಉದ್ಯೋಗಗಳನ್ನು ಹೆಚ್ಚಿಸಲು ಮಣಿಪಾಲದಲ್ಲಿ ವರ್ಚುವಲ್ ಸೈಬರ್ ಸೆಕ್ಯುರಿಟಿ ಲ್ಯಾಬ್‌ಗಳನ್ನು ಸೃಷ್ಟಿಸುವುದು ಈ ಒಪ್ಪಂದದ ಉದ್ದೇಶ. ದಕ್ಷಿಣ ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕರ್ನಾಟಕದ ಎರಡನೇ ಅತಿ ದೊಡ್ಡ ವ್ಯಾಪಾರ ಕೇಂದ್ರವಾದ ಮಂಗಳೂರಿನಲ್ಲಿ ಪ್ರಮುಖ ಬ್ಯಾಂಕ್ ಗಳು ಮತ್ತು ಸಾಫ್ಟ್ ವೇರ್ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ತಂತ್ರಜ್ಞಾನಾಧಾರಿತ ಯುಗದಲ್ಲಿ […]

ಮಾಹೆ ಮಣಿಪಾಲ: ಮಧುಮೇಹ ಪಾದದ ಆರೈಕೆ ಕಾರ್ಯಾಗಾರ ಉದ್ಘಾಟನೆ

  ಉಡುಪಿ: ಡಯಾಬಿಟಿಕ್ ಫೂಟ್ ಕೇರ್ & ರಿಸರ್ಚ್ ಸೆಂಟರ್, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮಣಿಪಾಲ ಸರ್ಜರಿ ಡಿಪಾರ್ಟ್ ಮೆಂಟ್, ಕಸ್ತೂರ್ಬಾ ಮೆಡಿಕಲ್ ಕಾಲೇಜ್, ಮಣಿಪಾಲ ಮತ್ತು ಇಂಡಿಯನ್ ಪೊಡಿಯಾಟ್ರಿ ಅಸೋಸಿಯೇಷನ್, ಕರ್ನಾಟಕ ಚಾಪ್ಟರ್ ಸಹಯೋಗದೊಂದಿಗೆ, ಏಪ್ರಿಲ್ 23 ರಂದು ಟಿ.ಎಮ್.ಎ ಪೈ ಸಭಾಂಗಣ ಮಾಹೆ ಮಣಿಪಾಲದಲ್ಲಿ, “ಅಪ್ ಡೇಟ್ ಆನ್ ಡಯಾಬೆಟಿಕ್ ಫೂಟ್ ಮಣಿಪಾಲ- 2022” ಎಂಬ ಮಧುಮೇಹ ಪಾದದ ಆರೈಕೆ ಕಾರ್ಯಾಗಾರದ ಉದ್ಘಾಟನೆ ನಡೆಯಿತು. ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ […]