ವೈದ್ಯಕೀಯ ಸಾಧನ ಉತ್ಪಾದನಾ ಘಟಕ ಆರಂಭ

ಮಣಿಪಾಲ: ಏಪ್ರಿಲ್ 29 ರಂದು ಮಣಿಪಾಲದಲ್ಲಿ ಬ್ಲ್ಯಾಕ್‌ಫ್ರಾಗ್ ಟೆಕ್ನಾಲಜೀಸ್‌ನ ವೈದ್ಯಕೀಯ ಸಾಧನ ಉತ್ಪಾದನಾ ಘಟಕವನ್ನು ಡಾ. ರಂಜನ್ ಪೈ, ಅಧ್ಯಕ್ಷರು, ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಗುಂಪು ಬೆಂಗಳೂರು, ಇವರು ಉದ್ಘಾಟಿಸಿದರು. ಬ್ಲ್ಯಾಕ್‌ಫ್ರಾಗ್ ಟೆಕ್ನಾಲಜೀಸ್ ಪ್ರೈ. ಲಿಮಿಟೆಡ್ ಮಣಿಪಾಲ ಮೂಲದ ಟೆಕ್ನಾಲಜಿ ಸ್ಟಾರ್ಟಪ್ ಆಗಿದ್ದು, ರೋಗನಿರೋಧಕ ಪೂರೈಕೆ ಸರಪಳಿಗಳನ್ನು ಸುಧಾರಿಸಲು ಪೇಟೆಂಟ್ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು ಇದರ ಉದ್ದೇಶವಾಗಿದೆ. 1500 ಯೂನಿಟ್ ಪ್ರತಿ ತಿಂಗಳ ಸಾಮರ್ಥ್ಯದ ವೈದ್ಯಕೀಯ ಸಾಧನ ಉತ್ಪಾದನಾ ಘಟಕವನ್ನು, ಇಬ್ಬರು ಇಂಜಿನಿಯರ್ ಗಳು ಪದವಿ ಪಡೆದ […]
ಮಾಹೆಯ ಡಾ. ರಘು ರಾಧಾಕೃಷ್ಣನ್ ಅವರಿಗೆ ಶೆಫೀಲ್ಡ್ ವಿಶ್ವವಿದ್ಯಾಲಯದ ಗೌರವ ಪ್ರಶಸ್ತಿ

ಮಣಿಪಾಲ: ಇಂಟರ್ ನ್ಯಾಶನಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ ಕೊಲಾಬೋರೇಷನ್ ನಿರ್ದೇಶಕ ಮತ್ತು ಓರಲ್ ಪೆಥಾಲಜಿಯ ಪ್ರೊಫೆಸರ್ ಡಾ. ರಘು ರಾಧಾಕೃಷ್ಣನ್ ಅವರಿಗೆ ಯುಕೆಯ ಶೆಫೀಲ್ಡ್ ವಿಶ್ವವಿದ್ಯಾಲಯದ ಅಧ್ಯಕ್ಷರು ಮತ್ತು ಉಪಕುಲಪತಿಗಳು, ಗೌರವ ಪ್ರಾಧ್ಯಾಪಕ ಬಿರುದು ನೀಡಿ ಗೌರವಿಸಿದ್ದಾರೆ. “ಎಪಿಜೆನೆಟಿಕ್ ಕಾರ್ಯವಿಧಾನಗಳಿಂದ ಹಾಕ್ಸ್ ಜೀನ್‌ಗಳ ಎಪಿಥೇಲಿಯಲ್ ರಿಪ್ರೊಗ್ರಾಮಿಂಗ್ ಮತ್ತು ಬಾಯಿಯ ಕ್ಯಾನ್ಸರ್‌ಗೆ ಅದರ ಪರಿಣಾಮಗಳು” ಈ ಕೆಲಸಕ್ಕಾಗಿ ಪ್ರತಿಷ್ಠಿತ ವೆಲ್‌ಕಮ್ ಟ್ರಸ್ಟ್ ಡಿಬಿಟಿ ಇಂಡಿಯಾ ಅಲೈಯನ್ಸ್ ಫೆಲೋಶಿಪ್ ಗೂ ಕೂಡಾ ಡಾ. ರಘು ಭಾಜನರಾಗಿದ್ದಾರೆ. ವೆಲ್ಕಮ್ ಟ್ರಸ್ಟ್ ಡಿಬಿಟಿ […]
ನಾವೀನ್ಯತೆ ಮತ್ತು ಉದ್ಯಮಶೀಲತೆಯ ಗುರಿಗಳು- ನಾಯಕತ್ವ ಸರಣಿ

ಮಣಿಪಾಲ: 30 ಏಪ್ರಿಲ್ ಶನಿವಾರದಂದು ಮಣಿಪಾಲ್ ಸ್ಕೂಲ್ ಆಫ್ ಲೈಫ್ ಸೈನ್ಸಸ್, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮತ್ತು ಬಯೋನೆಸ್ಟ್ ಮಣಿಪಾಲ,ಕರ್ನಾಟಕ ಸರಕಾರದ ಬಯೋಇನ್‌ಕ್ಯುಬೇಟರ್ ಜಂಟಿ ಆಶ್ರಯದಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತೆಯ ಗುರಿಗಳು ನಾಯಕತ್ವ ಸರಣಿಯನ್ನು ಆಯೋಜಿಸಲಾಗಿತ್ತು. ಎಂಟರ್ ಪ್ರೂನರ್ಶಿಪ್ ಡೆವೆಲಪ್ಮೆಂಟ್, ಬಿ.ಐ.ಆರ್.ಎ.ಸಿ, ಡಿಬಿಟಿ, ನವದೆಹಲಿ ಇದರ ಡಿಜಿಎಮ್ ಮತ್ತು ಮುಖ್ಯಸ್ಥ-ಡಾ. ಮನೀಶ್ ದಿವಾನ್ ಮುಖ್ಯ ಅತಿಥಿಯಾಗಿ ಸಮಾರಂಭದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಜೈವಿಕ ತಂತ್ರಜ್ಞಾನ ಉದ್ಯಮ ಸಂಶೋಧನೆ ಸಹಾಯ ಮಂಡಳಿ, ಭಾರತ ಸರಕಾರದ […]
ಆಕ್ಸೆಸ್‌ಲೈಫ್ ಮಾಹೆ ಮಣಿಪಾಲ ಕೇಂದ್ರ (ಹೋಮ್ ಆವೇ ಫ್ರಮ್ ಹೋಮ್) ಉದ್ಘಾಟನೆ

ಮಣಿಪಾಲ: ಕಸ್ತೂರ್ಬಾ ವೈದ್ಯಕೀಯ ಕಾಲೇಜು, ಮಣಿಪಾಲ ಮತ್ತು ಕಸ್ತೂರ್ಬಾ ಆಸ್ಪತ್ರೆ, ಮಾಹೆ ಮಣಿಪಾಲದ ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೊಲಾಜಿ ವಿಭಾಗದ ಸಹಯೋಗದೊಂದಿಗೆ ಆಕ್ಸೆಸ್‌ಲೈಫ್ ಮಾಹೆ ಮಣಿಪಾಲ ಕೇಂದ್ರವನ್ನು (ಕ್ಯಾನ್ಸರ್ ಪೀಡಿತ ಮಕ್ಕಳು ಮತ್ತು ಅವರ ಆರೈಕೆದಾರರಿಗಾಗಿ ಹೋಮ್ ಆವೇ ಫ್ರಮ್ ಹೋಮ್) ಇಂದು ಉದ್ಘಾಟಿಸಲಾಯಿತು. ಇದು ಕ್ಯಾನ್ಸರ್ ಇರುವ ಮಕ್ಕಳಿಗೆ ಮತ್ತು ಅವರ ಆರೈಕೆ ಮಾಡುವವರಿಗೆ ಉಚಿತವಾಗಿ ವಸತಿ, ಪೌಷ್ಟಿಕ ಆಹಾರ, ಸಮಾಲೋಚನೆ ಮತ್ತು ಶೈಕ್ಷಣಿಕ ಸಹಾಯ ಸೇವೆಗಳನ್ನು ಒದಗಿಸುತ್ತದೆ. ಇದು ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, […]
ಮಣಿಪಾಲದಲ್ಲಿ ವಿಶ್ವದರ್ಜೆಯ ಬಯೋನೆಸ್ಟ್ ಇನ್ಕ್ಯುಬೇಶನ್ ಸೌಲಭ್ಯ ಉದ್ಘಾಟನೆ

ಮಣಿಪಾಲ: ಬಯೋಟೆಕ್ನಾಲಜಿ ಇಲಾಖೆಯ ಬಯೋಟೆಕ್ನಾಲಜಿ ಇಂಡಸ್ಟ್ರಿ ರಿಸರ್ಚ್ ಅಸಿಸ್ಟೆನ್ಸ್ ಕೌನ್ಸಿಲ್ (BIRAC) ಬೆಂಬಲಿತ ಬಯೋನೆಸ್ಟ್ ಸೌಲಭ್ಯ- ಕರ್ನಾಟಕ ಸರ್ಕಾರ ಬಯೋಇನ್‌ಕ್ಯುಬೇಟರ್ (ಮಣಿಪಾಲದ ತಂತ್ರಜ್ಞಾನ ವ್ಯಾಪಾರ ಇನ್ಕ್ಯುಬೇಟರ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮಣಿಪಾಲ) ಇದನ್ನು ಶನಿವಾರದಂದು ಮಣಿಪಾಲದಲ್ಲಿ ಉದ್ಘಾಟಿಸಲಾಯಿತು. ಬೆಂಗಳೂರಿನ ಮಣಿಪಾಲ ಶಿಕ್ಷಣ ಸಂಸ್ಥೆ ಮತ್ತು ಮೆಡಿಕಲ್ ಗ್ರೂಪ್ ಅಧ್ಯಕ್ಷ ಡಾ. ರಂಜನ್ ಆರ್ ಪೈ, ಡಾ. ಮನೀಶ್ ದಿವಾನ್, ಡಿಜಿಎಮ್ ಮತ್ತು ಮುಖ್ಯಸ್ಥ- ಸ್ಟ್ರಾಟಜಿ ಪಾರ್ಟನರ್ ಶಿಪ್ ಮತ್ತು ಎಂಟರ್ ಪ್ರೂನರ್ ಶಿಪ್ ಡೆವೆಲಪ್ ಮೆಂಟ್, […]