ಮಣಿಪಾಲ್ ಅಕಾಡೆಮಿಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ನಲ್ಲಿ ಪ್ರವೇಶಾತಿ

ಮಣಿಪಾಲ: ಮಣಿಪಾಲ್ ಅಕಾಡೆಮಿಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್) ನಲ್ಲಿ ಮೂರು ರೀತಿಯ ವಿಭಾಗಗಳಿಗೆ ಪ್ರವೇಶವನ್ನು ಘೋಷಿಸಲಾಗಿದೆ. ಪರಿಸರ ವಿಜ್ಞಾನದ ಸೌಂದರ್ಯಶಾಸ್ತ್ರದಲ್ಲಿ ಎಂಎ, ಕಲೆ ಮತ್ತು ಶಾಂತಿ ಅಧ್ಯಯನದಲ್ಲಿ ಎಂಎ ಮತ್ತು ಸೌಂದರ್ಯಶಾಸ್ತ್ರ ಮತ್ತು ಶಾಂತಿ ಅಧ್ಯಯನದಲ್ಲಿ ಬಿಎ. ತರಗತಿಗಳಿಗೆ ಪ್ರವೇಶಾತಿ ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ ಪ್ರೊ ವರದೇಶ್ ಹಿರೇಗಂಗೆ, ನಿರ್ದೇಶಕರು, ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ದೂರವಾಣಿ […]
ಮಾಹೆ: ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಿಗೆ ಡೋಪಿಂಗ್ ಕುರಿತು ಕಾರ್ಯಾಗಾರ

ಮಣಿಪಾಲ: ರಾಷ್ಟ್ರೀಯ ಶೈಕ್ಷಣಿಕ ನೀತಿ (NEP) 2020 ರ ಅನುಷ್ಠಾನದ ಭಾಗವಾಗಿ, ಕ್ರೀಡೆ ಮತ್ತು ಶಿಕ್ಷಣವನ್ನು ಹತ್ತಿರ ತರಲು, ಮಾಹೆಯ ಸೆಂಟರ್ ಫಾರ್ ಫಾರ್ಮಾಸ್ಯುಟಿಕಲ್ ಸ್ಕಿಲ್ ಡೆವಲಪ್ ಮೆಂಟ್ ಉಡುಪಿಯ ಎಲ್ಲಾ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರಿಗೆ ಅರ್ಧ ದಿನದ ಡೋಪಿಂಗ್ ಕಾರ್ಯಾಗಾರವನ್ನು ಆಯೋಜಿಸಿತ್ತು. ಕ್ರೀಡೆಯಲ್ಲಿ ಮಾದಕ ದ್ರವ್ಯ ಬಳಕೆಯ ಬಗ್ಗೆ ಶಿಕ್ಷಕರ ದೃಷ್ಟಿಕೋನ ಮತ್ತು ಮಾದಕ ದ್ರವ್ಯ ಸೇವನೆಯಿಂದ ಕ್ರೀಡಾಪಟುಗಳ ಜೀವನದ ಮೇಲಾಗುವ ಪರಿಣಾಮ ಇದು ಕಾರ್ಯಗಾರದ ಧ್ಯೇಯವಾಗಿತ್ತು. ಮಾಹೆಯ ಉಪಕುಲಪತಿ ಲೆಫ್ಟಿನೆಂಟ್ ಜನರಲ್ ಡಾ.ಎಂ. […]
ಮಾಹೆ: ಗಾಂಧಿಯನ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್‌ನ ವಾರ್ಷಿಕೋತ್ಸವ ಸಮಾರಂಭ

ಮಣಿಪಾಲ: ಮುಂಬರುವ ದಿನಗಳಲ್ಲಿ ವಿಜ್ಞಾನ ಮತ್ತು ಕಲೆಗಳ ಸಮ್ಮಿಲನದಿಂದ ಶಿಕ್ಷಣವು ಹೆಚ್ಚು ಹೆಚ್ಚು ಅಂತರಶಿಸ್ತಿಯವಾಗಲಿದೆ ಎಂದು ಮಾಹೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಡಾ.ಎಚ್.ವಿನೋದ್ ಭಟ್ ಹೇಳಿದರು. ಮಾಹೆಯ ಗಾಂಧಿಯನ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್‌ನ ವಾರ್ಷಿಕೋತ್ಸವ ‘ಸರ್ವೋದಯ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಕ್ತ ಕಲೆ ಮತ್ತು ಸಮಾಜಶಾಸ್ತ್ರೀಯ ವಿಷಯಗಳು ಮುಂದಿನ ದಿನಗಳಲ್ಲಿ ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣದಲ್ಲೂ ಹೆಚ್ಚಿನ ಮಹತ್ವವನ್ನು ಕಂಡುಕೊಳ್ಳಲಿದೆ. ಇಂತಹ ಸನ್ನಿವೇಶದಲ್ಲಿ ಮಾಹೆಯ ಜಿಸಿಪಿಎಎಸ್ ಒದಗಿಸುತ್ತಿರುವ ಕೋರ್ಸ್‌ಗಳು ಬಹಳಷ್ಟು ಮಹತ್ವವನ್ನು ಪಡೆಯುತ್ತವೆ ಮತ್ತು ವಿಶ್ವವಿದ್ಯಾನಿಲಯವು ಇಂತಹ […]
ಶಾಲಾ ಆರೋಗ್ಯ ಕಾರ್ಯಕ್ರಮ: ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ ನಡುವೆ ಒಪ್ಪಂದ

ಮಣಿಪಾಲ: ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ ಮತ್ತು ಉಡುಪಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ನಡುವೆ ಜೂನ್ 2 ರಂದು ಶಾಲಾ ಆರೋಗ್ಯ ಕಾರ್ಯಕ್ರಮದಡಿ ಉಡುಪಿಯ ಮಕ್ಕಳಿಗೆ ಗುಣಮಟ್ಟದ ವೈದ್ಯಕೀಯ ಸೇವೆಗಾಗಿ ತಿಳಿವಳಿಕಾ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಸಮಗ್ರ ಶಿಕ್ಷಣ ಕರ್ನಾಟಕ ಇದರ ಅಡಿಯಲ್ಲಿ ವಿಶೇಷ ಅಗತ್ಯವಿರುವ ಮಕ್ಕಳಿಗಾಗಿ ಉಡುಪಿಯ ಸಿಟಿ ಬಸ್ ನಿಲ್ದಾಣದ ಬಳಿಯಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಲಾಗಿರುವ ತರಬೇತಿ ಕೇಂದ್ರದ ಸರ್ವತೋಮುಖ ಸುಧಾರಣೆಯನ್ನು ಕೈಗೊಳ್ಳಲು ಬಯಸಿದ್ದು, ಮಣಿಪಾಲ ಕಾಲೇಜ್ ಆಫ್ ಹೆಲ್ತ್ […]
ಆರ್ಟ್ ವಿತ್ ಆಸರೆ: ಆಸರೆಯ ವಿಶೇಷ ಮಕ್ಕಳಿಗಾಗಿ ಸಂಗೀತ ಮತ್ತು ನೃತ್ಯ ಕಾರ್ಯಕ್ರಮ

ಮಣಿಪಾಲ: ಅರ್ಚನಾ ಟ್ರಸ್ಟ್ ಮತ್ತು ಮಾಹೆಯ ಜಂಟಿ ಸಹಯೋಗದೊಂದಿಗೆ ‘ಆರ್ಟ್ ವಿತ್ ಆಸರೆ’, ಆಸರೆಯ ವಿಶೇಷ ಮಕ್ಕಳಿಗಾಗಿ ಸಂಗೀತ ಮತ್ತು ನೃತ್ಯದ ವಿಶೇಷ ಕಾರ್ಯಕ್ರಮವನ್ನು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಇಲ್ಲಿ ಇತ್ತೀಚೆಗೆ ನಡೆಸಲಾಯಿತು. ಗಾಂಧಿಯನ್ ಸೆಂಟರಿನ ವಿದ್ಯಾರ್ಥಿಗಳು ಆಸರೆಯ ವಿಶೇಷ ಚೇತನ ವಿದ್ಯಾರ್ಥಿಗಳನ್ನು ಗುಂಪು ಹಾಡು, ಗುಂಪು ನೃತ್ಯ ಮತ್ತು ವಿವಿಧ ಆಟಗಳ ಮೂಲಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಎಂಎ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಜೂಡಿ, ಮರಿಯಮ್, ಶ್ರಾವ್ಯ, ರಮ್ಯಾ, ಶ್ರೀಕೃಷ್ಣ […]