ಮಣಿಪಾಲ: ಅರ್ಚನಾ ಟ್ರಸ್ಟ್ ಮತ್ತು ಮಾಹೆಯ ಜಂಟಿ ಸಹಯೋಗದೊಂದಿಗೆ ‘ಆರ್ಟ್ ವಿತ್ ಆಸರೆ’, ಆಸರೆಯ ವಿಶೇಷ ಮಕ್ಕಳಿಗಾಗಿ ಸಂಗೀತ ಮತ್ತು ನೃತ್ಯದ ವಿಶೇಷ ಕಾರ್ಯಕ್ರಮವನ್ನು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಇಲ್ಲಿ ಇತ್ತೀಚೆಗೆ ನಡೆಸಲಾಯಿತು.
ಗಾಂಧಿಯನ್ ಸೆಂಟರಿನ ವಿದ್ಯಾರ್ಥಿಗಳು ಆಸರೆಯ ವಿಶೇಷ ಚೇತನ ವಿದ್ಯಾರ್ಥಿಗಳನ್ನು ಗುಂಪು ಹಾಡು, ಗುಂಪು ನೃತ್ಯ ಮತ್ತು ವಿವಿಧ ಆಟಗಳ ಮೂಲಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಎಂಎ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಜೂಡಿ, ಮರಿಯಮ್, ಶ್ರಾವ್ಯ, ರಮ್ಯಾ, ಶ್ರೀಕೃಷ್ಣ ಮತ್ತು ಟ್ರಿಫಾನೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಆಸರೆ ಕೆಲಸದಿಂದ ಪ್ರೇರಿತರಾದ ಶೈಕ್ಷಣಿಕ ಮನಶ್ಶಾಸ್ತ್ರಜ್ಞ, ಪ್ರೊ.ಟಿ.ಕೆ. ಹಿರೇಗಂಗೆ 1 ಲಕ್ಷ ರೂ.ಗಳ ಚೆಕ್ ನೀಡಿ ಆಸರೆಯ ಕೆಲಸಗಳನ್ನು ಪ್ರೋತ್ಸಾಹಿಸಿದರು.
ಮಾಹೆ, ಸಾಮಾನ್ಯ ಸೇವಾ ನಿರ್ದೇಶಕ ಕರ್ನಲ್ ಪ್ರಕಾಶ್ ಚಂದ್ರ, ಆಸರೆ ಅಧ್ಯಕ್ಷ ಕೆ.ಎಸ್. ಜೈ ವಿಟ್ಟಲ್, ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ವಿದ್ಯಾರ್ಥಿಗಳ ಪ್ರಯತ್ನವನ್ನು ಶ್ಲಾಘಿಸಿದರು.