ಕೋಟ: ಮಧುವನ ವಿವೇಕಾನಂದ ಹಿ.ಪ್ರಾ. ಶಾಲೆಯಲ್ಲಿ ಮಕ್ಕಳ ಹಬ್ಬ ಆಚರಣೆ
ಕೋಟ: ವಿವೇಕಾನಂದ ಹಿ.ಪ್ರಾ.ಶಾಲೆ ಮಧುವನ – ಅಚ್ಲಾಡಿ ಇಲ್ಲಿನ ಶಾಲಾ ವಾರ್ಷಿಕೋತ್ಸವ “ಮಕ್ಕಳ ಹಬ್ಬ” ಡಿ. 26 ರಂದು ಶಾಲಾ ವಠಾರದಲ್ಲಿ ಜರಗಿತು. ಉದ್ಯಮಿ ಬನ್ನಾಡಿ ದಿನಕರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವ ಜನಾಂಗವು ಮುಂದಿನ ಭವಿಷ್ಯದ ಭರವಸೆಯಾಗಿದೆ. ಆದ್ದರಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಭವಿಷ್ಯ ಉಜ್ವಲಗೊಳಿಸಿ ಎಂದರು. ಮುಂಬೈ ಉದ್ಯಮಿ, ಹೋಟೆಲ್ ಮಾಲೀಕರ ಸಂಘದ ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ ಅಚ್ಲಾಡಿ ಮಾತನಾಡಿ, ಜೀವನದಲ್ಲಿ ಕಷ್ಟ ಪಟ್ಟು ದುಡಿದರೆ ಯಶಸ್ಸು ಸಾಧ್ಯ. ನಾವೆಲ್ಲ ಬದುಕಲ್ಲಿ […]