ಆ ಕಪ್ಪು ಸುಂದರಿ, ನನ್ನ ಬಾಳಿಗೆ ಬಿಳುಪು ತಂದಳು..
ಅವಳು ಎಂದರೆ ನನಗೆ ಏನೋ ಸಂತೋಷ, ಹುರುಪು ಉತ್ಸಾಹ ಎಲ್ಲವೂ. ಒಬ್ಬರ ಬಾಳಿನಲ್ಲಿ ತನ್ನ ಸಂಗಾತಿ ಬಂದರೆ ಮಾತ್ರ ಜೀವನ ಪಾವನವಾಗಲು ಸಾಧ್ಯ ಅಲ್ಲವೇ. ಹೌದು! ಇದು ಅಕ್ಷರಶಃ ಸತ್ಯ. ಹೀಗೆ ನಾನು ಸಹ ನನ್ನ ಸಂಗಾತಿಯನ್ನು ಹುಡುಕುವ ಭರದಲ್ಲಿದ್ದೆ. ಈ ಪಯಣ ಪ್ರಾರಂಭವಾದದ್ದು ಪದವಿ ಜೀವನದಲ್ಲಿ. ಆ ವಯಸ್ಸೇ ಹಾಗೆ ಅದು ಜೀವನದಲ್ಲಿ ಮರೆಯಲಾಗದ ಕಾಲಘಟ್ಟ. ಆಗ ವಯಸ್ಸು ಅರಳುತ್ತಿರುವ ಗುಲಾಬಿಯಂತೆ ಅದರದೇ ಆದ ಛಾಪನ್ನು ಮೂಡಿಸುತ್ತದೆ. ಈ ವಯಸ್ಸಿನಲ್ಲಿ ತನ್ನ ಸಂಗಾತಿಯನ್ನು ಹುಡುಕುವ ಹಂಬಲ […]