ಎರಡು ದಶಕಗಳಿಂದ ಹರಕುಮುರುಕು ಗುಡಿಸಲಿನಲ್ಲಿಯೇ ಬದುಕು; ಮಲ್ಪೆಯ ಈ ಬಡಕುಟುಂಬಕ್ಕೆ ಬೇಕಿದೆ ನೆರವಿನ ಹಸ್ತ.!

ಉಡುಪಿ: ಕಳೆದ 20 ವರ್ಷಗಳಿಂದಲೂ ಈ ಬಡದಂಪತಿಗಳಿಗೆ ಮಡಲಿನ ಗುಡಿಸಲೇ ಅರಮನೆಯಾಗಿದೆ. ಚಳಿ, ಗಾಳಿ, ಮಳೆಯನ್ನೂ ಲೆಕ್ಕಿಸದೇ ಹರಕುಮುರುಕು ಗುಡಿಸಲಿನಲ್ಲಿ ಬದುಕು ಸವೆಸುತ್ತಿರುವ ಈ ಕುಟುಂಬದ ಸ್ಥಿತಿ ದಾರುಣವಾಗಿದೆ. ಇಂದೋ‌ ನಾಳೆಯೋ ಬೀಳುವ ಸ್ಥಿತಿಯಲ್ಲಿರುವ ಗುಡಿಸಲು, ಮರಳು ಮಣ್ಣಿನ ನೆಲದಲ್ಲಿ ಬದುಕು, ತುಂಡು ತುಂಡಾದ ಟರ್ಪಲೇ ರಕ್ಷಣೆ. ಇದು ಮಲ್ಪೆ ತೊಟ್ಟಂನ ಬಡದಂಪತಿಗಳ ಕರುಣಾಜನಕ ಸ್ಥಿತಿ. ಹೌದು, ಮಲ್ಪೆ ತೊಟ್ಟಂ ಪಡುಕೆರೆ ಶಾಂತಿ ನಗರದ ನಿವಾಸಿಗಳಾದ ಸದಾನಂದ ಮತ್ತು ಜಲಜ ಎಂಬುವವರ ಮನೆಯು ತೀವ್ರ ದುಸ್ಥಿತಿಯಲ್ಲಿದೆ. ಇವರು […]