ಬನ್ನಾಡಿ ದಿ. ಪದ್ದು ಆಚಾರ್ ಸ್ಮರಣಾರ್ಥ ಉಚಿತ ನೋಟ್ಸ್ ಪುಸ್ತಕ, ಸಮವಸ್ತ್ರ ಹಾಗೂ ವಿಶೇಷ ಚೇತನರಿಗೆ ಸಹಾಯಧನ ವಿತರಣೆ
![](https://udupixpress.com/wp-content/uploads/2022/07/paddu2.png)
ಕುಂದಾಪುರ: ಬನ್ನಾಡಿ ದಿ.ಪದ್ದು ಆಚಾರ್ ಸ್ಮರಣಾರ್ಥ ಮಕ್ಕಳಾದ ಬಿ.ನಾರಾಯಣ ಆಚಾರ್(ಒ.ಎನ್.ಜಿ.ಸಿ ನಿವೃತ್ತ) ಮತ್ತು ಶ್ರೀದೇವಿ ಜ್ಯುವೆಲ್ಲರ್ಸ್ ಕೋಟ-ಸಾಲಿಗ್ರಾಮ ಮಾಲೀಕರಾದ ಸೀತಾರಾಮ ಆಚಾರ್ ಬನ್ನಾಡಿ ಇವರಿಂದ ಪರಮಹಂಸ ಖಾ.ಹಿ.ಪ್ರಾ ಶಾಲೆಯ ಎಲ್ಲ ಮಕ್ಕಳಿಗೆ ಉಚಿತ ನೋಟ್ಸ್ ಪುಸ್ತಕ, ಲೇಖನ ಸಾಮಗ್ರಿಗಳು ಹಾಗೂ ಸಮವಸ್ತ್ರಗಳನ್ನು ವಿತರಿಸಲಾಯಿತು. ಇದರೊಂದಿಗೆ ದಿ.ಪದ್ದು ಆಚಾರ್ ಸ್ಮರಣಾರ್ಥ ಆರೋಗ್ಯ ಉಪಕೇಂದ್ರ ವಡ್ಡರ್ಸೆ ಇವರಿಗೆ ಔಷಧಿ ಮತ್ತು ವಿಶೇಷ ಚೇತನರಿಗೆ ಧನಸಹಾಯ ವಿತರಣಾ ಕಾರ್ಯಕ್ರಮ ಶುಕ್ರವಾರ ಬೆಳಿಗ್ಗೆ ಬನ್ನಾಡಿಯಲ್ಲಿ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಲಯನ್ಸ್ ಕ್ಲಬ್ […]
ಮಲ್ಪೆ: ಮೇ 8 ರಂದು ಜಿಲ್ಲಾಮಟ್ಟದ ತುಳುನಾಡ ಗೊಬ್ಬುಲು- ತುಳುನಾಡ ಪರಿಕರಗಳ ಪ್ರದರ್ಶನ, ಆಹಾರ ಮೇಳ
![](https://udupixpress.com/wp-content/uploads/2022/05/tulunadu.png)
ಮಲ್ಪೆ: ತುಳುಕೂಟ ಉಡುಪಿ, ಅಂತಾರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ ಜಿಲ್ಲೆ 318 ಸಿ, ಲಯನ್ಸ್ ಆ್ಯಂಡ್ ಲಿಯೋ ಕ್ಲಬ್ ಉಡುಪಿ- ಇಂದ್ರಾಳಿ ಇದರ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ತುಳುನಾಡ ಗೊಬ್ಬುಲು-2022 ತುಳುನಾಡ ಸಂಗೀತ ಮತ್ತು ನೃತ್ಯ ಪ್ರದರ್ಶನವು ಮೇ 8 ರಂದು ಬೆಳಗ್ಗೆ 9 ಗಂಟೆಗೆ ಮಲ್ಪೆ ಕಡಲ ಕಿನಾರೆಯಲ್ಲಿ ನಡೆಯಲಿದೆ ಎಂದು ತುಳುಕೂಟ ಉಡುಪಿ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ. ಮಂಗಳವಾರ ನಗರದ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ […]
ಲಯನ್ಸ್ ಕ್ಲಬ್ ಹಿರಿಯಡ್ಕ ಪ್ರಾಂತೀಯ ಅಧ್ಯಕ್ಷ, ಮೊದಲ ಮತ್ತು ದ್ವಿತೀಯ ಉಪ ಗವರ್ನರ್ ಗಳ ಭೇಟಿ
![](https://udupixpress.com/wp-content/uploads/2022/04/IMG_20220425_101224.jpg)
ಉಡುಪಿ: ಆದಿತ್ಯವಾರದಂದು ಲಯನ್ಸ್ ಕ್ಲಬ್ ಹಿರಿಯಡ್ಕದಲ್ಲಿ ಲಯನ್ಸ್ ಪ್ರಾಂತೀಯ ಅಧ್ಯಕ್ಷ ಶಂಕರ್ ಶೆಟ್ಟಿ ಮತ್ತು ಮೊದಲ ಉಪ ಗವರ್ನರ್ ಎಮ್ ಕೆ ಭಟ್ ಮತ್ತು ದ್ವಿತೀಯ ಉಪ ಗವರ್ನರ್ ಡಾ. ನೇರಿ ಕರ್ನಿಲೀಯೋ ಭೇಟಿ ನೀಡಿ ಕ್ಲಬ್ ನ ಕಾರ್ಯ ಚಟುವಟಿಕೆಗಳ ಬಗ್ಗೆ ಹರ್ಷ ವ್ಯಕ್ತ ಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್ ನ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಡ್ದಮ್ ವಹಿಸಿದ್ದರು. ಹಿರಿಯಡ್ಕದ ನಾರಾಯಣಗುರು ಸಭಾಂಗಣದಲ್ಲಿ ಕಾರ್ಯಕ್ರಮವು ಸರಳ ರೀತಿಯಲ್ಲಿ ಜರುಗಿತು. ಸದಸ್ಯರಾದ ವಸಂತ್ ಶೆಟ್ಟಿ ಪ್ರಸಕ್ತ […]